ಛಾಯಾಚಿತ್ರಗಳ ಮೂಲಕ ಬೆಳಕಿಗೆ ಬಂದ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರ ಸಾಧನಾಪ್ರವಾಸ !

‘ಈ ಲೇಖನದಲ್ಲಿ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ ಇವರ ೨೦೦೮ ರಿಂದ ೨೦೨೨ ರ ಕಾಲಾವಧಿಯಲ್ಲಿನ ಛಾಯಾಚಿತ್ರಗಳನ್ನು ಕೊಡಲಾಗಿದೆ. ಇವುಗಳಿಂದ ನಾನು ಅವರ ಸಾಧನಾಪ್ರವಾಸದಲ್ಲಾದ ಆಧ್ಯಾತ್ಮಿಕ ಬದಲಾವಣೆಯ ಅಧ್ಯಯನ ಮಾಡಲು ಪ್ರಯತ್ನಿಸಿದ್ದೇನೆ.

೧. ಭಾವ, ಅಂತರ್ಮನಸ್ಸಿನಲ್ಲಿನ ಸಾಧನೆ, ಸಾಧನೆಗಾಗಿ ಇರುವ ತಳಮಳ, ಅಹಂ, ಕೆಟ್ಟ ಶಕ್ತಿಗಳ ತೊಂದರೆ ಮತ್ತು ತ್ರಿಗುಣಗಳು ಇವು ಸಾಧನೆಯಲ್ಲಿನ ಘಟಕಗಳು

ವ್ಯಕ್ತಿಯಲ್ಲಿ ಭಾವ, ಅಂತರ್ಮನಸ್ಸಿನಲ್ಲಿನ ಸಾಧನೆ, ಸಾಧನೆಗಾಗಿ ಇರುವ ತಳಮಳ ಮತ್ತು ಅಹಂ ಈ ಸಾಧನೆಯಲ್ಲಿನ ಘಟಕಗಳ ಮೇಲಿನಿಂದ ಅವರ ಸಾಧನೆಯ ಪರೀಕ್ಷೆಯಾಗುತ್ತದೆ. ಸಾಧನೆಯನ್ನು ಮಾಡದಿರುವ ಸಾಮಾನ್ಯ ವ್ಯಕ್ತಿಯಲ್ಲಿ ಭಾವ, ಅಂತರ್ಮನಸ್ಸಿನಲ್ಲಿನ ಸಾಧನೆ ಮತ್ತು ಸಾಧನೆಗಾಗಿ ಇರುವ ತಳಮಳ ಈ ಘಟಕಗಳು ಶೇ. ೦ ರಷ್ಟಿರುತ್ತವೆ, ಅಂದರೆ ಇರುವುದೇ ಇಲ್ಲ. ಹಾಗೆಯೇ ಅಹಂ ಹೆಚ್ಚು, ಅಂದರೆ ಶೇ. ೩೦ ರಷ್ಟಿರುತ್ತದೆ. ಇದರಿಂದ ಸಾಮಾನ್ಯ ವ್ಯಕ್ತಿಯು ಸಾಧನೆಯನ್ನು ಮಾಡಿ ಈ ಮೂರು ಘಟಕಗಳು ಶೇ. ೩೦ ರಷ್ಟರ ವರೆಗೆ ಹೆಚ್ಚಿಸುವುದು ಮತ್ತು ಅಹಂ ಶೇ. ೩೦ ರಿಂದ ಕಡಿಮೆ ಮಾಡುತ್ತ ಹೋಗುವುದು, ಇದನ್ನು ಸಾಧಿಸಬೇಕಾಗುತ್ತದೆ. ಯಾವುದಾದರೊಬ್ಬ ವ್ಯಕ್ತಿಗೆ ಕೆಟ್ಟ ಶಕ್ತಿಗಳಿಂದಾಗುವ ತೊಂದರೆಯು, ಅದು ಪ್ರಾರಬ್ಧಕ್ಕನುಸಾರ ಇರುತ್ತದೆ. ಕೆಟ್ಟ ಶಕ್ತಿಗಳ ತೊಂದರೆ ಹೆಚ್ಚಿದ್ದರೆ, ಆ ತೊಂದರೆಯನ್ನು ದೂರಗೊಳಿಸಲು ತನ್ನ ಸಾಧನೆ ಖರ್ಚಾಗುತ್ತದೆ. ವ್ಯಕ್ತಿಯು ಸಾಧನೆ ಮಾಡಿದರೆ ಅವನಲ್ಲಿನ ತ್ರಿಗುಣಗಳ ಪೈಕಿ ಸತ್ತ್ವಗುಣ ಹೆಚ್ಚುತ್ತ ಹೋಗುತ್ತದೆ ಮತ್ತು ರಜ ಹಾಗೆಯೇ ತಮ ಈ ಗುಣಗಳು ಕಡಿಮೆಯಾಗುತ್ತಾ ಹೋಗುತ್ತವೆ.

(ಸದ್ಗುರು) ಡಾ. ಮುಕುಲ ಗಾಡಗೀಳ

೨. ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರ ೨೦೦೮ ರಿಂದ ೨೦೨೨ ರ ಕಾಲಾವಧಿಯಲ್ಲಿನ ಛಾಯಾಚಿತ್ರಗಳಿಂದ ಅವರಲ್ಲಿನ ಸಾಧನೆಯಲ್ಲಿನ ಘಟಕಗಳಲ್ಲಿ ಅರಿವಾದ ಬದಲಾವಣೆ

೩. ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರಲ್ಲಿನ ಸಾಧನೆಯಲ್ಲಿನ ಘಟಕಗಳಲ್ಲಿ ಆದ ಬದಲಾವಣೆಯ ವಿಶ್ಲೇಷಣೆ

೩ ಅ. ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರ ಶೇ. ೬೦ ಕ್ಕಿಂತಲೂ ಕಡಿಮೆ ಆಧ್ಯಾತ್ಮಿಕ ಮಟ್ಟವಿರುವುದು (೨೦೦೮ ರಲ್ಲಿನ ಛಾಯಾಚಿತ್ರ)

ಶ್ರೀಚಿತ್‌ಶಕ್ತಿ (ಸೌ.) ಗಾಡಗೀಳ ಇವರ ಶೇ. ೬೦ ಕ್ಕಿಂತಲೂ ಕಡಿಮೆ ಆಧ್ಯಾತ್ಮಿಕ ಮಟ್ಟವಿರುವಾಗಲೂ ಅವರಲ್ಲಿ ಭಾವ, ಅಂತರ್ಮನದ ಸಾಧನೆ ಮತ್ತು ತಳಮಳ ಈ ಘಟಕಗಳು ಒಳ್ಳೆಯ ಪ್ರಮಾಣದಲ್ಲಿದ್ದವು, ಇದು ಮೇಲಿನ ಕೋಷ್ಟಕದಿಂದ ಗಮನಕ್ಕೆ ಬರುತ್ತದೆ. ‘ಅಂತರ್ಮನಸ್ಸಿನಲ್ಲಿನ ಸಾಧನೆ’ ಈ ಘಟಕವು ವ್ಯಕ್ತಿಯ ಈಶ್ವರನೊಂದಿಗೆ ಅನುಸಂಧಾನ ಎಷ್ಟಿದೆ, ಎಂಬುದನ್ನು ತೋರಿಸುತ್ತದೆ ಮತ್ತು ‘ಸಾಧನೆಯ ತಳಮಳ’ ಈ ಘಟಕವು ಗುರುಕಾರ್ಯವನ್ನು ಮಾಡುವ, ಅಂದರೆ ಸಮಷ್ಟಿ ಸಾಧನೆಯ ಸೆಳೆತ ಎಷ್ಟಿದೆ, ಎಂಬುದನ್ನು ತೋರಿಸುತ್ತದೆ.

ಶ್ರೀಚಿತ್‌ಶಕ್ತಿ (ಸೌ.) ಗಾಡಗೀಳರು ೨೦೦೦ ದಲ್ಲಿ ಸಾಧನೆ ಆರಂಭಿಸಿದಾಗ ಅವರಿಗೆ ಕೆಟ್ಟ ಶಕ್ತಿಗಳ ತೊಂದರೆ ತೀವ್ರವಾಗಿತ್ತು. ೨೦೦೮ ರವರೆಗೆ ಸಾಧನೆಯ ೮ ವರ್ಷಗಳಲ್ಲಿ ಅವರ ಸಾಧನೆ ಕೆಟ್ಟಶಕ್ತಿಗಳ ತೊಂದರೆಯನ್ನು ಕಡಿಮೆ ಮಾಡಲು ಅದು ಖರ್ಚಾಯಿತು. ೨೦೦೮ ರಲ್ಲಿ ಅವರಲ್ಲಿ ಅಹಂ ಮತ್ತು ರಜ-ತಮ ಈ ಗುಣಗಳು ಹೆಚ್ಚು ಪ್ರಮಾಣದಲ್ಲಿದ್ದವು.

೩ ಆ. ಶ್ರೀಚಿತ್‌ಶಕ್ತಿಯವರು ‘ಶೇ. ೬೧ ರಷ್ಟು ಆಧ್ಯಾತ್ಮಿಕ ಮಟ್ಟ’ವನ್ನು ತಲುಪುವುದು (೨೦೧೧ ರ ಛಾಯಾಚಿತ್ರ)

ಶ್ರೀಚಿತ್‌ಶಕ್ತಿ (ಸೌ.) ಗಾಡಗೀಳ ಇವರು ೨೦೧೧ ರಲ್ಲಿ ಶೇ. ೬೧ ರಷ್ಟು ಆಧ್ಯಾತ್ಮಿಕ ಮಟ್ಟವನ್ನು ತಲುಪಿದಾಗ ಅವರಲ್ಲಿನ ಭಾವ, ಅಂತರ್ಮನಸ್ಸಿನಲ್ಲಿನ ಸಾಧನೆ ಮತ್ತು ಸಾಧನೆಯ ತಳಮಳ ಈ ಘಟಕಗಳಲ್ಲಿ ಹೆಚ್ಚಳವಾಯಿತು, ಹಾಗೆಯೇ ಅವರಲ್ಲಿನ ಅಹಂ ಮತ್ತು ಕೆಟ್ಟ ಶಕ್ತಿಗಳ ತೊಂದರೆ ಇವುಗಳ ಪ್ರಮಾಣ ಕಡಿಮೆಯಾಗಿ ಸತ್ತ್ವಗುಣ ಹೆಚ್ಚಾಯಿತು. ಅಲ್ಲಿ ತನಕ ಶ್ರೀಚಿತ್‌ಶಕ್ತಿ (ಸೌ.) ಗಾಡಗೀಳರು ಸನಾತನದ ಗ್ರಂಥಗಳಿಗಾಗಿ ಈಶ್ವರೀಜ್ಞಾನವನ್ನು ಪಡೆಯುವ ಸೇವೆ ಮಾಡುತ್ತಿದ್ದರು.

೩ ಇ. ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರು ‘ಸಂತ ಪದವಿಯನ್ನು ತಲುಪುವುದು (೨೦೧೩ ರ ಛಾಯಾಚಿತ್ರ)

೨೦೧೨ ರಿಂದ ಶ್ರೀಚಿತ್‌ಶಕ್ತಿ (ಸೌ.) ಗಾಡಗೀಳ ಇವರ ಸಮಷ್ಟಿ ಸಾಧನೆ ಆರಂಭವಾಯಿತು. ಅವರು ಮಹಾರಾಷ್ಟ್ರ ಮತ್ತು ಕರ್ನಾಟಕ ಈ ರಾಜ್ಯಗಳಲ್ಲಿ ಸುತ್ತಾಡಿ ಮಠಗಳು, ದೇವಸ್ಥಾನಗಳು, ತೀರ್ಥಕ್ಷೇತ್ರಗಳು ಇತ್ಯಾದಿಗಳ ಸ್ಥಳಗಳಲ್ಲಿನ ಹಿಂದೂ ಸಂಸ್ಕೃತಿಯ ಸಂಗ್ರಹದ ಬಗ್ಗೆ ಅಧ್ಯಯನ, ಅದನ್ನು ಜೋಪಾಸನೆ, ಅವುಗಳ ಚಿತ್ರೀಕರಣ, ಅಲ್ಲಿನ ಗಣ್ಯವ್ಯಕ್ತಿಗಳ ಸಂದರ್ಶನ, ಈ ಸೇವೆಯನ್ನು ಆರಂಭಿಸಿದರು, ಹಾಗೆಯೇ ಆ ಸಮಯದಲ್ಲಿ ಅವರಿಂದ ಸೂಕ್ಷ್ಮದಿಂದ ಜ್ಞಾನವನ್ನು ಪಡೆಯುವ ಸೇವೆಯೂ ಮುಂದುವರೆದಿತ್ತು. ಸಮಷ್ಟಿ ಸೇವೆಯಿಂದ ಅವರಲ್ಲಿನ ‘ಗಣ್ಯವ್ಯಕ್ತಿಗಳ ಮತ್ತು ಸಂತರೊಂದಿಗೆ ಆತ್ಮೀಯತೆ ಬೆಳೆಸುವುದು, ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಇವರ ಹಿಂದೂ ರಾಷ್ಟ್ರದ ಸ್ಥಾಪನೆಯ ಕಾರ್ಯವನ್ನು ಜನರವರೆಗೆ ತಲುಪಿಸುವುದು, ಆ ಕಾರ್ಯದಲ್ಲಿ ಜನರ ಸಹಾಯವನ್ನು ಪಡೆಯುವುದು, ಅಧ್ಯಾತ್ಮ ಪ್ರಸಾರ’, ಈ ಗುಣಗಳಿಗೆ ಅವಕಾಶ ಸಿಕ್ಕಿತು. ಆದ್ದರಿಂದ ೨ ವರ್ಷಗಳಲ್ಲಿಯೇ ಅವರ ಶೀಘ್ರ ಆಧ್ಯಾತ್ಮಿಕ ಉನ್ನತಿಯಾಗಿ ಅವರು ೨೦೧೩ ರಲ್ಲಿ ‘ಸಂತಪದವಿ‘ಯಲ್ಲಿ ವಿರಾಜಮಾನ ರಾದರು. ಆಗ ಅವರಲ್ಲಿನ ‘ಸಾಧನೆಯ ತಳಮಳ’ದಲ್ಲಿ ಶೇ. ೧೫ ರಷ್ಟು ಹೆಚ್ಚಳವಾಗಿ ಅದು ಮೊದಲಿನ ಶೇ. ೨೫ ರಿಂದ ಶೇ. ೪೦ ರಷ್ಟಾಯಿತು. ಇದು ಅವರ ಸಮಷ್ಟಿ ಸಾಧನೆಯಿಂದ ಸಾಧ್ಯವಾಯಿತು, ಹಾಗೆಯೇ ಅವರಲ್ಲಿನ ಅಹಂ ಮತ್ತು ಕೆಟ್ಟ ಶಕ್ತಿಗಳ ತೊಂದರೆಯ ಪ್ರಮಾಣ ಇನ್ನೂ ಕಡಿಮೆ ಆಯಿತು. ಈ ಹಂತಕ್ಕೆ ಅವರಲ್ಲಿನ ಸತ್ತ್ವಗುಣ ರಜ-ತಮ ಗುಣಗಳ ಒಟ್ಟು ಸಂಖ್ಯೆಗಿಂತ ಹೆಚ್ಚಾಗಿ ಸತ್ತ್ವಗುಣಿಯಾದರು.

೩ ಈ. ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರು ‘ಸದ್ಗುರುಪದವಿ‘ಯನ್ನು ತಲುಪುವುದು (೨೦೧೬ ರ ಛಾಯಾಚಿತ್ರ)

೨೦೧೪ ರಿಂದ ಶ್ರೀಚಿತ್‌ಶಕ್ತಿ (ಸೌ.) ಗಾಡಗೀಳ ಇವರು ಹಿಂದೂ ಸಂಸ್ಕೃತಿಯ ಜೋಪಾಸನೆಗಾಗಿ ಭಾರತದಾದ್ಯಂತ ಸಂಚರಿಸಿದರು. ಆದ್ದರಿಂದ ಅವರ ಸಮಷ್ಟಿ ಕಾರ್ಯವು ಇನ್ನೂ ಹೆಚ್ಚಾಗಿ ಇನ್ನೂ ವ್ಯಾಪಕರಾದರು. ಅವರು ಅಪಾರ ಪರಿಶ್ರಮದಿಂದ ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ನಾಡೀಪಟ್ಟಿಯ ಮೂಲಕ ಸಪ್ತರ್ಷಿಗಳ ಮಾರ್ಗದರ್ಶನ ದೊರಕತೊಡಗಿತು. ಈ ಸಾಧನೆಯಿಂದ ಅವರು ೨೦೧೬ ರಲ್ಲಿ ‘ಸದ್ಗುರುಪದವಿಯನ್ನು ಪ್ರಾಪ್ತವಾದಾಗ ಅವರಲ್ಲಿನ ಅಹಂ ತೀರ ಕಡಿಮೆ ಆಗಿ ಕೆಟ್ಟ ಶಕ್ತಿಗಳ ತೊಂದರೆ ಸಂಪೂರ್ಣ ದೂರವಾಯಿತು. ಈ ಹಂತದ ಛಾಯಾಚಿತ್ರವನ್ನು ನೋಡಿದರೆ ಗಮನಕ್ಕೆ ಬರುವುದು.

ಸದ್ಗುರು ಪದವಿಯಲ್ಲಿ ವಿರಾಜಮಾನರಾದ ನಂತರ ಮುಂದೆ ನಿರ್ಗುಣದ ಕಾರ್ಯ ಆರಂಭವಾಗಿ ತ್ರಿಗುಣಗಳ ಕಾರ್ಯವು ಮುಗಿಯುತ್ತದೆ. ಆದ್ದರಿಂದ ಈ ಹಂತಕ್ಕೆ ಮತ್ತು ಮುಂದೆ ತ್ರಿಗುಣ ಗಳ ಸಂಖ್ಯೆಯನ್ನು ತೆಗೆಯಲು ಆಗುವುದಿಲ್ಲ, ಆದ್ದರಿಂದ ಅದನ್ನು ಕೋಷ್ಟಕದಲ್ಲಿ ಕೊಡಲಿಲ್ಲ.

೩ ಉ. ಸಪ್ತರ್ಷಿಗಳು ‘ಶ್ರೀಚಿತ್‌ಶಕ್ತಿ’ ಎಂದು ಘೋಷಿಸುವುದು (೨೦೨೨ ರ ಛಾಯಾಚಿತ್ರ)

ಸಪ್ತರ್ಷಿಗಳು ಹೇಳಿದಂತೆ, ೨೦೧೫ ರಿಂದ ಶ್ರೀಚಿತ್‌ಶಕ್ತಿ (ಸೌ.) ಗಾಡಗೀಳ ಇವರ ಭಾರತದಾದ್ಯಂತ, ಹಾಗೆಯೇ ವಿದೇಶಗಳಲ್ಲಿನ ದೈವೀ ಪ್ರವಾಸ ಆರಂಭವಾಯಿತು. ಸಪ್ತರ್ಷಿಗಳು ಹೇಳಿದ ರೀತಿಯಲ್ಲಿ ಕಠಿಣ ಪ್ರವಾಸ ಮಾಡಿ ಹಿಂದೂ ರಾಷ್ಟ್ರದ ಸ್ಥಾಪನೆ, ಸಾಧಕರ ರಕ್ಷಣೆ ಇತ್ಯಾದಿಗಳಿಗಾಗಿ ದೇವತೆಗಳ ದರ್ಶನವನ್ನು ಮತ್ತು ಆಶೀರ್ವಾದವನ್ನು ಪಡೆಯುವುದು ಮತ್ತು ಸಪ್ತರ್ಷಿಗಳ ಆಜ್ಞಾಪಾಲನೆ, ಇದು ಶ್ರೀಚಿತ್‌ಶಕ್ತಿ (ಸೌ.) ಗಾಡಗೀಳ ಇವರ ಕಾರ್ಯವಾಯಿತು. ೨೦೨೦ ರಲ್ಲಿ ಸಪ್ತರ್ಷಿಗಳು ಅವರಿಗೆ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ‘ಓರ್ವ ಆಧ್ಯಾತ್ಮಿಕ ಉತ್ತರಾಧಿಕಾರಿ’, ಹಾಗೆಯೇ ‘ಶ್ರೀಚಿತ್‌ಶಕ್ತಿ’ ಎಂದು ಕರೆದರು. ಅವರ ಈ ಹಂತಕ್ಕೆ ಅವರಲ್ಲಿನ ಭಾವ, ಅಂತರ್ಮನಸ್ಸಿನಲ್ಲಿನ ಸಾಧನೆ ಮತ್ತು ಸಾಧನೆಯ ತಳಮಳÀಗಳಿಂದ ಅತ್ಯುನ್ನತ ಮಟ್ಟವನ್ನು ತಲುಪಿರುವುದು ಕೋಷ್ಟಕದಿಂದ ಗಮನಕ್ಕೆ ಬರುತ್ತದೆ. ಇದೇ ಅವರಲ್ಲಿನ ದೇವತ್ವ ! ಸಪ್ತರ್ಷಿಗಳು ಶ್ರೀಚಿತ್‌ಶಕ್ತಿ (ಸೌ.) ಗಾಡಗೀಳ ಇವರಲ್ಲಿನ ಶ್ರೀ ಮಹಾಲಕ್ಷ್ಮಿದೇವಿಯ ಅಂಶದ ಬಗ್ಗೆ ಯಾವಾಗಲು ಉಲ್ಲೇಖಿಸುತ್ತಾರೆ, ಹಾಗೆಯೇ ಅವರ ಗುಣವೈಶಿಷ್ಟ್ಯಗಳ ಬಗ್ಗೆಯೂ ಪ್ರಶಂಸೆ ಮಾಡುತ್ತಾರೆ.

ಇಲ್ಲಿ ಕೊಟ್ಟಿರುವ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರ ಛಾಯಾಚಿತ್ರಗಳ ಕಡೆಗೆ ಒಂದು ಸಾಲಿನಿಂದ ನೋಡುತ್ತ ಹೋದರೆ ನಮಗೆ ಅವರ ಸಾಧನೆಯಲ್ಲಿ ಆದ ಹೆಚ್ಚಳ ಮತ್ತು ಅವರಲ್ಲಿ ಆದ ಅವತಾರತ್ವವು ಸಹಜವಾಗಿ ಗಮನಕ್ಕೆ ಬರುತ್ತದೆ. ಅವತಾರತ್ವವು ವ್ಯಕ್ತವಾಗಿರುವ, ಹಾಗೆಯೇ ವಿಕಸಿತವಾಗಿರುವ ಅವರ ಕೊನೆಯ ಛಾಯಾಚಿತ್ರದ ಕಡೆಗೆ ನಾವು ಆಕರ್ಷಿತರಾಗುತ್ತೇವೆ ಮತ್ತು ಅದರಲ್ಲಿ ಸಿಲುಕುತ್ತೇವೆ. ಇದೇ ದೇವತ್ವದ ಲಕ್ಷಣವಾಗಿದೆ !

೪. ಕೃತಜ್ಞತೆ
ನನಗೆ ಗುರುಕೃಪೆಯಿಂದಲೇ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳರ ಛಾಯಾಚಿತ್ರಗಳ ಅಧ್ಯಯನ ಮಾಡುವ ಸ್ಫೂರ್ತಿಯಾಯಿತು. ಅದಕ್ಕಾಗಿ ನಾನು ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ, ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಮತ್ತು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಈ ಮೂರು ಗುರುಗಳ ಚರಣಗಳಲ್ಲಿ ಕೃತಜ್ಞತೆಗಳನ್ನು ವ್ಯಕ್ತಪಡಿಸುತ್ತೇನೆ.’

– (ಸದ್ಗುರು) ಡಾ. ಮುಕುಲ ಗಾಡಗೀಳ, ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಗೋವಾ. (೯.೧೨.೨೦೨೩)