ವಿದೇಶಾಂಗ ಸಚಿವ ಡಾ. ಎಸ್. ಜಯಶಂಕರ ಅವರು ಭಾರತದ ನಿಲುವನ್ನು ಸ್ಪಷ್ಟಪಡಿಸಿದರುಅಮೇರಿಕಾ ಅಕ್ರಮವಾಗಿ ವಾಸಿಸುತ್ತಿರುವ 18 ಸಾವಿರ ಭಾರತೀಯರನ್ನು ಗಡೀಪಾರು ಮಾಡಲಿದೆ |

ವಾಷಿಂಗ್ಟನ್ (ಅಮೇರಿಕ) – ನಮ್ಮ ನಾಗರಿಕರು ಇಲ್ಲಿ (ಅಮೇರಿಕ) ಅಕ್ರಮವಾಗಿ ವಾಸಿಸುತ್ತಿದ್ದರೆ ಮತ್ತು ಅವರು ನಮ್ಮ ನಾಗರಿಕರು ಎಂದು ದೃಢಪಟ್ಟರೆ, ಅವರನ್ನು ಮರಳಿ ಸ್ವೀಕರಿಸಲು ನಾವು ಯಾವಾಗಲೂ ಸಿದ್ಧರಿದ್ದೇವೆ ಎಂದು ಭಾರತದ ವಿದೇಶಾಂಗ ಸಚಿವ ಡಾ. ಎಸ್. ಜಯಶಂಕರ ಇವರು ಇಲ್ಲಿನ ಪತ್ರಿಕಾಗೋಷ್ಠಿಯಲ್ಲಿ ನಿಲುವನ್ನು ಮಂಡಿಸಿದರು. ಡೊನಾಲ್ಡ್ ಟ್ರಂಪ್ ಅಮೇರಿಕದ ಅಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸಿದ ನಂತರ, ಅಮೇರಿಕದಲ್ಲಿ ಅಕ್ರಮವಾಗಿ ವಾಸಿಸುತ್ತಿರುವವರನ್ನು ಗಡೀಪಾರು ಮಾಡುವುದಾಗಿ ಘೋಷಿಸಿದರು. ಅಮೇರಿಕದಲ್ಲಿ ಪ್ರಸ್ತುತ 18 ಸಾವಿರ ಭಾರತೀಯರು ಅಕ್ರಮವಾಗಿ ವಾಸಿಸುತ್ತಿದ್ದಾರೆ ಎಂದು ಹೇಳಲಾಗಿದೆ. ಈ ಕುರಿತು ವಿದೇಶಾಂಗ ಸಚಿವ ಡಾ. ಜಯಶಂಕರ್ ಅವರು ಭಾರತದ ನಿಲುವನ್ನು ಮಂಡಿಸಿದರು. ಡಾ. ಜಯಶಂಕರ ಅವರು ಅಮೇರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ಅವರೊಂದಿಗೆ ಈ ಕುರಿತು ಚರ್ಚಿಸಿದ್ದಾರೆ. ಡಾ. ಜಯಶಂಕರ ಅವರು ಟ್ರಂಪ್ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಭಾಗವಹಿಸಲು ಬಂದಿದ್ದರು. ಅವರು ಭಾರತದ ಪ್ರಧಾನಿ ನರೇಂದ್ರ ಮೋದಿಯವರ ಪತ್ರವನ್ನು ಟ್ರಂಪ್‌ಗೆ ಹಸ್ತಾಂತರಿಸಿದರು.
ಡಾ. ಜಯಶಂಕರ ಅವರು, ಅಕ್ರಮ ವಲಸೆಯನ್ನು ಭಾರತ ಬಲವಾಗಿ ವಿರೋಧಿಸುತ್ತದೆ. ಇದು ದೇಶದ ಪ್ರತಿಷ್ಠೆಗೆ ಒಳ್ಳೆಯದಲ್ಲ ಎಂದು ಹೇಳಿದರು.
ಬಾಂಗ್ಲಾದೇಶದ ಬಗ್ಗೆ ಚರ್ಚೆ

ಡಾ. ಜಯಶಂಕರ ಮಾತನಾಡಿ, ಬಾಂಗ್ಲಾದೇಶದ ವಿಷಯದ ಕುರಿತು ಅಮೇರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ಮತ್ತು ರಾಷ್ಟ್ರೀಯ ಭದ್ರತಾ ಸಲಹೆಗಾರ ಮೈಕ್ ವಾಲ್ಟ್ಜ್ ಅವರೊಂದಿಗೆ ಸಂಕ್ಷಿಪ್ತವಾಗಿ ಚರ್ಚೆ ನಡೆಸಿರುವುದಾಗಿ ಹೇಳಿದರು. ಅಮೇರಿಕದಲ್ಲಿರುವ ಭಾರತೀಯ ರಾಯಭಾರಿ ಕಚೇರಿಯ ಮೇಲಿನ ದಾಳಿಯ ಬಗ್ಗೆ ಯಾವುದೇ ಚರ್ಚೆ ನಡೆದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು. ಅವರು ಮಾತನಾಡಿ, “ನಾನು ಈ ಸಮಯದಲ್ಲಿ ಈ ವಿಷಯವನ್ನು ಮಂಡಿಸಲಿಲ್ಲ;” ಆದರೆ ಸ್ಯಾನ್ ಫ್ರಾನ್ಸಿಸ್ಕೋದಲ್ಲಿರುವ ನಮ್ಮ ರಾಯಭಾರಿ ಕಚೇರಿಯ ಮೇಲಿನ ದಾಳಿ ಬಹಳ ಗಂಭೀರ ಘಟನೆ ಎಂದು ನನ್ನ ಸ್ಪಷ್ಟ ಅಭಿಪ್ರಾಯವಾಗಿದೆ. ಈ ಪ್ರಕರಣದಲ್ಲಿ ಭಾಗಿಯಾಗಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ನಾವು ಭಾವಿಸುತ್ತೇವೆ ಎಂದು ಹೇಳಿದರು.
‘Ready to take back the 18,000 Indians living illegally in the United States.’ – External Affairs Minister Dr. S. Jaishankar.
The U.S. deports those living illegally in its country, on the contrary, India legitimises illegal occupants such as the Bangladeshi infiltrators and… pic.twitter.com/MO7AaJk8YM
— Sanatan Prabhat (@SanatanPrabhat) January 23, 2025
ಸಂಪಾದಕೀಯ ನಿಲುವುಅಮೇರಿಕಾ ತನ್ನ ದೇಶದಲ್ಲಿ ಅಕ್ರಮವಾಗಿ ವಾಸಿಸುವವರನ್ನು ಹೊರಹಾಕುತ್ತದೆ, ಆದರೆ ಭಾರತವು ರಾಜಕೀಯ ಲಾಭಕ್ಕಾಗಿ ಬಾಂಗ್ಲಾದೇಶಿ ನುಸುಳುಕೋರರು ಮತ್ತು ರೋಹಿಂಗ್ಯಾಗಳಿಗೆ ಎಲ್ಲಾ ರೀತಿಯ ದಾಖಲೆಗಳು, ಉದ್ಯೋಗಗಳು, ವ್ಯವಹಾರಗಳು ಮತ್ತು ಮನೆಗಳನ್ನು ನೀಡುತ್ತದೆ. ಅಷ್ಟೇ ಅಲ್ಲದೇ ಅವರಿಗೆ ಅಪರಾಧಗಳನ್ನು ಮಾಡಲು ಸ್ವಾತಂತ್ರ್ಯವನ್ನೂ ನೀಡುತ್ತದೆ ! |
Singapore Blocks Anti-India Content: ಭಾರತೀಯರನ್ನು ಅಪಖ್ಯಾತಿಗೊಳಿಸುವ ಚೀನಿ ನಾಗರಿಕರ ಆನ್ ಲೈನ್ ಅಭಿಯಾನವನ್ನು ಬಯಲಿಗೆಳೆದ ಸಿಂಗಾಪುರ ಸರಕಾರ
ಭಾರತದಲ್ಲಿ ಕುಸಿಯುತ್ತಿರುವ ಪ್ರಜನನ ದರದ ಕುರಿತು ಇಲಾನ್ ಮಸ್ಕ್ ಕಳವಳ
ಅಮೆರಿಕದಲ್ಲಿ ಅಪರಿಚಿತರಿಂದ ಭಾರತೀಯ ಯುವಕನ ಗುಂಡಿಕ್ಕಿ ಕೊಲೆ
ಟ್ರಂಪ್ ಸರಕಾರದ ಮೇಲೆ ಇಸ್ರೇಲ್ ಬೇಹುಗಾರಿಕೆ ಮಾಡುತ್ತಿದೆ! – ಅಮೆರಿಕ
ಅಂಡಮಾನ್ ನ ‘ಶಾಲೋ ಆಫ್ಶೋರ್ ಬ್ಲಾಕ್’ನಲ್ಲಿ ಎರಡನೇ ಅತಿ ದೊಡ್ಡ ನೈಸರ್ಗಿಕ ಅನಿಲದ ನಿಕ್ಷೇಪ ಪತ್ತೆ
ಅಮೆರಿಕದ ‘ಬ್ಲೂಮ್ ಬರ್ಗ್’ ಸುದ್ದಿ ಸಂಸ್ಥೆಯು ತನ್ನ ಭಾರತ ವಿರೋಧಿ ಲೇಖನ ಹಿಂಪಡೆಯಿತು!