ಪ್ರಯಾಗರಾಜ – ಮಹಾಕುಂಭ ಮೇಳದಲ್ಲಿ ಜನವರಿ 29 ರಂದು ಮೌನಿ ಅಮವಾಸ್ಯೆಗೆ ಸಂಗಮದಲ್ಲಿ ಸ್ನಾನ ಮಾಡಲು 10 ಕೋಟಿ ಭಕ್ತರು ಬರುವ ಸಾಧ್ಯತೆಯಿದೆ. ಜನವರಿ 25 ರಿಂದ ಪ್ರತಿದಿನ 1 ಕೋಟಿ ಭಕ್ತರು ಪ್ರಯಾಗರಾಜ ತಲುಪುತ್ತಿದ್ದಾರೆ. ಇಷ್ಟು ದೊಡ್ಡ ಸಂಖ್ಯೆಯ ಭಕ್ತರ ಜನಜಂಗುಳಿಯಿಂದ ಯಾವುದೇ ದುರ್ಘಟನೆಗಳು ಸಂಭವಿಸದಂತೆ ಮತ್ತು ಭಕ್ತರು ಸುರಕ್ಷಿತವಾಗಿ ಸ್ನಾನಕ್ಕೆ ಹೋಗಲು ಸಾಧ್ಯವಾಗಬೇಕು ಎಂದು ಪ್ರಯಾಗರಾಜ ರೈಲ್ವೆ ಇಲಾಖೆಯು ನಗರದ ಎಲ್ಲಾ ರೈಲು ನಿಲ್ದಾಣಗಳಲ್ಲಿ ವಿಶೇಷ ಯೋಜನೆಯ ಜೊತೆಗೆ ಕೆಲವು ನಿರ್ಬಂಧಗಳನ್ನು ವಿಧಿಸಿದೆ. ಎಲ್ಲಾ ನಿರ್ಬಂಧಗಳು ಮೌನಿ ಅಮಾವಾಸ್ಯೆಯ 1 ದಿನ ಮೊದಲು ಮತ್ತು ನಂತರದ 2 ದಿನಗಳ ವರೆಗೆ ಜಾರಿಯಲ್ಲಿರುತ್ತವೆ.
1. ಪ್ರಯಾಗರಾಜ ಜಂಕ್ಷನ್ ರೈಲು ನಿಲ್ದಾಣವನ್ನು ಪ್ರವೇಶಿಸಲು ಮತ್ತು ನಿರ್ಗಮಿಸಲು ಮಾರ್ಗಗಳನ್ನು ನಿಗದಿಪಡಿಸಲಾಗಿದೆ.
2. ಪ್ರಯಾಗರಾಜ ರೈಲ್ವೆ ಜಂಕ್ಷನಗೆ ಪ್ರವೇಶವನ್ನು ಸಿಟಿ ಸೈಡ್ ಪ್ಲಾಟ್ಫಾರ್ಮ್ ಸಂಖ್ಯೆ 1 ರಿಂದ ಮಾತ್ರ ಅನುಮತಿಸಲಾಗುತ್ತದೆ.
3. ಪ್ರಯಾಗರಾಜ ರೈಲ್ವೆ ಜಂಕ್ಷನ್‌ನಿಂದ ನಿರ್ಗಮಿಸಲು, ಸಿವಿಲ್ ಲೈನ್ ಸೈಡ್ ಪ್ಲಾಟ್ಫಾರ್ಮ್ ಸಂಖ್ಯೆ 6 ರ ಮಾರ್ಗ ಇರುತ್ತದೆ.
4. ಕಾಯ್ದಿರಿಸುವಿಕೆ ಹೊಂದಿರುವ ಪ್ರಯಾಣಿಕರಿಗೆ ಸಿಟಿ ಸೈಡ್‌ನ ಪ್ರವೇಶ ಸಂಖ್ಯೆ 5 ರಿಂದ ಪ್ರತ್ಯೇಕ ಪ್ರವೇಶ ನೀಡಲಾಗುವುದು.
5. ಕಾಯ್ದಿರಿಸುವಿಕೆ ಇಲ್ಲದ ಪ್ರವೇಶಗಳನ್ನು ನಿರ್ದೇಶನಾನುಸಾರ ‘ಕಲರ-ಕೋಡೆಡ್ ಆಶ್ರಯ ಸ್ಥಳ’ಗಳ ಮೂಲಕ ಪ್ರವೇಶ ನೀಡಲಾಗುವುದು. ಈ ಆಶ್ರಯಸ್ಥಳಗಳಲ್ಲಿ ತಿಕೀಟು ತೆಗೆಯುವ ಸೌಲಭ್ಯಗಳನ್ನು ಒದಗಿಸಲಾಗಿದೆ.
6. ಹೆಚ್ಚುವರಿ ಜನಸಂದಣಿಯನ್ನು ನಿಯಂತ್ರಿಸಲು, ಖುಸ್ರೋ ಬಾಗನಲ್ಲಿ 1 ಲಕ್ಷ ಪ್ರಯಾಣಿಕರು ನಿಲ್ಲಲು ಅವಕಾಶ ಕಲ್ಪಿಸುವ ಸ್ಥಳವನ್ನು ನಿರ್ಮಿಸಲಾಗಿದೆ.
7. ಇದೇ ರೀತಿಯ ವ್ಯವಸ್ಥೆಗಳನ್ನು ನಗರದ ನೈನಿ, ಛವಕಿ ಮತ್ತು ಸುಬೇದಾರಗಂಜ ರೈಲು ನಿಲ್ದಾಣಗಳಲ್ಲಿಯೂ ಮಾಡಲಾಗಿದೆ.