ಬಾಂಗ್ಲಾದೇಶದಲ್ಲಿರುವ ಹಿಂದೂಗಳ ರಕ್ಷಣೆಗಾಗಿ ಜಗತ್ತು ಧ್ವನಿ ಎತ್ತಬೇಕು ! – ಪೂ. (ನ್ಯಾಯವಾದಿ) ರವೀಂದ್ರ ಘೋಷ್

  • ‘ಬಾಂಗ್ಲಾದೇಶ ಮೈನಾರಿಟಿ ವಾಚ್’ ನ ಪೂ. (ನ್ಯಾಯವಾದಿ) ರವೀಂದ್ರ ಘೋಷ್ ಇವರಿಂದ ವಿಡಿಯೋ ಮೂಲಕ ಮನವಿ

  • ಹಿಂದೂಗಳ ಮೇಲಿನ ದೌರ್ಜನ್ಯದ 3 ಸಾವಿರದ 36 ಪ್ರಕರಣಗಳ ಪ್ರತ್ಯಕ್ಷ ತನಿಖೆ !

ಢಾಕಾ (ಬಾಂಗ್ಲಾದೇಶ) – ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತ ಹಿಂದೂಗಳ ಮೇಲೆ ನಿರಂತರ ದಾಳಿಗಳು ನಡೆಯುತ್ತಿರುವುದು ಇಡೀ ಜಗತ್ತಿಗೆ ತಿಳಿದಿದೆ. 1971 ರಲ್ಲಿ ಬಾಂಗ್ಲಾದೇಶದ ಸ್ವಾತಂತ್ರ್ಯಕ್ಕಾಗಿ ಅಲ್ಪಸಂಖ್ಯಾತ ಹಿಂದೂಗಳು ದೊಡ್ಡ ತ್ಯಾಗ ಮಾಡಿದ್ದಾರೆ. ನಮ್ಮಲ್ಲಿ ಹಿಂದೂಗಳ ಮೇಲಿನ ದಾಳಿ ಮತ್ತು ದೌರ್ಜನ್ಯ ಪ್ರಕರಣಗಳ 3 ಸಾವಿರದ 36 ಪ್ರಕರಣಗಳ ವರದಿಗಳಿವೆ; ಆದರೆ ಶೇಖ್ ಹಸೀನಾ, ಖಲೀದಾ ಜಿಯಾ ಅಥವಾ ಬೇರೆ ಯಾರೇ ಆಗಿರಲಿ, ಹಿಂದೂಗಳ ಮೇಲಿನ ದೌರ್ಜನ್ಯವನ್ನು ತಡೆಯಲು ಅಥವಾ ಅವರ ಹಕ್ಕುಗಳನ್ನು ರಕ್ಷಿಸಲು ಯಾವುದೇ ಸರಕಾರವು ಯಾವುದೇ ಕ್ರಮಗಳನ್ನು ತೆಗೆದುಕೊಂಡಿಲ್ಲ. ಎಲ್ಲರ ಆಡಳಿತದಲ್ಲಿ ಹಿಂದೂಗಳು ತುಳಿತಕ್ಕೊಳಗಾದರು. ಬಾಂಗ್ಲಾದೇಶದ ಅಲ್ಪಸಂಖ್ಯಾತ ಹಿಂದೂಗಳ ರಕ್ಷಣೆಗಾಗಿ ವಿಶ್ವ ಸಮುದಾಯವು ಧ್ವನಿ ಎತ್ತಬೇಕು ಎಂದು ಬಾಂಗ್ಲಾದೇಶ ಮೈನಾರಿಟಿ ವಾಚ್‌ನ ಸಂಸ್ಥಾಪಕ ಅಧ್ಯಕ್ಷ ಪೂ. (ನ್ಯಾಯವಾದಿ) ರವೀಂದ್ರ ಘೋಷ್ ಇವರು ಕರೆ ನೀಡಿದರು. ಈ ಸಂಬಂಧ ಪ್ರಸಾರ ಮಾಡಿದ ವಿಡಿಯೋವನ್ನು ‘ಸನಾತನ ಪ್ರಭಾತ’ಕ್ಕೆ ಕಳುಹಿಸಿದ್ದಾರೆ.

ಪೂ. ಘೋಷ್ ಇವರು ಮಾತು ಮುಂದುವರೆಸಿ,

1. ನಾವು ಹಿಂದೂಗಳ ಮೇಲಿನ ದೌರ್ಜನ್ಯವನ್ನು ಪ್ರತಿಭಟಿಸುತ್ತಿದ್ದೇವೆ.

2. ಅಲ್ಪಸಂಖ್ಯಾತ ಹಿಂದೂಗಳನ್ನು ರಕ್ಷಿಸುವಂತೆ ನಾವು ಬಾಂಗ್ಲಾದೇಶ ಸರಕಾರಕ್ಕೆ ಪದೇ ಪದೇ ಮನವಿ ಮಾಡಿದ್ದೇವೆ, ಆದರೆ ಯಾವುದೇ ಪ್ರಯೋಜನವಾಗಲಿಲ್ಲ. ಇದನ್ನು ತಡೆಯದಿದ್ದರೆ ಬಾಂಗ್ಲಾದೇಶದಲ್ಲಿರುವ ಅಲ್ಪಸಂಖ್ಯಾತ ಹಿಂದೂಗಳ ನರಸಂಹಾರ ಆಗುತ್ತದೆ.

ಬಾಂಗ್ಲಾದೇಶದಲ್ಲಿರುವ ಹಿಂದೂಗಳ ಜೀವ ಮತ್ತು ಆಸ್ತಿಯನ್ನು ರಕ್ಷಿಸಲು ನಮ್ಮ ಹೋರಾಟ !

ಪೂ. ಘೋಷ್ ಇವರು ಮಾತು ಮುಂದುವರೆಸಿ, ನಾವು ಬಾಂಗ್ಲಾದೇಶದಲ್ಲಿ ಮಾನವ ಹಕ್ಕುಗಳನ್ನು ರಕ್ಷಿಸುವ ಜವಾಬ್ದಾರಿಯನ್ನು ಸ್ವೀಕರಿಸುವ ದೇಶದಲ್ಲಿ ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯಗಳು, ಕೊಲೆಗಳು, ಬೆದರಿಕೆಗಳು, ಸಾಮೂಹಿಕ ಅತ್ಯಾಚಾರ ಇತ್ಯಾದಿಗಳ ಗ್ರೌಂಡ್ ಜೀರೋ ಇನ್ವೆಸ್ಟಿಗೇಷನ್ ನಡೆಸಿದ್ದೇವೆ ಹೇಳಿದರು. ಬಾಂಗ್ಲಾದೇಶದಲ್ಲಿರುವ ಹಿಂದೂಗಳ ಜೀವ ಮತ್ತು ಆಸ್ತಿಯನ್ನು ರಕ್ಷಿಸಲು ನಾವು ಹೋರಾಡುತ್ತಿದ್ದೇವೆ. ನಾವು ಬಾಂಗ್ಲಾದೇಶದ ಢಾಕಾ, ಚಿತ್ತಗಾಂಗ್, ದಿನಾಜ್‌ಪುರ, ರಾಂಪುರ ಮೊದಲಾದ ಜಿಲ್ಲೆಗಳಿಗೆ ಭೇಟಿ ನೀಡಿ ಅಲ್ಲಿನ ಹಿಂದೂಗಳ ಮೇಲಿನ ದೌರ್ಜನ್ಯದ ಬಗ್ಗೆ ವಿಚಾರಿಸಿದೆವು ಎಂದು ಹೇಳಿದರು.