ಕಾಂಗ್ರೆಸ್ ಶಾಸಕ ಬಿ.ಕೆ. ಹರಿಪ್ರಸಾದ್ ಇವರನ್ನು ಮಾತಿನಲ್ಲೇ ಸರಿಯಾಗಿ ತಿವಿದ ಪೇಜಾವರ ಶ್ರೀಗಳು
ಮಂಗಳೂರು – ‘ಜಾತಿ ವ್ಯವಸ್ಥೆ ಅನಿಷ್ಟವಾಗಿದೆ’ ಎನ್ನುವವರೇ ಅದನ್ನು ಪೋಷಿಸುತ್ತಿದ್ದಾರೆ. ಒಂದೆಡೆ ‘ನಾವು ಜಾತ್ಯತೀತರಾಗಿದ್ದೇವೆ’ ಎನ್ನುತ್ತಿದ್ದರೆ, ಇನ್ನೊಂದೆಡೆ ಎಲ್ಲ ಕ್ಷೇತ್ರಗಳಲ್ಲೂ ಆ ಪದ್ಧತಿಯನ್ನು ಪೋಷಿಸುತ್ತಿದ್ದಾರೆ ಎಂದು ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, ಕಾಂಗ್ರೆಸ್ ಶಾಸಕ ಬಿ.ಕೆ. ಹರಿಪ್ರಸಾದ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ‘ಜಾತಿ ಎಣಿಕೆ ವಿಚಾರದಲ್ಲಿ ಸ್ವಾಮೀಜಿ ಕ್ಷುಲ್ಲಕ ರಾಜಕಾರಣಿಗಳ ಪಾತ್ರ ಮಾಡುತ್ತಿದ್ದಾರೆ’, ಎಂದು ಶಾಸಕ ಬಿ.ಕೆ. ಹರಿಪ್ರಸಾದ್ ಹೇಳಿದ್ದರು. ಇಲ್ಲಿನ ಕುಳಾಯಿ ಚಿತ್ರಾಪುರ ಮಠದಲ್ಲಿ ನಡೆದ ಧರ್ಮ ಸಭೆಯಲ್ಲಿ ಹರಿಪ್ರಸಾದ್ ಹೇಳಿಕೆಗೆ ಪೇಜಾವರ ಸ್ವಾಮೀಜಿ ಉತ್ತರಿಸಿದರು.
ಪೇಜಾವರ ಸ್ವಾಮೀಜಿಯವರು ಮಾತು ಮುಂದುವರೆಸಿ, “ನಾವು ಯಾರಿಗೂ ಕರೆದು ‘ಹೀಗೆ ಮಾಡಿ’ ಎಂದು ಹೇಳಿಲ್ಲ. ಜನರು ನಮ್ಮ ಬಳಿಗೆ ಬಂದು, ‘ನಿನಗೇನು ಅನಿಸುತ್ತದೆ?’ ಎಂದು ವಿಚಾರಿಸಿದರು. ‘ಜಾತ್ಯತೀತರು ಎಂದು ಹೇಳುತ್ತಲೇ ಜಾತಿ ಗುಂಪುಗಳ ಲೆಕ್ಕಾಚಾರ ಏಕೆ?’ ಎಂದು ಅಭಿಪ್ರಾಯಪಟ್ಟಿದ್ದೆವು. ಹಾಗೆ ಹೇಳುವುದು ಕ್ಷುಲ್ಲಕ ರಾಜಕಾರಣವಾಗಿದೆ. ‘ನಾವು ಹೇಳಿದ್ದು ತಪ್ಪು’ ಎಂದು ಅವರು ಹೇಳುತ್ತಾರೆ; ಹಾಗಾದರೆ ಇದು ಪ್ರಜಾಪ್ರಭುತ್ವ ದೇಶವೇ ಅಥವಾ ಅಲ್ಲವೇ? ಅದನ್ನು ನೀವೇ ನಿರ್ಧರಿಸಿ. ಅಂದರೆ ಸಮಾಜದಲ್ಲಿ ಮಾತನಾಡುವ ಹಕ್ಕು ರಾಜಕಾರಣಿಗಳಿಗೆ ಮಾತ್ರ ಇದೆಯೇ? ಸಾಮಾನ್ಯ ಜನರಿಗೆ ಅಲ್ಲವೇ? ‘ಪ್ರಜಾಪ್ರಭುತ್ವ ಮುಗಿದಿದೆ, ಈಗ ರಾಜಕಾರಣಿಗಳು ಆಳುತ್ತಿದ್ದಾರೆ’ ಎಂದು ಅವರಿಗೆ ಹೇಳುವುದಿದೆಯೇ ? ಪ್ರಜಾಸತ್ತಾತ್ಮಕ ದೇಶದಲ್ಲಿ ಮಠಾಧೀಶರಿಗೆ ಮಾತ್ರವಲ್ಲ, ಜನಸಾಮಾನ್ಯರಿಗೂ ತಮ್ಮ ಅಭಿಪ್ರಾಯ ವ್ಯಕ್ತಪಡಿಸುವ ಹಕ್ಕು ಇರಬೇಕಲಲ್ಲವೇ ? ಎಂದು ತಿವಿದಿದ್ದಾರೆ.