Plan To Murder Advocate Vishnu Jain Exposed : ಸಂಭಲ (ಉತ್ತರ ಪ್ರದೇಶ) ಇಲ್ಲಿ ನಡೆದ ಹಿಂಸಾಚಾರದ ಸಮಯದಲ್ಲಿ ವಕೀಲ ವಿಷ್ಣು ಶಂಕರ ಜೈನ ಅವರ ಹತ್ಯೆಗೆ ಸಂಚು ನಡೆದಿತ್ತು !

  • ಆರೋಪಿ ವಾರಿಸನ ತಪ್ಪೊಪ್ಪಿಗೆ

  • ವಾರಿಸನೇ ಈ ಬಾರಿ ಇಬ್ಬರು ಮುಸ್ಲಿಂ ಯುವಕರ ಹತ್ಯೆ ಮಾಡಿದ್ದ

ಆರೋಪಿ ವಾರಿಸ ಮತ್ತು ವಕೀಲರಾದ ವಿಷ್ಣು ಶಂಕರ ಜೈನ

ಸಂಭಲ (ಉತ್ತರ ಪ್ರದೇಶ) – ಇಲ್ಲಿ ನವೆಂಬರ್ 24, 2024 ರಂದು ಶಾಹಿ ಜಾಮಾ ಮಸೀದಿಯ ಸಮೀಕ್ಷೆಯ ಸಮಯದಲ್ಲಿ ಭುಗಿಲೆದ್ದ ಹಿಂಸಾಚಾರದಲ್ಲಿ ಹಿಂದೂ ಪಕ್ಷದ ಪರವಾಗಿ ಮೊಕದ್ದಮೆ ಹೋರಾಡುತ್ತಿರುವ ವಕೀಲ ವಿಷ್ಣು ಶಂಕರ ಜೈನ ಇವರ ಕೊಲೆ ಮಾಡುವವರಿದ್ದರು. ಇದಕ್ಕಾಗಿ ಗಲಭೆಕೋರರಿಗೆ ಶಸ್ತ್ರಾಸ್ತ್ರಗಳನ್ನು ಸಹ ವಿತರಿಸಲಾಗಿತ್ತು. ಈ ಷಡ್ಯಂತ್ರ ಶಾರಿಕ ಸಾಥಾ ಇವನು ರೂಪಿಸಿದ್ದನು. ಅವನ ಸಹಚರ ಮುಲ್ಲಾ ಅಫ್ರೋಜನು ಶಸ್ತ್ರಾಸ್ತ್ರಗಳನ್ನು ಪೂರೈಸಿದ್ದನು, ಎಂದು ಶಾರಿಖ ಸಾಥಾ ಇವನ ಮತ್ತೊಬ್ಬ ಸಹಚರ ವಾರಿಸನ ವಿಚಾರಣೆಯಿಂದ ಬಹಿರಂಗವಾಗಿದೆ. ಪೊಲೀಸರು ಜನವರಿ 25 ರಂದು ಅವನನ್ನು ಬಂಧಿಸಿದರು. ಈ ಹಿಂಸಾಚಾರದಲ್ಲಿ ಇಬ್ಬರು ಮುಸ್ಲಿಂ ಯುವಕರನ್ನು ಗುಂಡು ಹಾರಿಸಿ ಕೊಂದಿದ್ದಾಗಿ ವಾರಿಸ್ ಒಪ್ಪಿಕೊಂಡಿದ್ದಾನೆ. ಪೊಲೀಸರು ವಾರಿಸ್ ನಿಂದ ಒಂದು ಪಿಸ್ತೂಲ್, ಕಾರ್ಟ್ರಿಡ್ಜ್‌ಗಳು ಮತ್ತು 2 ಮೊಬೈಲ್ ಅನ್ನು ವಶಪಡಿಸಿಕೊಂಡರು.

ಪೊಲೀಸ್ ವಿಚಾರಣೆಯ ಸಮಯದಲ್ಲಿ ವಾರಿಸನು, ಶಾರಿಕ ಸಾಥಾ ಗ್ಯಾಂಗ್ ವಕೀಲ ವಿಷ್ಣು ಶಂಕರ ಜೈನ ಅವರನ್ನು ಕೊಲ್ಲಲು ಶಸ್ತ್ರಾಸ್ತ್ರಗಳನ್ನು ವಿತರಿಸಿತ್ತು. ಶಾರಿಕ ಸಾಥಾ ಗ್ಯಾಂಗ್ ನವರು, ಮಸೀದಿಯನ್ನು ರಕ್ಷಿಸಬೇಕಾಗಬಹುದು ಮತ್ತು ಸಮೀಕ್ಷೆಯ ಸಮಯದಲ್ಲಿ ಜೈನ್ ಇವರ ಹತ್ಯೆ ಮಾಡಬೇಕು ಎಂದು ಹೇಳಿತ್ತು. ಈ ಕೊಲೆಯ ಮೂಲಕ ದೇಶಾದ್ಯಂತ ಗಲಭೆಗಳನ್ನು ಪ್ರಚೋದಿಸಲು ಶಾರಿಕ ಸಾಥಾ ಗ್ಯಾಂಗ್ ಬಯಸಿತ್ತು.

ಸಂಪಾದಕೀಯ ನಿಲುವು

  • ಹಿಂದೂಗಳ ಹಕ್ಕುಗಳಿಗಾಗಿ ಹೋರಾಡುವವರನ್ನು ಮತ್ತು ನೇತೃತ್ವವಹಿಸುವವರನ್ನು ಮುಗಿಸುವ ಸಂಚು ಮಾಡಲಾಗುತ್ತಿದೆ ಎಂಬುದು ಇದರಿಂದ ಕಂಡು ಬರುತ್ತದೆ ! ಕೇಂದ್ರ ಸರಕಾರ ಇದನ್ನು ಗಂಭೀರವಾಗಿ ಪರಿಗಣಿಸಿ ಕ್ರಮ ಕೈಗೊಳ್ಳುವುದು ಆವಶ್ಯಕವಾಗಿದೆ !
  • ನಿರಂತರವಾಗಿ ಹಿಂದೂಗಳನ್ನು ಗುರಿಮಾಡುವ ಮತ್ತು ಮುಸ್ಲಿಮರ ಓಲೈಕೆ ಮಾಡುವ ಸಮಾಜವಾದಿ ಪಕ್ಷವು ಈ ಬಗ್ಗೆ ಬಾಯಿ ತೆರೆಯುತ್ತದೆಯೇ ?