ಬಾಂಗ್ಲಾದೇಶದ ಹೈಕೋರ್ಟ್‌ನಲ್ಲಿ ಅರ್ಜಿ
ಢಾಕಾ (ಬಾಂಗ್ಲಾದೇಶ) – ಭಾರತೀಯ ದೂರದರ್ಶನ ಚಾನೆಲ್‌ಗಳ ಮೇಲೆ ನಿಷೇಧ ಹೇರುವಂತೆ ಬಾಂಗ್ಲಾದೇಶದ ಹೈಕೋರ್ಟ್‌ನಲ್ಲಿ ಅರ್ಜಿ ದಾಖಲಿಸಲಾಗಿದೆ. ಈ ಅರ್ಜಿಯಲ್ಲಿ ಬಾಂಗ್ಲಾದೇಶದ ಸಂಸ್ಕೃತಿ ಮತ್ತು ಸಮಾಜದ ಮೇಲೆ ಭಾರತೀಯ ಮಾಧ್ಯಮಗಳ ಪ್ರಭಾವ ಹೆಚ್ಚುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಲಾಗಿದೆ. ನ್ಯಾಯವಾದಿ ಇಖ್ಲಾಸ್ ಉದ್ದೀನ್ ಭುಯಾನ್ ಈ ಅರ್ಜಿ ಸಲ್ಲಿಸಿದ್ದಾರೆ. ‘ಕೇಬಲ್ ಟೆಲಿವಿಷನ್ ನೆಟ್‌ವರ್ಕ್ ಆಪರೇಷನ್ ಆಕ್ಟ್, 2006’ ಅಡಿಯಲ್ಲಿ ನಿಷೇಧಕ್ಕೆ ನಿರ್ದೇಶನಗಳನ್ನು ನೀಡಬೇಕೆಂದು ಈ ಮೂಲಕ ಒತ್ತಾಯಿಸಲಾಗಿದೆ. ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಮತ್ತು ಗೃಹ ಸಚಿವಾಲಯದ ಕಾರ್ಯದರ್ಶಿಗಳು, ಬಾಂಗ್ಲಾದೇಶದ ದೂರಸಂಪರ್ಕ ನಿಯಂತ್ರಣ ಆಯೋಗ ಮತ್ತು ಇತರರನ್ನು ಅರ್ಜಿಯಲ್ಲಿ ಪ್ರತಿವಾದಿಗಳಾಗಿ ಹೆಸರಿಸಲಾಗಿದೆ.
ಸ್ಟಾರ್ ಜಲ್ಸಾ, ಸ್ಟಾರ್ ಪ್ಲಸ್, ಝೀ ಬಾಂಗ್ಲಾ, ರಿಪಬ್ಲಿಕ್ ಬಾಂಗ್ಲಾ ಸೇರಿದಂತೆ ಎಲ್ಲಾ ಭಾರತೀಯ ಚಾನೆಲ್‌ಗಳನ್ನು ನಿಷೇಧಿಸುವಂತೆ ಒತ್ತಾಯಿಸಲಾಗಿದೆ. ಭಾರತೀಯ ವಾಹಿನಿಗಳ ಮೂಲಕ ಉದ್ರೇಕಕಾರಿ ಸುದ್ದಿ ಪ್ರಸಾರ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಹಾಗೂ ಬಾಂಗ್ಲಾದೇಶದ ಸಂಸ್ಕೃತಿಯನ್ನು ವಿರೋಧಿಸುವ ವಿಷಯಗಳ ಅನಿಯಂತ್ರಿತ ಪ್ರಸಾರದಿಂದಾಗಿ, ಇದು ಯುವಕರ ಮೇಲೆ ಪರಿಣಾಮ ಬೀರುತ್ತಿದೆ ಎಂದು ಹೇಳಲಾಗುತ್ತದೆ. ಯಾವುದೇ ನಿಯಮಗಳನ್ನು ಪಾಲಿಸದೆ ಈ ಚಾನೆಲ್ ಗಳನ್ನು ನಡೆಸಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ.
ಸಂಪಾದಕೀಯ ನಿಲುವುಭಾರತದಿಂದ ಸಿಗುವ ವಿದ್ಯುತ್, ಆಹಾರಧಾನ್ಯ, ಔಷಧ ಇತ್ಯಾದಿಗಳನ್ನೇ ನಂಬಿ ಬದುಕುತ್ತಿರುವ ಮತಾಂಧ ಬಾಂಗ್ಲಾದೇಶಿ ಮುಸ್ಲಿಮರು ಉದ್ಧಟರಾಗಿದ್ದೂ, ಅವರಿಗೆ ತಕ್ಕ ಪಾಠ ಕಲಿಸಲು ಭಾರತವೂ ಕಠಿಣ ನಿರ್ಧಾರ ಕೈಗೊಳ್ಳಬೇಕಾಗಿದೆ. ಈ ಧೈರ್ಯವನ್ನು ಭಾರತ ಈಗ ತೋರಿಸುವುದು ಅಗತ್ಯವಿದೆ ! |