ದೇವಸ್ಥಾನದಲ್ಲಿ ಕಾಲಿ ಪೂಜೆಗಾಗಿ ನಡೆಯುವ ೧೦ ಸಾವಿರ ಪ್ರಾಣಿ ಬಲಿಯನ್ನು ಸ್ಥಗಿತಗೊಳಿಸಲು ಕೊಲಕಾತಾ ಉಚ್ಚ ನ್ಯಾಯಾಲಯದಿಂದ ನಿರಾಕರಣೆ
ಕೋಲಕಾತಾ (ಬಂಗಾಲ) – ಕೋಲಕಾತಾ ಉಚ್ಚ ನ್ಯಾಯಾಲಯದ ರಜೆಯಲ್ಲಿನ ಖಂಡಪೀಠದಿಂದ ಕಾಲಿ ಪೂಜೆಯ ನಿಮಿತ್ತ ದಕ್ಷಿಣ ದಿನಾಜಪುರದ ಬೋಲ್ಲಾ ಕಾಲಿ ದೇವಸ್ಥಾನದಲ್ಲಿನ ಪ್ರಾಣಿ ಬಲಿಯನ್ನು ಸ್ಥಗಿತಗೊಳಿಸಲು ನಿರಾಕರಿಸಿದೆ. ನ್ಯಾಯಾಲಯವು, ಹಿಂದೆ ಭಾರತದಲ್ಲಿನ ಧಾರ್ಮಿಕ ಪದ್ಧತಿಗಳು ಉತ್ತರ ಭಾರತಗಿಂತಲೂ ಬೇರೆ ಆಗಿವೆ. ಆದ್ದರಿಂದ ಈ ಪದ್ಧತಿಗಳನ್ನು ನಿಷೇಧ ಹೇರುವುದು ಸರಿಯಲ್ಲ. ಅನೇಕ ಜನಾಂಗಕ್ಕಾಗಿ ಇದು ‘ಆವಶ್ಯಕ ಧಾರ್ಮಿಕ ಪದ್ಧತಿ’ ಆಗಿರಬಹುದು. ನಾವು ಇಡೀ ಭಾರತವನ್ನು ಸಸ್ಯಾಹಾರಿ ಮಾಡಲು ಸಾಧ್ಯವಿಲ್ಲ ಎಂದು ಹೇಳಿದೆ.
೧. ಅಖಿಲ ಭಾರತೀಯ ಕೃಷಿ ಗೋ ಸೇವಕ ಸಂಘದಿಂದ ದಾಖಲಿಸಿರುವ ಅರ್ಜಿಯಲ್ಲಿ ನವಂಬರ್ 1ರಂದು ನಡೆಯುವ ಪ್ರಾಣಿ ಬಲಿಯನ್ನು ತಕ್ಷಣ ನಿಲ್ಲಿಸಲು ಆಗ್ರಹಿಸಲಾಗಿತ್ತು; ಆದರೆ ನ್ಯಾಯಾಲಯವು ಈ ಪ್ರಕರಣದ ಸಂಪೂರ್ಣ ವಿಚಾರಣೆ ನಡೆಸದೆ ಮಧ್ಯಂತರ ಆದೇಶ ನೀಡುವುದು ಸರಿಯಲ್ಲ ಎಂದು ಹೇಳುತ್ತಾ ತಡೆ ಆಜ್ಞೆ ನೀಡಲು ನಿರಾಕರಿಸಿದೆ.
೨. ಉಚ್ಚ ನ್ಯಾಯಾಲಯವು, ಪ್ರಾಣಿ ಬಲಿ ಅತ್ಯಾವಶ್ಯಕ ಧಾರ್ಮಿಕ ಪದ್ಧತಿ ಅಲ್ಲ ಮತ್ತು ಉತ್ತರ ಭಾರತ ಮತ್ತು ಪೂರ್ವ ಭಾರತದಲ್ಲಿ ಅತ್ಯಾವಶ್ಯಕ ಪದ್ಧತಿಯಲ್ಲಿ ದೊಡ್ಡ ವ್ಯತ್ಯಾಸವಿದೆ. ಪೌರಾಣಿಕ ಪಾತ್ರಗಳು ಪ್ರತ್ಯಕ್ಷದಲ್ಲಿ ಸಸ್ಯಾಹಾರಿ ಇದ್ದವು ಅಥವಾ ಮಾಂಸಾಹಾರಿ ಇದು ವಿವಾದದ ಅಂಶವಾಗಿದೆ.
೩. ರಾಜ್ಯದಲ್ಲಿನ ವಿವಿಧ ದೇವಸ್ಥಾನಗಳಲ್ಲಿ ಅತ್ಯಂತ ಭಯಂಕರ ಮತ್ತು ಅನಾಗರಿಕ ಪದ್ಧತಿಯಿಂದ ನಡೆಸಲಾಗುವ ಅಕ್ರಮ ಪ್ರಾಣಿ ಬಲಿಯನ್ನು ನಿಲ್ಲಿಸಲು ಭಾರತೀಯ ಪ್ರಾಣಿ ಕಲ್ಯಾಣ ಮಂಡಳಿಯು ತಕ್ಷಣ ಆದೇಶ ನೀಡಲು ಸಂಘಟನೆ ನ್ಯಾಯಾಲಯಕ್ಕೆ ಆಗ್ರಹಿಸಿತ್ತು. ಅವರಿಗೆ ‘ಎಲ್ಲಾ ದೇವಸ್ಥಾನಗಳಲ್ಲಿ ನಿಷೇದ ಹೇರಬೇಕೇ ? ಎಂದು ನ್ಯಾಯಾಲಯವು ಕೇಳಿರುವಾಗ ಅವರು, ಪ್ರಸ್ತುತ ದಕ್ಷಣ ದಿನಾಜಪುರದಲ್ಲಿನ ಒಂದು ವಿಶಿಷ್ಟ ದೇವಸ್ಥಾನದಲ್ಲಿ (ಬೋಲ್ಲ ಕಾಲಿ ದೇವಸ್ಥಾನ) ನಿಷೇಧಿಸಬೇಕಿದೆ ಎಂದು ಹೇಳಿದೆ.
೪. ಇದರ ಕುರಿತು ನ್ಯಾಯಾಲಯವು, ಒಂದು ವಿಷಯ ಸ್ಪಷ್ಟವಾಗಿದೆ, ಭಾರತದಲ್ಲಿನ ಪೂರ್ವದ ಪ್ರದೇಶವನ್ನು ಸಸ್ಯಾಹಾರಿ ಮಾಡುವುದಿದ್ದರೆ, ಅದು ಆಗಲು ಸಾಧ್ಯವಿಲ್ಲ. ನಿಮಗೆ ಕಲಂ ೨೮ ಪ್ರಕಾರ (ಪ್ರಾಣಿಗಳ ಪ್ರತಿಬಂಧಕ ಕಾನೂನು, ೧೯೬೦) ರ (ದೇಶ ವ್ಯಾಪಿ) ಸಕ್ರಮಕ್ಕೆ ಸವಾಲು ನೀಡುವ ಅಗತ್ಯವಿಲ್ಲ; ಕಾರಣ ಬಲಿಯ ಪದ್ಧತಿ ಕಾಲಿ ಪೂಜೆ ಅಥವಾ ಇತರೆ ಯಾವುದೇ ಉಪಾಸನೆಯಲ್ಲಿ ಅನಿವಾರ್ಯ ಧಾರ್ಮಿಕ ಪದ್ಧತಿ ಅಲ್ಲ. ಭಾರತದಲ್ಲಿನ ಪೂರ್ವ ಪ್ರದೇಶದಲ್ಲಿನ ನಾಗರಿಕರು ಅದರ ಪಾಲನೆ ಮಾಡುತ್ತಾರೆ. ಆಹಾರ ಸೇವನೆಯ ಅಭ್ಯಾಸಗಳು ಬೇರೆ ಬೇರೆ ಆಗಿವೆ.
೫. ಕಳೆದ ವರ್ಷ ಈ ಸಂಘಟನೆಯು ನ್ಯಾಯಾಲಯದ ಬಳಿ ‘ಬೋಲ್ಲಾ ಕಾಲಿ ಪೂಜೆಯ’ ನಿಮಿತ್ತ ೧೦ ಸಾವಿರ ಕುರಿಗಳು ಮತ್ತು ಎಮ್ಮೆಗಳ ಬಲಿಯ ಕುರಿತು ನಿಷೇಧ ಹೇರಲು ವಿನಂತಿಸಿತ್ತು. ಆ ಸಮಯದಲ್ಲಿ ಕೂಡ ನ್ಯಾಯಾಲಯವು ಪ್ರಾಣಿ ಬಲಿ ನಿಲ್ಲಿಸುವುದಕ್ಕಾಗಿ ಮಧ್ಯಂತರ ತೀರ್ಪು ನೀಡಲು ನಿರಾಕರಿಸಿತ್ತು. ಹಾಗಾಗಿ ಖಂಡಪೀಠವು ಬಂಗಾಲದಲ್ಲಿ ಪ್ರಾಣಿ ಬಲಿ ಕಾನೂನು ರೀತಿಯಲ್ಲಿ ಇದೆ ಅಥವಾ ಇಲ್ಲ, ಈ ಯಕ್ಷ ಪ್ರಶ್ನೆಯ ಕುರಿತು ವಿಚಾರ ಮಾಡುವುದಾಗಿ ಒಪ್ಪಿಕೊಂಡಿತ್ತು.
ಸಂಪಾದಕೀಯ ನಿಲುವುಬಕರಿ ಈದ್ ದಿನದಂದು ನಡೆಯುವ ಪ್ರಾಣಿ ಬಲಿಯ ಸಂದರ್ಭದಲ್ಲಿ ಯಾರು ಎಂದು ನ್ಯಾಯಾಲಯಕ್ಕೆ ಹೋಗುವುದಿಲ್ಲ, ಇದನ್ನು ತಿಳಿದುಕೊಳ್ಳಿ ! |