Missionaries Use Saffron Flag : ಛತ್ತೀಸ್‌ಗಢದಲ್ಲಿ ಕ್ರೈಸ್ತ ಧರ್ಮ ಪ್ರಚಾರಕ್ಕಾಗಿ ವಾಹನಗಳಲ್ಲಿ ಕೇಸರಿ ಧ್ವಜದ ಉಪಯೋಗ

ಹಿಂದೂ ಸಂಘಟನೆಗಳಿಂದ ವಿರೋಧ

ರಾಯಪುರ (ಛತ್ತೀಸ್‌ಗಢ) – ಛತ್ತೀಸ್‌ಗಢದ ಪಾಥರಿ ಗ್ರಾಮದಲ್ಲಿ ಕ್ರೈಸ್ತ ಧರ್ಮ ಪ್ರಚಾರ ಮಾಡಲು ವಾಹನಗಳ ಮೇಲೆ ಕೇಸರಿ ಧ್ವಜಗಳನ್ನು ಹಾಕಿ ಜನರ ದಾರಿ ತಪ್ಪಿಸಲಾಗುತ್ತಿದೆ. ಈ ಘಟನೆ ಬೆಳಕಿಗೆ ಬಂದನಂತರ ಸ್ಥಳೀಯ ಹಿಂದೂ ಯುವಕರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ರಿಕ್ಷಾ ಮೇಲೆ ಕೇಸರಿ ಧ್ವಜ ಹಾಕಿ ಕರಪತ್ರಗಳನ್ನು ಹಂಚುತ್ತಿದ್ದರು. ಹಾಗೆಯೇ ಯೇಸುವಿಗೆ ಸಂಬಂಧಿಸಿದ ವಸ್ತುಗಳನ್ನು ಮನೆಗಳಲ್ಲಿ ಹಂಚುತ್ತಿದ್ದರು. ಅವರು ಬಂದ ಕೂಡಲೇ ಸ್ಥಳೀಯ ಯುವಕರು, ಬಜರಂಗದಳದ ಕಾರ್ಯಕರ್ತರು ಎಚ್ಚೆತ್ತುಕೊಂಡರು. ಅವರು ಮಿಷನರಿಗಳನ್ನು ಬಲವಾಗಿ ವಿರೋಧಿಸಿದರು. ಆನಂತರ ಮಿಷನರಿಗಳು ಕಾಲ್ಕಿತ್ತರು. ಈ ಪ್ರಕರಣದಲ್ಲಿ ರಾಷ್ಟ್ರೀಯ ಬಜರಂಗದಳವು ಜಿಲ್ಲಾಧಿಕಾರಿಗಳಿಗೆ ಮನವಿ ನೀಡಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವಂತೆ ಆಗ್ರಹಿಸಿದೆ.

ಛತ್ತೀಸ್‌ಗಢದ ಭಾಜಪ ಸರಕಾರದಿಂದ ಮತಾಂತರ ವಿರೋಧಿ ಕಾನೂನು ಜಾರಿಯಾಗಲಿದೆ !

ಛತ್ತೀಸ್‌ಗಢದ ಭಾಜಪ ಸರಕಾರ ಕಾನೂನನ್ನು ಜಾರಿಗೆ ತಂದು, ಬಲವಂತವಾಗಿ, ಆಮಿಷವೊಡ್ಡಿ ಅಥವಾ ವಂಚನೆ ಮಾಡಿ ಮತಾಂತರ ಮಾಡುವವರಿಗೆ ಕಠಿಣ ಶಿಕ್ಷೆಯನ್ನು ನೀಡುವ ವ್ಯವಸ್ಥೆ ಇದೆ. (ಪ್ರತಿಯೊಂದು ರಾಜ್ಯಗಳು ಇಂತಹ ಕಾನೂನನ್ನು ಮಾಡುವುದಕ್ಕಿಂತ, ಕೇಂದ್ರ ಸರಕಾರವೇ ಇಡೀ ದೇಶಕ್ಕೆ ಈ ಸಂದರ್ಭದಲ್ಲಿ ಕಠಿಣ ಕಾನೂನು ಮಾಡುವುದು ಅವಶ್ಯಕವಾಗಿದೆ ! – ಸಂಪಾದಕರು) ಈ ಕಾನೂನಿನ ಪ್ರಕಾರ, ಮತಾಂತರದ ದೂರನ್ನು ಮೊದಲು ಜಿಲ್ಲಾ ಮ್ಯಾಜಿಸ್ಟ್ರೇಟ್‌ಗೆ ಕೊಡುವುದು ಅವಶ್ಯಕವಾಗಿದೆ. ಅಂತಹ ಪ್ರಕರಣಗಳಲ್ಲಿ ಕಾನೂನು ಪ್ರಕ್ರಿಯೆಯ ಮೂಲಕ ತಪ್ಪಿತಸ್ಥರಿಗೆ ಶಿಕ್ಷೆಯಾಗುವುದು.

ಸಂಪಾದಕೀಯ ನಿಲುವು

ಕ್ರೈಸ್ತ ಮಿಷನರಿಗಳು ಕಳೆದ ಅನೇಕ ದಶಕಗಳಿಂದ ಹಿಂದೂಗಳನ್ನು ಬಹಿರಂಗವಾಗಿ ಮತಾಂತರ ಮಾಡುತ್ತಿದ್ದರೂ, ಇಂದಿಗೂ ಹಿಂದೂಗಳಿಗೆ ತಡೆಯಲು ಸಾಧ್ಯವಾಗದಿರುವುದು ನಾಚಿಕೆಗೇಡು !