Mehbooba Mufti’s Statement: ‘ಬಾಂಗ್ಲಾದೇಶ ಮತ್ತು ಭಾರತದಲ್ಲಿ ಅಲ್ಪಸಂಖ್ಯಾತರ ಮೇಲೆ ದೌರ್ಜನ್ಯಗಳು ನಡೆಯುತ್ತಿರುವುದರಿಂದ ಇಬ್ಬರ ನಡುವೆ ಯಾವುದೇ ವ್ಯತ್ಯಾಸವಿಲ್ಲವಂತೆ !’

ಜಮ್ಮು-ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಅವರ ಕೆಸರಾಟ !

ಜಮ್ಮು – ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ದೌರ್ಜನ್ಯಗಳಾಗುತ್ತಿವೆ. ಇಲ್ಲಿಯೂ ಅಲ್ಪಸಂಖ್ಯಾತರ ಮೇಲೆ ದೌರ್ಜನ್ಯಗಳಾಗುತ್ತಿದ್ದರೆ, ಭಾರತ ಮತ್ತು ಬಾಂಗ್ಲಾದೇಶದ ನಡುವಿನ ವ್ಯತ್ಯಾಸವೇನು ? ನನಗೆ  ಭಾರತ ಮತ್ತು ಬಾಂಗ್ಲಾದೇಶದ ನಡುವೆ ಯಾವುದೇ ವ್ಯತ್ಯಾಸ ಕಾಣುತ್ತಿಲ್ಲ ಎಂದು ಜಮ್ಮು-ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿಯವರು ಹೇಳಿಕೆ ನೀಡಿದ್ದಾರೆ. ಮುಫ್ತಿಯವರು ಸಂಭಲ(ಉತ್ತರ ಪ್ರದೇಶ)ನಲ್ಲಿ ನಡೆದ ಹಿಂಸಾಚಾರ ಮತ್ತು ಅಜ್ಮೇರ ದರ್ಗಾ ವಿಷಯದ ಅರ್ಜಿಗಳನ್ನು ಉಲ್ಲೇಖಿಸಿ ಈ ಹೇಳಿಕೆ ನೀಡಿದ್ದಾರೆ. ಮೆಹಬೂಬಾ ಮುಫ್ತಿಯವರು ಮಾತನ್ನು ಮುಂದುವರಿಸಿ, ದೇಶದಲ್ಲಿ ನಿರುದ್ಯೋಗ  ತಾಂಡವವಾಡುತ್ತಿದೆ. ಶಿಕ್ಷಣ ಮತ್ತು ಆರೋಗ್ಯದ ಸ್ಥಿತಿಯೂ ಹದಗೆಟ್ಟಿದೆ. ರಸ್ತೆಗಳೂ ಹದಗೆಟ್ಟಿವೆ. ಆದರೂ ದೇವಸ್ಥಾನಗಳ ಹುಡುಕಾಟದಲ್ಲಿ ಮಸೀದಿಗಳನ್ನು ಕೆಡವಲಾಗುತ್ತಿದೆ. (ಪಾಕಿಸ್ತಾನ ಮತ್ತು ಬಾಂಗ್ಲಾದೇಶದಲ್ಲಿ ಆರ್ಥಿಕ ಸ್ಥಿತಿ ಹದಗೆಟ್ಟಿರುವಾಗಲೂ ಅವರು ಹಿಂದೂಗಳ ಬೆನ್ನು ಬಿದ್ದಿದ್ದಾರೆ. ಈ ವಿಷಯದಲ್ಲಿ ಮೆಹಬೂಬಾ ಮುಫ್ತಿಯವರು ಮಾತನಾಡಬೇಕು ! ಕಾಶ್ಮೀರದಲ್ಲಿ ನಡೆಯುತ್ತಿರುವ ಅಭಿವೃದ್ಧಿಯು ಹಿಂದೂಗಳ ಹಣದಿಂದ ನಡೆಯುತ್ತಿದೆ ಎಂಬುದನ್ನೂ ಅವರು ಗಮನಿಸಬೇಕು ! – ಸಂಪಾದಕರು) ಹಿಂದೂ ಮತ್ತು ಮುಸಲ್ಮಾನ ಎಲ್ಲಾ ಧರ್ಮದ ಜನರು ೮೦೦ ವರ್ಷಗಳಷ್ಟು ಹಳೆಯ ಅಜ್ಮೇರ ಶರೀಫ ದರ್ಗಾವನ್ನು ಭೇಟಿ ನೀಡುತ್ತಾರೆ; ಆದರೆ ಕೆಲವರು ಅಲ್ಲಿ ದೇವಸ್ಥಾನವಿದೆ ಎಂಬ ಆಸೆಯಿಂದ ಅದನ್ನೂ ಅಗೆಯಲು ಪ್ರಾರಂಭಿಸಿದ್ದಾರೆ, ಎಂದು ಹೇಳಿದರು.