ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ ಇವರ ಆಧ್ಯಾತ್ಮಿಕ ವೈಶಿಷ್ಟ್ಯಗಳ ಬಗ್ಗೆ ಜ್ಯೋತಿಷ್ಯಶಾಸ್ತ್ರೀಯ ವಿಶ್ಲೇಷಣೆ !

‘ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ ಇವರು ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಆಧ್ಯಾತ್ಮಿಕ ಉತ್ತರಾಧಿಕಾರಿಗಳಲ್ಲಿ ಒಬ್ಬರಾಗಿದ್ದಾರೆ. ಅವರ ಜನ್ಮಕುಂಡಲಿಯಲ್ಲಿನ ಆಧ್ಯಾತ್ಮಿಕ ವೈಶಿಷ್ಟ್ಯಗಳ ಬಗ್ಗೆ ಜ್ಯೋತಿಷ್ಯಶಾಸ್ತ್ರೀಯ ವಿಶ್ಲೇಷಣೆಯನ್ನು ಇಲ್ಲಿ ಕೊಡಲಾಗಿದೆ.

೧. ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರ ವ್ಯಕ್ತಿತ್ವವನ್ನು ತೋರಿಸುವ ಘಟಕಗಳು

ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ

೧ ಅ. ಲಗ್ನರಾಶಿ (ಜಾತಕದಲ್ಲಿನ ಪ್ರಥಮ ಸ್ಥಾನದ ರಾಶಿ) : ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳರ ಜಾತಕದಲ್ಲಿ ಪ್ರಥಮ ಸ್ಥಾನದಲ್ಲಿ ‘ಕನ್ಯಾ’ ರಾಶಿ ಇದೆ. ಹೀಗೆ ಇದ್ದರೆ ವ್ಯಕ್ತಿಯಲ್ಲಿ ವಿವೇಕ ವೈಚಾರಿಕ ಪ್ರಬುದ್ಧತೆ, ವಿವೇಕಬುದ್ಧಿ, ಜಿಜ್ಞಾಸೆ, ಸೇವಾಭಾವ ಮತ್ತು ಮಾಯೆಯಿಂದ ಅಲಿಪ್ತ ಈ ವೈಶಿಷ್ಟ್ಯಗಳಿರುತ್ತವೆ. ಸತ್ತ್ವಗುಣಿಯಾಗಿರುವ ಕನ್ಯಾ ರಾಶಿಯ ವ್ಯಕ್ತಿಯ ಚಿತ್ತದಲ್ಲಿ ಹುಟ್ಟಿದಾಗಿನಿಂದಲೇ ಸಾತ್ತ್ವಿಕ ಸಂಸ್ಕಾರಗಳಿರುತ್ತವೆ.

೧ ಆ. ಜನ್ಮರಾಶಿ (ಜಾತಕದಲ್ಲಿನ ಚಂದ್ರನ ರಾಶಿ) : ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರ ಜಾತಕದಲ್ಲಿ ಚಂದ್ರನು ‘ವೃಷಭ’ ರಾಶಿಯಲ್ಲಿದ್ದಾನೆ. ವೃಷಭ ರಾಶಿಯ ಚಂದ್ರದಲ್ಲಿ ಸಹಜತೆ, ನಿರ್ಮಲತೆ, ಇತರರೊಂದಿಗೆ ಆತ್ಮೀಯತೆ, ಪ್ರೇಮಭಾವ, ಸೌಂದರ್ಯ, ಕಲಾ ನೈಪುಣ್ಯ ಮತ್ತು ನಿಸರ್ಗಪ್ರಿಯ ಈ ವೈಶಿಷ್ಟ್ಯಗಳಿವೆ. ವೃಷಭ ರಾಶಿಯವರು ಸ್ವತಃ ಆನಂದದಲ್ಲಿದ್ದು ಇತರರಿಗೂ ಆನಂದ ಕೊಡುತ್ತಾರೆ.

ಶ್ರೀ. ಯಶವಂತ ಕಣಗಲೇಕರ

೨. ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರ ಜನ್ಮಕುಂಡಲಿಯಲ್ಲಿ ಕಂಡುಬರುವ ವೈಶಿಷ್ಟ್ಯಗಳು

೨ ಅ. ಕಲಾನಿಪುಣತೆಯನ್ನು ನೀಡುವ ‘ಸ್ವಾತಿ’ ನಕ್ಷತ್ರದಲ್ಲಿನ ಶುಕ್ರ : ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರ ಜಾತಕದಲ್ಲಿ ಶುಕ್ರ ಗ್ರಹವು ‘ಸ್ವಾತಿ’ ನಕ್ಷತ್ರದಲ್ಲಿದೆ. ಶುಕ್ರ ಗ್ರಹವುಕಲೆ, ಸೌಂದರ್ಯ, ಪ್ರೇಮಭಾವ ಇವುಗಳಿಗೆ ಸಂಬಂಧಿಸಿದ್ದು ‘ಸ್ವಾತಿ’ ನಕ್ಷತ್ರವು ಸುಲಕ್ಷಣಿ ಮತ್ತು ಸಾತ್ತ್ವಿಕ ನಕ್ಷತ್ರವಾಗಿದೆ. ಈ ಯೋಗವು ಕಲಾ ನಿಪುಣತೆಯನ್ನು ನೀಡುತ್ತದೆ. ಶ್ರೀಚಿತ್‌ಶಕ್ತಿ ಗಾಡಗೀಳರು ಚಿಕ್ಕಂದಿನಲ್ಲಿ ರಂಗೋಲಿ, ಹಸ್ತಾಕ್ಷರ, ಚಿತ್ರಕಲೆ, ಭಾಷಣ, ಆಟ, ಸಂಗೀತ ಇಂತಹ ಅನೇಕ ಕ್ಷೇತ್ರಗಳಲ್ಲಿ ಭಾಗವಹಿಸುತ್ತಿದ್ದರು. ನಂತರ ಸನಾತನ ಸಂಸ್ಥೆಯ ಮಾರ್ಗದರ್ಶನದಲ್ಲಿ ಸಾಧನೆಯನ್ನು ಮಾಡುವಾಗ ಅವರು ಉತ್ಕೃಷ್ಟ ಮತ್ತು ಭಾವಪೂರ್ಣ ಸಂದರ್ಶನ ತೆಗೆದುಕೊಳ್ಳುವುದು, ಸಂದರ್ಶನದಲ್ಲಿ ಅಭಂಗಗಳಂತೆ ಪದ್ಯ ರಚಿಸಿ ಎಲ್ಲರ ಭಾವಜಾಗೃತಿ ಮಾಡುವುದು, ಸಾಧನೆಯ ಬಗೆಗಿನ ಕಾರ್ಯಕ್ರಮಗಳ ಪರಿಪೂರ್ಣ ಆಯೋಜನೆ ಮಾಡುವುದು, ತೀರ್ಥಕ್ಷೇತ್ರಗಳಿಂದ ತಂದಿರುವ ಅಮೂಲ್ಯ ವಸ್ತುಗಳ ಸುಂದರ ಪ್ರದರ್ಶನ ಇತ್ಯಾದಿ ಕಲಾತ್ಮಕ ಸೇವೆಗಳನ್ನು ಮಾಡಿದರು.

ಶ್ರೀ. ರಾಜ ಕರ್ವೆ

೨ ಆ. ಹುಟ್ಟಿದಾಗಿನಿಂದಲೇ ಪ್ರೇಮಭಾವದ ಕೊಡುಗೆ ಲಭಿಸುವುದು : ‘ಪ್ರೇಮಭಾವ’ವು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರ ಸ್ಥಾಯಿಭಾವವಾಗಿದೆ. ಅವರ ಜಾತಕದಲ್ಲಿ ‘ಗುರು’ ಮತ್ತು ‘ಶುಕ್ರ’ ಈ ಗ್ರಹಗಳ ಸಂಯೋಗವಿದೆ. ಈ ಯೋಗದಿಂದ ಅವರಿಗೆ ಹುಟ್ಟಿದಾಗಿನಿಂದ ಪ್ರೇಮಭಾವದ ಕೊಡುಗೆ ಲಭಿಸಿದೆ. ಎದುರಿನ ವ್ಯಕ್ತಿಗೆ ‘ಹೆಚೆಚ್ಚು ಪ್ರೀತಿಯನ್ನು ಹೇಗೆ ಕೊಡಬಹುದು’, ಎಂಬುದಕ್ಕಾಗಿ ಅವರ ಪರಿಶ್ರಮವಿರುತ್ತದೆ. ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳರು ಆಧ್ಯಾತ್ಮಿಕ ಪ್ರವಾಸದಲ್ಲಿದ್ದಾಗ ಸಾಧಕರ ಮನೆಯಲ್ಲಿ ವಾಸ್ತವ್ಯವಿರುವಾಗ ಸಾಧಕರ ಕುಟುಂಬದವರೊಂದಿಗೆ ಅವರು ಏಕರೂಪವಾಗುತ್ತಾರೆ. ಕೆಲವು ಸಾಧಕರ ಮನೆಯ ಸ್ಥಿತಿ ಸರಿಯಿಲ್ಲದಿದ್ದರೆ, ಹಾಲು, ತರಕಾರಿಗಳನ್ನು ತೆಗೆದುಕೊಂಡು ಹೋಗುತ್ತಾರೆ. ಕುಟುಂಬದ ಎಲ್ಲರೊಂದಿಗೆ ಪ್ರೀತಿಯಿಂದ ಮಾತನಾಡುತ್ತಾರೆ. ಆದ್ದರಿಂದ ಮರುದಿನ ಬೀಳ್ಕೊಡುವಾಗ ಕುಟುಂಬದವರಿಗೆ ಕಣ್ಣೀರು ಬರುತ್ತವೆ. ಈ ಬಗ್ಗೆ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರು ‘ನಾವು ಇತರರಿಗಾಗಿ ಸವೆಯಬೇಕು. ನಾನು ಅವರಿಗೆ ಕೇವಲ ಪ್ರೀತಿಯನ್ನು ಕೊಡುತ್ತೇನೆ. ಅವರು ಅದನ್ನು ಜೀವನವಿಡಿ ಗಮನದಲ್ಲಿಡುತ್ತಾರೆ, ಎಂದು ಹೇಳಿದರು.’

೨ ಆ ೧. ಇತರರೊಂದಿಗೆ ಆತ್ಮೀಯತೆಯನ್ನು ಬೆಳೆಸುವ ಕಲೆ : ಶ್ರೀಚಿತ್‌ಶಕ್ತಿ ಇವರು ಅಪರಿಚಿತ ವ್ಯಕ್ತಿಯೊಂದಿಗೂ ಸಹಜವಾಗಿ ಸ್ನೇಹ ಬೆಳೆಸುತ್ತಾರೆ. ಸಮಾಜದಲ್ಲಿನ ಅನೇಕ ಸಂತರಿಗೆ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರು ತಮ್ಮ ಪ್ರೇಮಭಾವದಿಂದ ಜೋಡಿಸಿಟ್ಟಿದ್ದಾರೆ. ಪ್ರೇಮಭಾವದಿಂದ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರು ಅಪಾರ ಆಧ್ಯಾತ್ಮಿಕ ಜನಪ್ರಿಯತೆಯನ್ನು ಮೂಡಿಸಿದ್ದಾರೆ.

೨ ಇ. ಗುರುಗಳ ಬಗ್ಗೆ ಉತ್ಕಟ ಭಾವ : ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರ ಜಾತಕದಲ್ಲಿ ‘ಗುರು’ ಮತ್ತು ‘ಶುಕ್ರ’ ಈ ಗ್ರಹಗಳ ಸಂಯೋಗವು ಜನ್ಮದತ್ತ ಗುರುಗಳ ಬಗೆಗಿನ ಭಾವವನ್ನು ತೋರಿಸುತ್ತದೆ. ೨೦೧೩ ರಲ್ಲಿ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ‘ಪೂ. (ಸೌ.) ಅಂಜಲಿ ಗಾಡಗೀಳ ಅಂದರೆ ಭಾವದ ಸಗುಣ ರೂಪ !’ ಎಂದಿದ್ದರು. ಶ್ರೀಚಿತ್‌ಶಕ್ತಿ ಇವರ ಕಣ್ಣುಗಳಲ್ಲಿ ಗುರುಗಳ ಬಗೆಗಿನ ಉತ್ಕಟಭಾವ ಕಾಣಿಸುತ್ತದೆ. ‘ಪ್ರತಿಯೊಂದು ಕೃತಿ ಗುರುಗಳಿಗೆ ಅಪೇಕ್ಷಿತವಿರುವಂತೆ ಆಗಬೇಕು’, ಎಂಬ ಅವರ ಹಂಬಲ/ ಧ್ಯಾಸ ಇರುತ್ತದೆ. ಅವರ ಭಾವಪೂರ್ಣ ವಾಣಿಯಿಂದ ಎಲ್ಲರಿಗೆ ಭಾವಜಾಗೃತಿಯಾಗುತ್ತದೆ. ನಾಡೀಪಟ್ಟಿಯ ಮೂಲಕ ಮಹರ್ಷಿಗಳು ಅವರನ್ನು ತುಂಬಾ ಪ್ರಶಂಸಿಸುತ್ತಾರೆ. ಇಷ್ಟೊಂದು ಪ್ರಶಂಸೆ ಆದರೂ ‘ತಾನು ವಿಶೇಷವಾಗಿದ್ದೇನೆ’, ಎಂದು ಅವರಿಗೆ ಅನಿಸುವುದಿಲ್ಲ.

೨ ಈ. ಪೂರ್ಣವೇಳೆ ಸಾಧನೆಗಾಗಿ ಮಾಯೆಯ ತ್ಯಾಗ : ಶ್ರೀಚಿತ್‌ಶಕ್ತಿ ಗಾಡಗೀಳರ ಕುಂಡಲಿಯಲ್ಲಿ ೮ ನೇ ಸ್ಥಾನದಲ್ಲಿ ಶನಿ ಗ್ರಹ ಮತ್ತು ೧೨ ನೇ ಸ್ಥಾನದಲ್ಲಿ ಕೇತು ಗ್ರಹವಿದೆ. ಇದೊಂದು ‘ಸನ್ಯಾಸಯೋಗ’ವಾಗಿದೆ. ಈ ಯೋಗವು ವೈರಾಗ್ಯ ಮತ್ತು ತ್ಯಾಗವನ್ನು ತೋರಿಸುತ್ತದೆ. ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಮತ್ತು ಅವರ ಪತಿ ಸದ್ಗುರು ಡಾ. ಮುಕುಲ ಗಾಡಗೀಳ ಇವರಿಬ್ಬರು ಉಚ್ಚ ಪದವೀಧರರಾಗಿದ್ದರೂ ತಾರುಣ್ಯದಲ್ಲಿಯೇ ಪೂರ್ಣ ವೇಳೆ ಸಾಧನೆಯ ನಿರ್ಧಾರ ಮಾಡಿದರು. ಆಗ ಅವರ ಮಗಳು ಕೇವಲ ೫ ವರ್ಷದವಳಾಗಿದ್ದಳು. ಶ್ರೀಚಿತ್‌ಶಕ್ತಿ (ಸೌ ಅಂಜಲಿ ಗಾಡಗೀಳ ಮತ್ತು ಸದ್ಗುರು ಡಾ. ಮುಕುಲ ಗಾಡಗೀಳರ ನಡುವಿನ ಸಂಬಂಧವು ಆಧ್ಯಾತ್ಮಿಕ ಸ್ತರದಲ್ಲಿದೆ. ಇಬ್ಬರ ಮನಸ್ಸಿನಲ್ಲಿಯೂ ಪರಸ್ಪರರ ಬಗ್ಗೆ ಪೂಜನೀಯ ಭಾವವಿದೆ.

ಕೃತಜ್ಞತೆ

ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳರ ಜನ್ಮಕುಂಡಲಿ ವಿಶ್ಲೇಷಣೆಯ ಅವಕಾಶ ಸಿಕ್ಕಿದ್ದಕ್ಕಾಗಿ ಕೋಟಿ ಕೋಟಿ ಕೃತಜ್ಞತೆಗಳು !’

– ಶ್ರೀ. ಯಶವಂತ ಕಣಗಲೇಕರ (ಜ್ಯೋತಿಷ್ಯ ವಿಶಾರದ) ಮತ್ತು ಶ್ರೀ. ರಾಜ ಕರ್ವೆ (ಜ್ಯೋತಿಷ್ಯ ವಿಶಾರದ), ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಗೋವಾ.