![](https://static.sanatanprabhat.org/wp-content/uploads/sites/5/2025/01/29070630/Shankaracharya_Nischalanand_Saraswati_Kumbh_2.jpg-700.jpg)
ಪ್ರಯಾಗರಾಜ್, ಜನವರಿ 28 (ಸುದ್ದಿ) – ಪುರಿಯ ಗೋವರ್ಧನ ಪೀಠದ ಜಗದ್ಗುರು ಶಂಕರಾಚಾರ್ಯ ಸ್ವಾಮಿ ನಿಶ್ಚಲಾನಂದ ಸರಸ್ವತಿ ಅವರ ಸಮ್ಮುಖದಲ್ಲಿ, ಭಕ್ತರು ಉತ್ಸಾಹದಿಂದ ‘ಹಮ್ ಭಾರತ್ ಭವ್ಯ ಬನಾಯೇಂಗೆ, ಹಮ್ ಹಿಂದೂ ರಾಷ್ಟ್ರ ಬನಾಯೇಂಗೆ’ (ನಾವು ಭಾರತವನ್ನು ಶ್ರೇಷ್ಠ ದೇಶವನ್ನಾಗಿ ಮಾಡುತ್ತೇವೆ, ನಾವು ಹಿಂದು ರಾಷ್ಟ್ರ ಮಾಡುವೆವು) ಎಂಬ ಘೋಷಣೆಯನ್ನು ಕೂಗಿದರು. ಮಹಾಕುಂಭದ ಸಮಯದಲ್ಲಿ ಗೋವರ್ಧನ ಪೀಠದ ಶಿಬಿರದಲ್ಲಿ ಜಗದ್ಗುರು ಶಂಕರಾಚಾರ್ಯ ಸ್ವಾಮಿ ನಿಶ್ಚಲಾನಂದ ಸರಸ್ವತಿ ಅವರ ಮಾರ್ಗದರ್ಶನ ಪಡೆದ ನಂತರ ಅವರ ದರ್ಶನ ಪಡೆಯುತ್ತಿದ್ದಾಗ ಭಕ್ತರು ಈ ಘೋಷಣೆಗಳನ್ನು ಕೂಗಿದರು.
![](https://static.sanatanprabhat.org/wp-content/uploads/sites/5/2025/01/29070631/Shankaracharya_Nischalanand_Saraswati_Kumbh_1.jpg-700.jpg)
ಜಗದ್ಗುರು ಶಂಕರಾಚಾರ್ಯ ಸ್ವಾಮಿ ನಿಶ್ಚಲಾನಂದ ಸರಸ್ವತಿ ಮಾರ್ಗದರ್ಶನ ಪಡೆದ ನಂತರ ವ್ಯಾಸಪೀಠದಿಂದ ಕೆಳಗಿಳಿಯುತ್ತಿದ್ದಂತೆ, ಭಕ್ತರು ತಮ್ಮ ಕೈಗಳನ್ನು ಮೇಲಕ್ಕೆತ್ತಿ ಹಿಂದೂ ರಾಷ್ಟ್ರವನ್ನು ಘೋಷಿಸಿದರು. ಶಂಕರಾಚಾರ್ಯರ ಗೋವರ್ಧನ ಪೀಠದ ವತಿಯಿಂದ ‘ಹಮ ಹಿಂದೂ ರಾಷ್ಟ್ರ ಬನಾಯೆಂಗೆ, ಭಾರತ ಭವ್ಯ ಬನಾಯೆಂಗೆ’ ಎಂಬ ಬರಹಗಳನ್ನು ಹೊಂದಿರುವ ಫಲಕಗಳನ್ನು ಕುಂಭಮೇಳದ ವಿವಿಧ ಸ್ಥಳಗಳಲ್ಲಿ ಹಾಕಲಾಗಿದೆ. ಜಗದ್ಗುರು ಶಂಕರಾಚಾರ್ಯ ಸ್ವಾಮಿ ನಿಶ್ಚಲಾನಂದ ಸರಸ್ವತಿ ಅವರ ಛಾಯಾಚಿತ್ರವನ್ನು ಹೊಂದಿರುವ ಈ ಹೋರ್ಡಿಂಗ್‌ಗಳು ಗಮನ ಸೆಳೆಯುತ್ತಿವೆ.