ಕುಂಭಮೇಳದಲ್ಲಿ ಆಖಾಡಗಳು ಸಂತರ ಪಟ್ಟಾಭಿಷೇಕ ಮಾಡಿ ಮಹಾಮಂಡಲೇಶ್ವರರಾಗಿ ನೇಮಕ !

ಉತ್ತರ ಪ್ರದೇಶದ ಭಾಜಪ ಶಾಸಕ ಸ್ವಾಮಿ ಪ್ರವಕ್ತಾನಂದರು ಕೂಡ ನಿರ್ಮಲ ಆಖಾಡದ ಮಹಾಮಂಡಲೇಶ್ವರರಾದರು !

ಮಹಾಮಂಡಲೇಶ್ವರಾಗಿ ನೇಮಕಗೊಳ್ಳುತ್ತಿರುವ ಸ್ವಾಮಿ ಪ್ರವಕ್ತಾನಂದರು

ಪ್ರಯಾಗರಾಜ (ಉತ್ತರ ಪ್ರದೇಶ) – ಮಹಾಕುಂಭ ಮೇಳದಲ್ಲಿ ಎಲ್ಲಾ ಆಖಾಡಗಳಿಂದ ಸಾಧು-ಸಂತರನ್ನು ಮಹಂತ ಮತ್ತು ಮಹಾಮಂಡಲೇಶ್ವರರನ್ನಾಗಿ ನೇಮಿಸಲಾಗುತ್ತಿದೆ. ಮಹಾಮಂಡಲೇಶ್ವರರಾಗಲು ಸಂಬಂಧಪಟ್ಟ ಸಾಧು-ಸಂತರು ಪಿಂಡದಾನ ಮಾಡಬೇಕಾಗುತ್ತದೆ. ತದ ನಂತರ, ಪಟ್ಟಾಭಿಷೇಕ ಮಾಡಿ ಅವರನ್ನು ಮಹಾಮಂಡಲೇಶ್ವರರಾಗಿ ನೇಮಕ ಮಾಡಲಾಗುತ್ತದೆ. ಅತಿದೊಡ್ಡವಾದ ಶ್ರೀ ಪಂಚದಶನಾಮ ಜುನಾ ಆಖಾಡಾದ ಪೀಠಾಧೀಶ್ವರರಾದ ಆಚಾರ್ಯ ಮಹಾಮಂಡಲೇಶ್ವರ ಸ್ವಾಮಿ ಅವಧೇಶಾನಂದ ಗಿರಿ ಮಹಾರಾಜರು, ಆಖಾಡಾವನ್ನು ವಿಶ್ವಾದ್ಯಂತ ಪ್ರಸಾರ ಮಾಡಲು 9 ಸಂತರನ್ನು ಪಟ್ಟಾಭಿಷೇಕ ಮಾಡಿ ಅವರನ್ನು ಮಹಾಮಂಡಲೇಶ್ವರರನ್ನಾಗಿ ನೇಮಕ ಮಾಡಿದ್ದಾರೆ. ಈ ಸಂದರ್ಭದಲ್ಲಿ, ಉಪಸ್ಥಿತರಿದ್ದ ಸಂತರು ಹೊಸದಾಗಿ ನೇಮಕಗೊಂಡ ಮಹಾಮಂಡಲೇಶ್ವರರನ್ನು ಆಶೀರ್ವದಿಸಿದರು.

ಉತ್ತರ ಪ್ರದೇಶದ ಅಕ್ರಿಯಧಾಮದ (ಖಮರಿಯಾ, ಪಿಲಿಭಿತ್) ಪೀಠಾಧೀಶ್ವರ ಸ್ವಾಮಿ ಪ್ರವಕ್ತಾನಂದ ಅವರು 2022 ರ ವಿಧಾನಸಭಾ ಚುನಾವಣೆಯಲ್ಲಿ ಬರಖೇಡಾದಿಂದ ಶಾಸಕರಾಗಿ ಆಯ್ಕೆಯಾಗಿದ್ದರು. 2023 ರಲ್ಲಿ ಸ್ವಾಮಿ ಅಲಕಾನಂದರು ಅವರಿಗೆ ದೀಕ್ಷೆ ನೀಡಿದರು. ಈಗ, ಸ್ವಾಮಿ ಪ್ರವಕ್ತಾನಂದ ಅವರನ್ನು ನಿರ್ಮಲ ಆಖಾಡದಿಂದ ಮಹಾಮಂಡಲೇಶ್ವರರನ್ನಾಗಿ ನೇಮಕ ಮಾಡಿದೆ.