
ಆರ್ಥಿಕ, ಶಾರೀರಿಕ, ಮಾನಸಿಕ ಮತ್ತು ಭಾವನಿಕ ಈ ಎಲ್ಲ ಸ್ತರಗಳಲ್ಲಿ ಒಮ್ಮೆಲೆ ಗೊಂದಲವಾದರೆ, ಪರಿಸ್ಥಿತಿ ಕೈಮೀರಿ ಹೋಗುತ್ತಿದ್ದರೆ, ನಿಮಗೆ ಅದನ್ನು ಸಹಿಸಿ ಕೊಳ್ಳ ಬೇಕಾಗುತ್ತದೆ. ಇಂತಹ ಪ್ರಸಂಗಗಳನ್ನು ನಿರ್ವಹಿಸಬೇಕಾಗುತ್ತದೆ, ಅದಕ್ಕೆ ಏನು ಉಪಾಯವಿರುವುದಿಲ್ಲ. ಇಂತಹ ಸಮಯದಲ್ಲಿ ಬಂದ ‘ಅಸಹಾಯಕ’ ಪರಿಸ್ಥಿತಿಯನ್ನು ಎಲ್ಲರೂ ಎಂದಾದರೂ ಎದುರಿಸಿರುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ ಅನೇಕಬಾರಿ ಜನರು ತಮ್ಮ ಸಹನಶಕ್ತಿಯನ್ನು ಹೆಚ್ಚಿಸಲು ಪ್ರಯತ್ನಿಸುವುದಕ್ಕಿಂತ ‘ಜೀವನವು ನನ್ನ ಮೇಲೆ ಎಷ್ಟು ಅನ್ಯಾಯ ಮಾಡಿತು’, ಎಂಬುದರ ಬಗ್ಗೆ ವಿಚಾರ ಮಾಡುತ್ತಾರೆ ಮತ್ತು ಬಂದ ಪರಿಸ್ಥಿತಿಯನ್ನು ಸ್ವೀಕರಿಸದೇ ದುಃಖಿತರಾಗುತ್ತಾರೆ. ಆದ್ದರಿಂದ ಏನು ಸಂಭವಿಸುತ್ತಿರುತ್ತದೆಯೋ, ಅದು ನಿಮಗೆ ನಿಮ್ಮ ಕಣ್ಣಿಗೆ ಹೆಚ್ಚು ದೊಡ್ಡದಾಗಿ ಕಾಣಿಸುತ್ತದೆ ಮತ್ತು ಅದರ ತೊಂದರೆ ಹೆಚ್ಚಾಗುತ್ತದೆ. ಆದ್ದರಿಂದ ಯಾವ ಕಠಿಣ ಪರಿಸ್ಥಿತಿಯಿಂದ ನಮಗೆ ಪರಿಹಾರವನ್ನು ಹುಡುಕುವುದಿರುತ್ತದೆಯೋ, ಆ ಬಗ್ಗೆ ಆಲೋಚನೆಗಳ ಸ್ಪಷ್ಟತೆ ಕಡಿಮೆಯಾಗುತ್ತದೆ.

ಇಂತಹ ಸಮಯದಲ್ಲಿ ಕೆಳಗಿನ ಕೆಲವು ವಿಷಯಗಳ ವಿಚಾರ ಮಾಡಬಹುದು –
೧. ‘ಯಾವುದಾದರೊಂದು ವಿಷಯವು ನನ್ನ ಪಾಲಿಗೇ ಏಕೆ ಬರುತ್ತದೆ ?’, ಎಂದು ವಿಚಾರ ಮಾಡುವುದಕ್ಕಿಂತ ‘ನಾನು ಇದಕ್ಕೆ ಈಗೇನು ಮಾಡಬಹುದು ?’, ಎಂಬ ವಿಚಾರ ಹೆಚ್ಚು ಉಪಯುಕ್ತವಾಗಿದೆ.
೨. ಸತತವಾಗಿ ದುಃಖಿಸುತ್ತ ಸಮಯವನ್ನು ವ್ಯರ್ಥ ಮಾಡದೇ ನಿಮ್ಮ ನಿತ್ಯ ದಿನಕ್ರಮದಲ್ಲಿರಲು ಪ್ರಯತ್ನಿಸಬೇಕು. ಇದರಲ್ಲಿ ವ್ಯಾಯಾಮವೂ ಇರಬೇಕು.
೩. ಕೆಟ್ಟ ದಿನಗಳು ಬಂದಾಗ ತಮಗಾಗಿ ಸ್ವಲ್ಪ ಸಮಯವನ್ನು ಅವಶ್ಯ ಕೊಡಬೇಕು, ವಿಶ್ರಾಂತಿ ತೆಗೆದುಕೊಳ್ಳಬೇಕು, ಅದರಿಂದ ಹೊರಗೆ ಬರಲು ಪ್ರಯತ್ನಿಸಬೇಕು; ಜೀವನವು ತುಂಬಾ ದೊಡ್ಡದಾಗಿದೆ.ಒಂದೇ ವಿಷಯದ ಬಗ್ಗೆ ಸತತವಾಗಿ ದುಃಖಪಡುತ್ತಿದ್ದರೆ ಯಾರಿಗೂ ಲಾಭವಾಗುವುದಿಲ್ಲ.
೪. ಧ್ಯಾನ, ನಾಮಸ್ಮರಣೆ; ‘ಈ ದಿನಗಳೂ ಹೋಗುವವು, ಎಂಬ ಶ್ರದ್ಧೆ’, ಈ ವಿಚಾರಗಳು ನಮಗೆ ಕಠಿಣ ಪರಿಸ್ಥಿತಿಯಿಂದ ಹೊರಗೆ ಬರಲು ಸಹಾಯ ಮಾಡುತ್ತವೆ.
೫. ನಮ್ಮ ಜೀವನದಲ್ಲಿ ನಮಗೆ ಸಹಾಯ ಮಾಡುವ ವ್ಯಕ್ತಿಗಳಿದ್ದಾರೆ, ಅವರ ಬಗ್ಗೆ ಕೃತಜ್ಞತೆಯಿಂದಿರಬೇಕು, ಈ ಭಾವನೆಯು ನಮಗೆ ಕೆಟ್ಟ ಪರಿಸ್ಥಿತಿಯಲ್ಲಿ ಶಾಂತವಾಗಿರಲು ಖಂಡಿತ ಸಹಾಯ ಮಾಡುತ್ತದೆ.
೬. ನಮ್ಮ ಜೀವನದಲ್ಲಿ ಘಟಿಸುವ ಕೆಟ್ಟ ಘಟನೆಗಳ ಸಿಟ್ಟನ್ನು ಪ್ರೀತಿಯ ಜನರ ಮೇಲೆ ತೆಗೆಯಬೇಡಿರಿ. ಅವರಿಂದ ದೂರ ಹೋಗಬೇಡಿರಿ. ಅವರು ಮುಂದೆ ಮಾಡಿದ ಸಹಾಯಹಸ್ತವನ್ನು ಸ್ವೀಕರಿಸಿ. ಅವರ ಮೇಲೆ ಕೋಪಿಸಿಕೊಂಡರೆ ಆ ವ್ಯಕ್ತಿಯ ಮನಸ್ಸಿಗೆ ನೋವಾಗದಿರಬಹುದು; ಆದರೆ ಖಂಡಿತ ಅವರು ದೂರವಾಗುವರು.
೭. ಆದ್ಯತಾಕ್ರಮವನ್ನು ನಿರ್ಧರಿಸಿ. ನಿಮಗೆ ಏನು ಪಡೆಯಲಿಕ್ಕಿದೆಯೋ, ಅದಕ್ಕಾಗಿ ಪ್ರಯತ್ನಿಸಿರಿ. ಕೆಲವು ವಿಷಯಗಳನ್ನು ಬಿಟ್ಟು ಬಿಡಿ.
೮. ‘…… ಇವರು ಇದನ್ನು ಮಾಡಿದ್ದರಿಂದ ನನಗೆ ಹಾನಿ ಆಯಿತು’ ಅಥವಾ ‘ಇತರರು ಇದನ್ನು ಮಾಡುವುದಿಲ್ಲ’; ಎಂದು ಅವರನ್ನು ದೂಷಿಸುವುದು, ಇಂತಹ ದೋಷಾರೋಪಣೆಯಿಂದ ಏನೂ ಸಾಧ್ಯವಾಗುವುದಿಲ್ಲ.
೯. ಮಾನಸಿಕ ತೊಂದರೆಯಿಂದ ದೇಹದ ಮೇಲೆ ಗಂಭೀರ ಪರಿಣಾಮವಾಗುತ್ತವೆ. ತನ್ನ ಆಲೋಚನೆಯಿಂದ ಅಥವಾ ಮೇಲಿನ ಉಪಾಯಗಳಿಂದ ನಿಮ್ಮ ಮನಸ್ಸು ಶಾಂತವಾಗದಿದ್ದರೆ, ಮನಸ್ಸನ್ನು ಕಾರ್ಯಗತಗೊಳಿಸುವ ಔಷಧಿಗಳು, ನಸ್ಯ, ಶಿರೋಧಾರಾ, ಸ್ನೇಹಪಾನದಂತಹ ಕೆಲವು ಕ್ರಿಯೆಗಳು ತುಂಬಾ ಸಹಾಯ ಮಾಡುತ್ತವೆ. ಇದರಿಂದ ಪರಿಸ್ಥಿತಿಯನ್ನು ಎದುರಿಸಲು ಮನಸ್ಸಿನ ಶಕ್ತಿಯೂ ಹೆಚ್ಚುತ್ತದೆ.
೧೦. ‘ಏನು ಇಲ್ಲ’, ಎಂಬುದರ ಮೇಲೆ ವಸ್ತುನಿಷ್ಠೆಯಿಂದ ವಿಚಾರ ಮಾಡಿ ಅದರಿಂದ ಹೊರಗೆ ಬರಲು ಪ್ರಯತ್ನಿಸಿರಿ; ಆದರೆ ಅದರ ಬಗ್ಗೆ ದುಃಖಿಸಿ ಏನು ಮಾಡದೇ ಇರುವುದು, ಇದು ಎಲ್ಲ ದೃಷ್ಟಿಯಿಂದ ಅಪಾಯಕಾರಿಯಾಗಿರುವುದು.
ಬದಲಾಯಿಸಲಾಗದ ವಿಷಯಗಳ ಬಗ್ಗೆ ಚಿಂತಿಸದಿರುವುದು, ಇದ್ದ ಪರಿಸ್ಥಿತಿಯನ್ನು ಅತ್ಯುತ್ತಮವಾಗಿಸಲು ಪ್ರಯತ್ನಿಸುವುದು ಮತ್ತು ನಮ್ಮ ಪರಿಸ್ಥಿತಿಗಾಗಿ ಇತರರನ್ನು ದೂಷಿಸದಿರುವುದರಿಂದ ಸಂಕಟಗಳನ್ನು ಎದುರಿಸುವಾಗ ಖಂಡಿತವಾಗಿಯೂ ನಿಮಗೆ ಮಾನಸಿಕ ಶಕ್ತಿಯನ್ನು ಪಡೆಯಲು ಸಹಾಯವಾಗುತ್ತದೆ !
– ವೈದ್ಯೆ (ಸೌ.) ಸ್ವರಾಲಿ ಶ್ಯೆಂಡೆ, ಯಶಪ್ರಭಾ ಆಯುರ್ವೇದ, ಪುಣೆ.
ಸ್ಪೇನ್: ನೌಕೆಯಲ್ಲಿದ್ದ ಇಬ್ಬರು ಭಾರತೀಯ ಸಿಬ್ಬಂದಿಗೆ ಹಂತಾ ವೈರಸ್ !
‘ರ್ಯಾಂಡಮೈಜ್ಡ್ಡ ಕಂಟ್ರೋಲ್ಡ್ ಟ್ರಾಯಲ್ಸ್’ (ಆರ್.ಸಿ.ಟಿ) : ‘ಗೋಲ್ಡ್ ಸ್ಟ್ಯಾಂಡರ್ಡ್’ನ ಮುಖವಾಡ ಮತ್ತು ವಾಸ್ತವದ ಮಿತಿ !
ವೈಷ್ಣೋ ದೇವಿ ದೇವಸ್ಥಾನದಲ್ಲಿ ಭಕ್ತರು ಅರ್ಪಿಸಿದ ‘ಬೆಳ್ಳಿ’ಯಲ್ಲಿ ಕಲಬೆರಕೆ ಪತ್ತೆ!
ಅಮೇರಿಕಾದ ೬೦ ವೈದ್ಯಕೀಯ ಸಂಸ್ಥೆಗಳಲ್ಲಿ ‘ಪಾಕಕಲೆ ಔಷಧ’ ಪಠ್ಯಕ್ರಮದ ಬೋಧನೆ !
‘ವಂದೇ ಭಾರತ್’ ಎಕ್ಸ್ಪ್ರೆಸ್ನಲ್ಲಿ ಇಬ್ಬರು ಪ್ರಯಾಣಿಕರ ಊಟದಲ್ಲಿ ಜಿರಲೆ ಪತ್ತೆ !