ಪ್ರಯಾಗರಾಜ ಕುಂಭ ಮೇಳ 2025
ಇಂಡೋನೇಷ್ಯಾದ ‘ಧರ್ಮ ಸ್ಥಾಪನ ಪ್ರತಿಷ್ಠಾನ’ದ ಸದಸ್ಯರಿಂದ ಮಹಾಕುಂಭದಲ್ಲಿ ನಡೆದ ಸನಾತನ ಗ್ರಂಥ ಪ್ರದರ್ಶನಕ್ಕೆ ಸದ್ಭಾವನಾ ಭೇಟಿ !

ಪ್ರಯಾಗರಾಜ್, ಜನವರಿ 16 (ಸುದ್ದಿ.) – ಸನಾತನ ಸಂಸ್ಕೃತಿ ಪ್ರದರ್ಶನ ಅಂದರೆ ಸಮುದ್ರ ಮಂಥನದ ಹೊಸ ರೂಪವಾಗಿದೆ. ಸಮುದ್ರಮಂಥನ ಎಂಬುದು ಸನಾತನ ಸಂಸ್ಥೆಯು ವೈಜ್ಞಾನಿಕ ಮತ್ತು ಶಾಸ್ತ್ರೀಯ ವ್ಯಾಖ್ಯಾನಗಳನ್ನು ಸಂಶೋಧಿಸುತ್ತದೆ ಮತ್ತು ಧಾರ್ಮಿಕ ಆಚರಣೆಯ ಪ್ರತಿಯೊಂದು ಕೃತಿಯ ಹಿಂದಿನ ಕಾರಣಗಳನ್ನು ತಿಳಿಸುತ್ತದೆ. ಈ ಕಾರಣಕ್ಕಾಗಿ, ನಾನು ಇದನ್ನು ‘ಸಮುದ್ರಮಂಥನ’ ಎಂದು ಕರೆದಿದ್ದೇನೆ ಎಂದು ಬಾಲಿ (ಇಂಡೋನೇಷ್ಯಾ)ದಲ್ಲಿರುವ ‘ಧರ್ಮ ಸಂಸ್ಥಾಪನಂ ಫೌಂಡೇಶನ್’ದ ಅಧ್ಯಕ್ಷ ಡಾ. ಧರ್ಮ ಯಶ ಇವರು ಪ್ರತಿಪಾದಿಸುತ್ತಾರೆ. ಈ ಸಂದರ್ಭದಲ್ಲಿ ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ಮಾರ್ಗದರ್ಶಕ ಡಾ. ಚಾರುದತ್ತ ಪಿಂಗಳೆ ಅವರ ವಂದನೀಯ ಉಪಸ್ಥಿತಿ ಇತ್ತು.
ಮಹಾಕುಂಭ ಉತ್ಸವದ ಸಂದರ್ಭದಲ್ಲಿ ಸನಾತನ ಗ್ರಂಥ ಪ್ರದರ್ಶನದಲ್ಲಿ ಡಾ. ಧರ್ಮ ಅವರು ‘ಧರ್ಮ ಸಂಸ್ಥಾನಂ ಫೌಂಡೇಶನ್’ನ ಸದಸ್ಯರೊಂದಿಗೆ ಜನವರಿ 14 ರಂದು ಸದ್ಭಾವನಾ ಭೇಟಿ ನೀಡಿದರು. ಆ ಸಮಯದಲ್ಲಿ ಅವರು ಮಾತನಾಡುತ್ತಿದ್ದರು. ಈ ಬಾರಿ, ಪ್ರದರ್ಶನ ನೋಡಿ ಎಲ್ಲಾ ಸದಸ್ಯರ ಹೃದಯ ತುಂಬಿ ಬಂದಿತು. ಪ್ರತಿಯೊಬ್ಬರೂ ಬಹಳ ಜಿಜ್ಞಾಸೆಯಿಂದ ಧರ್ಮ ಶಿಕ್ಷಣ, ಅಧ್ಯಾತ್ಮ ಮತ್ತು ರಾಷ್ಟ್ರದ ಬಗ್ಗೆ ಪ್ರದರ್ಶನ ಫಲಕಗಳಿಂದ ತಿಳಿದುಕೊಂಡರು. ವಿಶೇಷವಾಗಿ ಡಾ. ಧರ್ಮ ಯಶ್ ಇವರು ಪ್ರದರ್ಶನದಲ್ಲಿರುವ ಪ್ರತಿಯೊಂದು ಫಲಕಗಳ ಮಾಹಿತಿಯನ್ನು ಸದಸ್ಯರಿಗೆ ಇಂಡೋನೇಷಿಯನ್ ಭಾಷೆಯಲ್ಲಿ ವಿವರಿಸಿದರು.
ಸನಾತನದ ಕಾರ್ಯ ಭಾರತ ಸೇರಿದಂತೆ ಪ್ರಪಂಚದಾದ್ಯಂತ ಹರಡಬೇಕು !

ಡಾ. ಧರ್ಮ ಯಶ್ ಇವರು, “ನಾವು ಕೃತಿ ಮಾಡುವಾಗ ಎಂದಿಗೂ ಅಷ್ಟು ಆಳವಾಗಿ ಯೋಚಿಸುವುದಿಲ್ಲ.” ನಮಗೆ ವೇದಗಳಲ್ಲಿ ನಂಬಿಕೆ ಮತ್ತು ಶ್ರದ್ಧೆ ಇರುತ್ತದೆ. ಇತ್ತೀಚಿನ ದಿನಗಳಲ್ಲಿ, ಎಲ್ಲೆಡೆ ಧರ್ಮದ ಬಗ್ಗೆ ಅಪನಂಬಿಕೆ ನಿರ್ಮಾಣವಾಗಿದೆ. ಆದ್ದರಿಂದ, ಜನರು ಧರ್ಮಾಚರಣೆಯನ್ನು ಮಾಡುವಾಗ ಅವರಿಗೆ ವೈಜ್ಞಾನಿಕ ಪುರಾವೆಗಳನ್ನು ನೀಡಿದರೆ, ಅವರು ತಕ್ಷಣ ನಂಬುತ್ತಾರೆ. ಸನಾತನ ಸಂಸ್ಥೆಯು ವೈಜ್ಞಾನಿಕ ಮತ್ತು ಶಾಸ್ತ್ರೀಯ ಪರಿಭಾಷೆಯಲ್ಲಿ ಸಂಶೋಧನೆಯ ಮೂಲಕ ಧರ್ಮ ಶಿಕ್ಷಣ ಮತ್ತು ಧರ್ಮಾಚರಣೆಯನ್ನು ಮಾಡಲು ಪ್ರತಿಯೊಬ್ಬರನ್ನು ಪ್ರೋತ್ಸಾಹಿಸುತ್ತಿದೆ. ಅದಕ್ಕಾಗಿಯೇ ಸನಾತನ ಸಂಸ್ಥೆಯ ಕಾರ್ಯ ವಿಶಿಷ್ಟವಾಗಿದೆ. ಈ ಕಾರ್ಯ ಭಾರತ ಸೇರಿದಂತೆ ಪ್ರಪಂಚದಾದ್ಯಂತ ಹರಡಬೇಕು ಎಂದು ಹೇಳಿದರು.