Sanatan Mobile Stall at Mahakumbh : ಮಹಾಕುಂಭಮೇಳದಲ್ಲಿ ಸನಾತನದ ’ಸಂಚಾರಿ ವಿತರಣಾ ಕಕ್ಷೆ’ಯಿಂದ ಭಕ್ತರಲ್ಲಿ ಧರ್ಮಪ್ರಸಾರ !

  • ಮಹಾಕುಂಭಮೇಳದಲ್ಲಿ ಸನಾತನ ಸಂಸ್ಥೆಯ ಹೊಸ ಪ್ರಚಾರ

  • ಪ್ರತಿಯೊಂದು ಕಕ್ಷೆಗೆ ನಿಯಮಿತವಾಗಿ ೫೦೦ ಕ್ಕೂ ಹೆಚ್ಚು ಜಿಜ್ಞಾಸುಗಳ ಭೇಟಿ

ಪ್ರಯಾಗರಾಜ, ಜನವರಿ ೨೪ (ಸುದ್ಧಿ.) – ಮಹಾಕುಂಭಮೇಳದಲ್ಲಿ ಹಿಂದೂ ಧರ್ಮದ ಪ್ರಸಾರ ಮಾಡುತ್ತಿರುವ ಸನಾತನದ ’ಮೊಬೈಲ್ ಸ್ಟಾಲ್’, ಅಂದರೆ ಸನಾತನದ ’ತಿರುಗಾಡುವ ಗ್ರಂಥ ಮತ್ತು ಉತ್ಪನ್ನ ವಿತರಣಾ ಕಕ್ಷೆ’ ಇದು ಹಿಂದೂ ಧರ್ಮದ ಪ್ರಚಾರಕ್ಕೆ ಪರಿಣಾಮಕಾರಿ ಮಾಧ್ಯಮವಾಗಿದೆ. ಮಹಾಕುಂಭಮೇಳದಲ್ಲಿ ಅಂತಹ ೭ ’ಮೊಬೈಲ್ ಸ್ಟಾಲ್’ಗಳ ಮೂಲಕ ಪ್ರಚಾರವನ್ನು ಮಾಡಲಾಗುತ್ತಿದೆ. ಈ ಎಲ್ಲಾ ಕಕ್ಷೆಗಳಿಗೆ ಸಾವಿರಾರು ಜಿಜ್ಞಾಸುಗಳು ಮತ್ತು ಭಕ್ತರು ನಿಯಮಿತವಾಗಿ ಭೇಟಿ ನೀಡುತ್ತಾರೆ. ಸತತ ೧೧ ಗಂಟೆಗಳ ಕಾಲ ಹಿಂದೂ ಧರ್ಮ ಪ್ರಚಾರ ಮಾಡುವ ’ಮೊಬೈಲ್ ಸ್ಟಾಲ್‌ಗಳು’ ಬಹಳ ಪರಿಣಾಮಕಾರಿ ಎಂದು ಸಾಬೀತಾಗುತ್ತಿವೆ.

ಮಹಾಕುಂಭಮೇಳದಲ್ಲಿ ಕಾಳಿ ಮಾರ್ಗ, ತ್ರಿವೇಣಿ ಮಾರ್ಗ, ಮೋರಿ-ಶಂಕರಾಚಾರ್ಯ ಮಾರ್ಗ ಚೌಕ್, ಓಲ್ಡ್ ಜಿಟಿ ಮಾರ್ಗ, ನಾಗವಾಸುಕಿ ಮಾರ್ಗ ಮತ್ತು ಬಜರಂಗದಾಸ ಮಾರ್ಗದಲ್ಲಿ ೨ ಸೇರಿದಂತೆ ೭ ಸ್ಥಳಗಳಲ್ಲಿ ಮೊಬೈಲ್ ಸ್ಟಾಲ್‌ಗಳು ಇದೆ. ಈ ಪ್ರತಿಯೊಂದು ಕಕ್ಷೆಗೆ ೫೦೦ ಕ್ಕೂ ಹೆಚ್ಚು ಜಿಜ್ಞಾಸುಗಳು ನಿಯಮಿತವಾಗಿ ಭೇಟಿ ನೀಡುತ್ತಾರೆ. ಪ್ರತಿ ಕಕ್ಷೆಯಲ್ಲಿ ಕೇವಲ ೩ ವ್ಯಕ್ತಿ ಇರುವಷ್ಟು ಕಡಿಮೆ ಮನುಷ್ಯಬಲದಲ್ಲಿ ಈ ಕಕ್ಷೆಯಿಂದ ಇಡೀ ದಿನ ಧರ್ಮಪ್ರಸಾರ ಮಾಡಲಾಗುತ್ತಿದೆ.

ಹೀಗಿದೆ ‘ಮೊಬೈಲ್ ಸ್ಟಾಲ್’ನ ಸ್ವರೂಪ !

೧ ದೊಡ್ಡ ಮೇಜು ಮತ್ತು ೩-೪ ಕುರ್ಚಿಗಳು ಇಷ್ಟೇ ಈ ಮೊಬೈಲ್ ಸ್ಟಾಲ್‌ನ ಸ್ವರೂಪ. ’ಮೊಬೈಲ್ ಸ್ಟಾಲ್’ಗಳಲ್ಲಿ ಸನಾತನದ ಸಾಧನೆ, ರಾಷ್ಟ್ರ-ಧರ್ಮದ ವಿಷಯ, ಆಯುರ್ವೇದ, ಹಿಂದೂ ಸಂಸ್ಕೃತಿಯ ಆಚರಣೆ, ಧಾರ್ಮಿಕ ಕೃತಿಗಳು, ಹಿಂದೂ ಧರ್ಮದಲ್ಲಿನ ವ್ರತ-ವೈಕಲ್ಯಗಳು, ಬಾಲಸಂಸ್ಕಾರ, ಸ್ವಭಾಷಾಭಿಮಾನ ಮುಂತಾದವುಗಳು ಹಿಂದಿ, ಇಂಗ್ಲಿಷ್, ಕನ್ನಡ, ಮರಾಠಿ ಹೀಗೆ ೧೩ ಭಾಷೆಗಳಲ್ಲಿ ವಿವಿಧ ವಿಷಯಗಳ ಕುರಿತು ೩೬೬ ಗ್ರಂಥಗಳು ಈ ಕಕ್ಷೆಯಲ್ಲಿ ಲಭ್ಯವಿದೆ. ಇದರ ಜೊತೆಗೆ, ಈ ಕಕ್ಷೆಗಳು ಕುಂಕುಮ, ಅತ್ತರ, ಉಠಣೆ, ಊದುಬತ್ತಿ, ಅಷ್ಟಗಂಧ, ಬತ್ತಿ, ಸಾಬೂನುಗಳು ಮುಂತಾದ ಶುದ್ಧ ಸ್ವದೇಶಿ ಸಾತ್ವಿಕ ಉತ್ಪನ್ನಗಳು ಸಹ ಇದೆ. ಒಂದು ಟೇಬಲ್, ಆಸನ ಮತ್ತು ಮೆಗಾ ಫೋನ್ ಎಂಬ ಕೆಲವೇ ವಸ್ತುಗಳಿಂದ ತಯಾರಿಸಲಾದ ಈ ’ಮೊಬೈಲ್ ಸ್ಟಾಲ್’ಗಳಿಗೆ ಭಕ್ತರಿಂದ ಅಗಾಧ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಬೆಳಿಗ್ಗೆ ೯.೩೦ ರಿಂದ ರಾತ್ರಿ ೮.೩೦ ರವರೆಗೆ ಸತತ ೧೧ ಗಂಟೆಗಳ ಕಾಲ ಮೊಬೈಲ್ ಸ್ಟಾಲ್‌ಗಳ ಮೂಲಕ ಧರ್ಮ, ಆಧ್ಯಾತ್ಮ, ರಾಷ್ಟ್ರ ಮತ್ತು ಧರ್ಮದ ಪರಿಣಾಮಕಾರಿ ಪ್ರಚಾರವನ್ನು ನಡೆಸಲಾಗುತ್ತಿದೆ.

’ಸನಾತನ ಪ್ರಭಾತ’ ದಿನಪತ್ರಿಕೆಯ ಪ್ರತಿನಿಧಿಯೊಬ್ಬರು ಸನಾತನದ ಕೆಲವು ’ಮೊಬೈಲ್ ಸ್ಟಾಲ್’ಗಳಿಗೆ ಭೇಟಿ ನೀಡಿ ಅವರೊಂದಿಗೆ ಸಂವಾದ ನಡೆಸಿದರು. ಆಸಮಯದಲ್ಲಿ, ಅನೇಕ ಜಿಜ್ಞಾಸುಗಳು ಗ್ರಂಥಗಳನ್ನು ಖರೀದಿಸಿ ತಮ್ಮ ಸಂಬಂಧಿಕರು ಮತ್ತು ಸ್ನೇಹಿತರನ್ನು ಮತ್ತೆ ’ಮೊಬೈಲ್ ಸ್ಟಾಲ್’ಗೆ ಕರೆತರುತ್ತಿದ್ದಾರೆ. “ಜಿಜ್ಞಾಸುಗಳು ಕಕ್ಷೆಗೆ ಬರಬೇಕೆಂದು ಮೆಗಾಫೋನ್ ಮೂಲಕ ಅವರನ್ನು ನಾವು ಆಹ್ವಾನಿಸುತ್ತೇವೆ. ಖರೀದಿಸಿದ ನಂತರ, ಅನೇಕ ಜಿಜ್ಞಾಸುಗಳು ತಮ್ಮ ವಿಳಾಸಗಳನ್ನು ನೀಡುತ್ತಾರೆ, ಇದರಿಂದಾಗಿ ಗ್ರಂಥಗಳು ಮತ್ತು ಸಾತ್ವಿಕ ಉತ್ಪನ್ನಗಳು ಅವರಿರುವ ರಾಜ್ಯದಲ್ಲಿ ಸ್ಥಳೀಯ ಸ್ತರದಲ್ಲಿ ಸಿಗಲು ಸ್ವತಃ ವಿಳಾಸವನ್ನು ನೀಡುತ್ತಿದ್ದಾರೆ. ಅನೇಕ ಜಿಜ್ಞಾಸುಗಳು ’ಮೊಬೈಲ್ ಸ್ಟಾಲ್’ಗಳಿಗೆ ಬಂದು ಸನಾತನದ ಕಾರ್ಯದಲ್ಲಿ ಸಹಭಾಗಿಯಾಗುವ ಇಚ್ಛೆಯನ್ನು ವ್ಯಕ್ತಪಡಿಸುತ್ತಾರೆ ಎಂದು ’ಸ್ಟಾಲ್’ಗಳಲ್ಲಿ ಸೇವೆ ಮಾಡುತ್ತಿರುವ ಸಾಧಕರು ಹೇಳಿದರು.