ಭಿಲವಾಡಾ (ರಾಜಸ್ಥಾನ) ಇಲ್ಲಿ ಮತಾಂಧ ಮುಸ್ಲಿಮರಿಂದ ಹಿಂದೂಗಳ ಮೇಲೆ ದಾಳಿ

  • ಭಾಜಪದ ಕಾರ್ಪೊರೇಟರ್ ಪತಿಗೆ ಚಾಕು ಇರಿತ !

  • 4 ಮುಸ್ಲಿಮರ ಬಂಧನ

ಭಿಲವಾಡಾ (ರಾಜಸ್ಥಾನ) – ಭಾಜಪ ನಾಯಕ ದೇವೇಂದ್ರ ಸಿಂಗ ಹಾಡಾ ಇವರು ಪಟಾಕಿ ಸಿಡಿಸಿದ್ದರಿಂದ ಮತಾಂಧ ಮುಸ್ಲಿಮರು ಇವರಿಗೆ ಚಾಕುವಿನಿಂದ ಇರಿದರು. ಹಾಗೆಯೇ ಅಲ್ಲಿ ಕಲ್ಲು ತೂರಾಟ ನಡೆಸಿ ವಾಹನಗಳನ್ನು ಸುಟ್ಟರು. ಈ ದಾಳಿಯಲ್ಲಿ ಹಾಡಾ ಇವರ ಅಣ್ಣನ ಮಗ ಯೊಗೇಶ ಹಾಗೂ ಮತ್ತೊಬ್ಬರು ಗಾಯಗೊಂಡರು. ಪೊಲೀಸರು ಈ ಪ್ರಕರಣದಲ್ಲಿ 4 ಜನರನ್ನು ಬಂಧಿಸಿದರು. ಮತ್ತು 25 ಜನರನ್ನು ವಶಕ್ಕೆ ಪಡೆದಿದ್ದಾರೆ. ಸಧ್ಯ ಇಲ್ಲಿ ದೊಡ್ಡ ಪ್ರಮಾಣದಲ್ಲಿ ಪೊಲೀಸ ಬಂದೋಬಸ್ತು ಇಡಲಾಗಿದೆ. ಗಾಯಗೊಂಡಿರುವ ದೇವೇಂದ್ರ ಹಾಡಾ ಇವರ ಪತ್ನಿ ಮಂಜೂ ದೇವಿಯವರು ಕಾರ್ಪೊರೇಟರ ಆಗಿದ್ದಾರೆ. ಈ ಪ್ರಕರಣದ ಬಗ್ಗೆ ಹಿಂದೂ ಸಂಘಟನೆಗಳು ಮತ್ತು ಭಾಜಪ ಅಕ್ಟೋಬರ 25 ರಂದು ಪ್ರತಿಭಟನೆ ನಡೆಸಿದರು.

1. ದೇವೆಂದ್ರ ಸಿಂಗ ಹಾಡಾ ಇವರು ಭೀಮಗಂಜ ಪೋಲಿಸ ಠಾಣೆಯ ಹತ್ತಿರ ಚಹಾ ಅಂಗಡಿ ನಡೆಸುತ್ತಾರೆ. ಅಕ್ಟೋಬರ್ 24 ರ ರಾತ್ರಿ, ಕೆಲವು ಯುವಕರೊಂದಿಗೆ ತಮ್ಮ ಅಂಗಡಿಯ ಮುಂದೆ ಪಟಾಕಿ ಸಿಡಿಸುತ್ತಿದ್ದರು. ಆ ವೇಳೆ 40 ರಿಂದ 50 ಮುಸ್ಲಿಮರು ಅಲ್ಲಿ ಜಮಾಯಿಸಿ ಪಟಾಕಿ ಸಿಡಿಸುವುದನ್ನು ವಿರೋಧಿಸಿದರು. ಇದಕ್ಕೆ ಹಾಡಾರವರು ದೀಪಾವಳಿಯ ವಾತಾವರಣವಿರುವುದರಿಂದ ಪಟಾಕಿಗಳನ್ನು ಸಿಡಿಸುತ್ತಿರುವುದಾಗಿ ಹೇಳಿದಾಗ ಅಝರುದ್ದೀನ ಹೆಸರಿನ ಯುವಕನು ಹಾಡಾಗೆ ಚಾಕುವಿನಿಂದ ಇರಿದನು. ಆ ಸಮಯದಲ್ಲಿ ಹಿಂದೂ ಯುವಕರು ವಿರೋಧಿಸಿದಾಗ ಅವರ ಮೇಲೆಯೂ ದಾಳಿ ನಡೆಸಿದನು.

2. ಈ ಘಟನೆಯ ಮಾಹಿತಿ ಸಿಗುತ್ತಲೇ ಇತರೆ ಹಿಂದೂಗಳು ಮತ್ತು ಪೊಲೀಸರು ಅಲ್ಲಿಗೆ ತಲುಪಿದಾಗ ಮುಸಲ್ಮಾನರು ಓಡಿ ಹೋದರು. ಪೊಲೀಸರು ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದರು. ಪೊಲೀಸರು ಅಜರುದ್ದೀನ ಲೋಹಾರ, ಆತನ ಸಹೋದರ ಶಾಹಿದ, ಫೈಜಾನ, ಫರ್ದೀನ, ಖಾಲಿಕ ಲೋಹರ ಸೇರಿದಂತೆ 40 ಜನರ ವಿರುದ್ಧ ಅಪರಾಧ ದಾಖಲಿಸಿದ್ದಾರೆ.

3. ಮತ್ತೊಂದೆಡೆ ಕಾರ್ಪೊರೇಟರ ಮಂಜುದೇವಿ ಹಾಡಾ ಇವರೂ ದೂರನ್ನು ದಾಖಲಿಸಿದ್ದಾರೆ. ಅವರು ತಮ್ಮ ದೂರಿನಲ್ಲಿ, ಮಂಗಳಾ ಚೌಕದಲ್ಲಿ ಜುನೇದ, ಜಾವೇದ ಮೋನು, ಯೂನಸ, ಇಮ್ರಾನ, ಜಫರ, ಓಮಾನ, ಜುನೆದ, ನೋಮಾನ, ಫಿರದೌಸ, ಟೀನಾ, ಜರೀನಾ, ಮುಮ್ತಾಜ, ಬಿಲ್ಕಿಸ್ ಮುಂತಾದವರು ಅವರ ಮನೆಯ ಮೇಲೆ ಕಬ್ಬಿಣದ ರಾಡ್, ಕೋಲು ಮತ್ತು ಕಲ್ಲುಗಳಿಂದ ದಾಳಿ ನಡೆಸಿದ್ದಾರೆ ಎಂದು ತಿಳಿಸಿದ್ದಾರೆ. ಅವರು ಇಲ್ಲಿನ ಜನರಿಗೆ ಮನೆಗಳನ್ನು ಖಾಲಿ ಮಾಡುವಂತೆ ಬೆದರಿಕೆ ಹಾಕುತ್ತಿದ್ದರು.

4. ಮಂಗಲಾ ಚೌಕ ಹತ್ತಿರದ ನಾಗೌರಿ ಮೊಹಲ್ಲಾದ ನಿವಾಸಿ ವಿನೋದ ಸೋನಿಯವರು ಪೊಲೀಸರಿಗೆ ನೀಡಿರುವ ದೂರಿನಲ್ಲಿ, ರಾತ್ರಿ 11 ಗಂಟೆ ಸುಮಾರಿಗೆ ಸಲೀಂ ಅನ್ಸಾರಿ, ಮೋನು ಅನ್ಸಾರಿ, ಯೂನಸ, ಇಮ್ರಾನ, ಖಾಲಿದ, ಬಿಲಾಲ ಸೇರಿದಂತೆ ಹಲವು ಮುಸ್ಲಿಂ ಮಹಿಳೆಯರು ಕಲ್ಲು ತೂರಾಟ ನಡೆಸಿದ್ದಾರೆ ಎಂದು ತಿಳಿಸಿದ್ದಾರೆ.

5. ಮೇಯರ್ ರಾಕೇಶ ಪಾಠಕ ಇವರ ನೇತೃತ್ವದಲ್ಲಿ ಭಾಜಪ ಮತ್ತು ಪಕ್ಷೇತರ ಕಾರ್ಪೊರೇಟರ ಪೊಲೀಸ ಅಧೀಕ್ಷಕರಾದ ಧರ್ಮೇಂದ್ರ ಸಿಂಗರನ್ನು ಭೇಟಿಯಾಗಿ, `ಆರೋಪಿಗಳನ್ನು ಕೂಡಲೇ ಬಂಧಿಸಿರಿ’ ಎಂದು ಬೇಡಿಕೆಯ ಮನವಿಯನ್ನು ಸಲ್ಲಿಸಿದರು. (ಪೊಲೀಸರಿಗೆ ಇಂತಹ ಮನವಿಯನ್ನು ಏಕೆ ನೀಡಬೇಕಾಗುತ್ತದೆ ? – ಸಂಪಾದಕರು)

6. ಕಾರ್ಪೊರೇಟರ್ ಮಾತನಾಡಿ, ಕಳೆದ ಕೆಲವು ಕಾಲಾವಧಿಯಿಂದ ನಗರದಲ್ಲಿ ವಿಶೇಷವಾಗಿ ಹಿಂದೂಗಳ ಹಬ್ಬಗಳಲ್ಲಿ ನಿರಂತರವಾಗಿ ಮತ್ತು ಯೋಜಿತ ದಾಳಿಗಳು ನಡೆಯುತ್ತಿವೆ ಎಂದು ಹೇಳಿದರು.

ಸಂಪಾದಕೀಯ ನಿಲುವು

ಬಾಂಗ್ಲಾದೇಶ ಮತ್ತು ಪಾಕಿಸ್ತಾನದಲ್ಲಿ ಹಿಂದೂಗಳ ಮೇಲೆ ಆಗುವಂತಹ ದಾಳಿಗಳು ಭಾರತದ ರಾಜಸ್ಥಾನದಲ್ಲಿ ಭಾಜಪ ಸರಕಾರವಿರುವಾಗ ಹಿಂದೂಗಳ ಮೇಲೆ ಮತ್ತು ಅದೂ ಭಾಜಪ ವ್ಯಕ್ತಿಯ ಮೇಲೆ ನಡೆಯುವುದನ್ನು ಹಿಂದೂಗಳು ನಿರೀಕ್ಷಿಸಿರಲಿಲ್ಲ !