ಪ್ರಯಾಗರಾಜ್ ಕುಂಭಮೇಳ 2025
ಪ್ರಯಾಗರಾಜ್ – 76 ನೇ ಗಣರಾಜ್ಯೋತ್ಸವದ ಸಂದರ್ಭದಲ್ಲಿ ‘ನಮಾಮಿ ಗಂಗೆ ಪೆವಿಲಿಯನ್’ ನಲ್ಲಿ ಧ್ವಜಾರೋಹಣ ಮತ್ತು ಇತರ ಕಾರ್ಯಕ್ರಮಗಳು ನಡೆದವು. ನೋಡಲ್ ಅಧಿಕಾರಿ ಅರ್ಥವ ರಾಜ್ ಅವರು ಧ್ವಜಾರೋಹಣ ಮಾಡಿ ಕಾರ್ಯಕ್ರಮವನ್ನು ಪ್ರಾರಂಭಿಸಿದರು. ಆನಂತರ 500ಕ್ಕೂ ಹೆಚ್ಚು ಗಂಗಾ ಸೇವಾದೂತರು ಗಂಗಾನದಿಯನ್ನು ಸ್ವಚ್ಛಗೊಳಿಸುವ ಮಹಾ ಸಂಕಲ್ಪ ಮಾಡಿದರು. ಪ್ಲಾಸ್ಟಿಕ್ ಮಾಲಿನ್ಯದಿಂದ ಗಂಗಾ ಮುಕ್ತಿ ಮಾಡುವ ಸಂದೇಶವನ್ನು ಬೀದಿ ನಾಟಕಗಳ ಮೂಲಕ ಪ್ರಸ್ತುತ ಪಡಿಸಿದರು.
ಮಹಾಕುಂಭ ಕ್ಷೇತ್ರದಲ್ಲಿ ಪ್ಲಾಸ್ಟಿಕ್ ಬಳಕೆ ತಪ್ಪಿಸುವುದು, ಗಂಗಾ ಮತ್ತು ಯಮುನಾ ಘಾಟ್ ಗಳಲ್ಲಿ ಸ್ವಚ್ಛತೆ ಕಾಪಾಡುವ ಬಗ್ಗೆ ಜಾಗೃತಿ ಮೂಡಿಸಲಾಯಿತು. ಈ ಕಾರ್ಯಕ್ರಮದಲ್ಲಿ ಗಂಗಾನದಿ ಸ್ವಚ್ಛತೆಗಾಗಿ ಶ್ರಮಿಸುತ್ತಿರುವ ಅನೇಕ ಸಂಘ ಸಂಸ್ಥೆಗಳು ಭಾಗವಹಿಸಿದ್ದವು.