ವ್ಯಾಪಕ ವಿರೋಧದ ನಂತರ ನಿರ್ಧಾರವನ್ನು ಹಿಂಪಡೆ !
ರಾಂಚಿ (ಜಾರ್ಖಂಡ್) – ಇಲ್ಲಿನ ರಾಜೇಂದ್ರ ಇನ್ಸಿಟ್ಯೂಟ್ ಆಫ್ ಮೆಡಿಕಲ ಸೈನ್ಸ್‌ಸ್’ನಲ್ಲಿ ಸರಸ್ವತಿ ಪೂಜೆ ಆಚರಣೆಯನ್ನು ನಿಷೇಧಿಸಲಾಗಿತ್ತು. ಕಳೆದ ಹಲವು ವರ್ಷಗಳಿಂದ ನಡೆಯುತ್ತಿದ್ದ ಈ ಕಾರ್ಯಕ್ರಮವನ್ನು ಸ್ಥಗಿತಗೊಳಿಸುವಂತೆ ಆದೇಶ ಹೊರಡಿಸಲಾಗಿತ್ತು. RIMS ಆಡಳಿತ ಮಂಡಳಿಯು ತಕ್ಷಣವೇ ವಿದ್ಯಾರ್ಥಿಗಳಿಗೆ ಪೂಜೆಗೆ ಸಂಬಂಧಿಸಿದ ಎಲ್ಲಾ ಚಟುವಟಿಕೆಗಳನ್ನು ನಿಲ್ಲಿಸಿ ದೇಣಿಗೆ ಹಣವನ್ನು ಹಿಂದಿರುಗಿಸುವಂತೆ ಆದೇಶಿಸಿತು; ಆದರೆ ತೀವ್ರ ವಿರೋಧ ವ್ಯಕ್ತವಾದ ಕಾರಣ, ಅದನ್ನು ರದ್ದು ಮಾಡುವ ಆದೇಶವನ್ನು ಹಿಂಪಡೆಯಲಾಯಿತು.
1. ಪ್ರತಿ ವರ್ಷ, ವಿದ್ಯಾರ್ಥಿಗಳು ಸಾಮೂಹಿಕವಾಗಿ R.I.M.S. ನಲ್ಲಿ ಸರಸ್ವತಿ ಪೂಜೆಯನ್ನು ಆಯೋಜಿಸುತ್ತಾರೆ. ಈ ಕಾರ್ಯಕ್ರಮವನ್ನು ಎರಡನೇ ವರ್ಷದ MBBS ವಿದ್ಯಾರ್ಥಿಗಳು ಆಯೋಜಿಸಿದ್ದಾರೆ. ಈ ವರ್ಷದ ಸರಸ್ವತಿ ಪೂಜಾ ಉತ್ಸವಕ್ಕೆ ವಿದ್ಯಾರ್ಥಿಗಳು ಲಕ್ಷಾಂತರ ರೂಪಾಯಿ ದೇಣಿಗೆ ಸಂಗ್ರಹಿಸಿ ಎಲ್ಲಾ ವ್ಯವಸ್ಥೆಗಳನ್ನು ಮಾಡಿದ್ದರು. ಸುಮಾರು ಶೇ. 70 ರಷ್ಟು ಕೆಲಸ ಪೂರ್ಣಗೊಂಡಿತ್ತು.
2. ಜನವರಿ 25 ರಂದು ಪೂಜೆಯನ್ನು ರದ್ದುಗೊಳಿಸಲು RIMS ಡೀನ್ ಶಶಿಬಾಲ ಸಿಂಗ್ ಇದ್ದಕ್ಕಿದ್ದಂತೆ ಆದೇಶ ಹೊರಡಿಸಿದರು. ರಿಮ್ಸ್ ಆಡಳಿತದ ಈ ಆದೇಶದ ಬಗ್ಗೆ ವಿದ್ಯಾರ್ಥಿಗಳು ತಮ್ಮ ಅಸಮಾಧಾನ ವ್ಯಕ್ತಪಡಿಸಿದರು.
3. ರಿಮ್ಸ್ ನ ನರಶಸ್ತ್ರಚಿಕಿತ್ಸಕ ಡಾ. ವಿಕಾಸ ಕುಮಾರ ಕೂಡ ಈ ಆದೇಶದ ವಿರುದ್ಧ ಧ್ವನಿ ಎತ್ತಿದರು. ‘X’ ನಲ್ಲಿ ಪ್ರಸಾರವಾದ ಪೋಸ್ಟ್‌ನಲ್ಲಿ, ‘RIMS’ ನ ಉನ್ನತ ಅಧಿಕಾರಿಗಳು ತಮ್ಮ ನ್ಯೂನತೆಗಳನ್ನು ಮರೆಮಾಚಲು ದೇಶದ ಸಾಂಸ್ಕೃತಿಕ ಸಂಪ್ರದಾಯಗಳ ಮೇಲೆ ನೇರವಾಗಿ ದಾಳಿ ಮಾಡುತ್ತಿದ್ದಾರೆ, ಇದು ಎಲ್ಲಾ ದೃಷ್ಟಿಕೋನಗಳಿಂದಲೂ ಖಂಡನೀಯ’, ಎಂದು ಅವರು ಹೇಳಿದ್ದಾರೆ.
4. ಈ ನಿರ್ಧಾರವನ್ನು ಭಾಜಪ ಬಲವಾಗಿ ವಿರೋಧಿಸಿತು. ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕ ವಿರೋಧ ವ್ಯಕ್ತವಾದ ನಂತರ, RIMS ನಿಷೇಧವನ್ನು ಹಿಂತೆಗೆದುಕೊಂಡಿತು.
ಆರೋಗ್ಯ ಸಚಿವ ಇರ್ಫಾನ್ ಅನ್ಸಾರಿ ಅವರ ಹಿಂದೂದ್ವೇಷಿ ಮನಸ್ಥಿತಿಯಿಂದಾಗಿ ಈ ಆದೇಶ ನೀಡಲಾಗಿತ್ತು ! – ಭಾಜಪ
ಭಾಜಪದ ಸಾಮಾಜಿಕ ಮಾಧ್ಯಮದಲ್ಲಿ ಜಾರ್ಖಂಡ್ ಸರಕಾರವನ್ನು ಗುರಿಯಾಗಿಸಿಕೊಂಡಿದೆ. ಆರೋಗ್ಯ ಸಚಿವ ಇರ್ಫಾನ್ ಅನ್ಸಾರಿ ಅವರ ಜಾತಿವಾದಿ ಮನಸ್ಥಿತಿಯಿಂದಾಗಿ ನಿಷೇಧ ಹೇರಲಾಗಿದೆ ಎಂದು ಜಾರ್ಖಂಡ್ ರಾಜ್ಯ ಭಾಜಪ ಮುಖ್ಯಸ್ಥ ಮತ್ತು ಮಾಜಿ ಮುಖ್ಯಮಂತ್ರಿ ಬಾಬುಲಾಲ್ ಮರಾಂಡಿ ಆರೋಪಿಸಿದ್ದಾರೆ. ಇದು ಧಾರ್ಮಿಕ ವಿಭಜನೆಗೆ ಉತ್ತೇಜನ ನೀಡುತ್ತದೆ ಎಂದು ಅವರು ಬಣ್ಣಿಸಿದರು.
ಸಂಪಾದಕೀಯ ನಿಲುವುಹಿಂದೂ ದ್ವೇಷದಿಂದ ಭ್ರಷ್ಟಗೊಂಡಿರುವ ಆಡಳಿತಾರೂಢ ‘ಜಾರ್ಖಂಡ್ ಮುಕ್ತಿ ಮೋರ್ಚಾ’ವನ್ನು ಹಿಂದೂಗಳು ಮರು ಆಯ್ಕೆ ಮಾಡುವುದರ ಪರಿಣಾಮ ಇದು ಎಂಬುದನ್ನು ಅವರು ಗಮನದಲ್ಲಿಡಬೇಕು ! |