ಭೋಪಾಲ್ (ಮಧ್ಯಪ್ರದೇಶ) – ಮಧ್ಯಪ್ರದೇಶದ ಭಾಜಪ ಸರಕಾರವು ಅಪ್ರಾಪ್ತ ವಯಸ್ಸಿನ ಅತ್ಯಾಚಾರ ಪೀಡಿತ ಗರ್ಭಿಣಿ ಹುಡುಗಿ ಹಾಗೂ ಅತ್ಯಾಚಾರದಿಂದ ಜನಿಸಿದ ಮಕ್ಕಳಿಗಾಗಿ ಶೀಘ್ರದಲ್ಲೇ ಒಂದು ಯೋಜನೆಯನ್ನು ಪ್ರಾರಂಭಿಸಲಿದೆ. ಈ ಯೋಜನೆಯನ್ನು ಕೇಂದ್ರ ಸರಕಾರದ ನಿರ್ಭಯಾ ನಿಧಿಯಿಂದ ನಡೆಸಲಾಗುವುದು. ಸಂತ್ರಸ್ತೆಯ ವಯಸ್ಸು 23 ವರ್ಷ ಪೂರ್ಣವಾಗುವವರೆಗೆ ಅಥವಾ ಕೆಲಸ ಸಿಗುವವರೆಗೆ (ಯಾವುದು ಮೊದಲಿನದು ಅದು) ಅವಳ ಜೀವನಾಂಶಕ್ಕಾಗಿ ಪ್ರತಿ ತಿಂಗಳು 4 ಸಾವಿರ ರೂಪಾಯಿ ನೀಡಲಾಗುವುದು.
ನಿರ್ಭಯಾ ನಿಧಿಯಿಂದ ಪ್ರತಿಯೊಂದು ಜಿಲ್ಲೆಗೆ 10 ಲಕ್ಷ ರೂಪಾಯಿ ನೀಡಲಾಗುವುದು. ಈ ಮೊತ್ತವನ್ನು ಜಿಲ್ಲೆಯಲ್ಲಿಯಲ್ಲಿನ ಜಿಲ್ಲಾ ಅಧಿಕಾರಿಗಳ ಅನುಮೋದನೆಯೊಂದಿಗೆ ಸಂತ್ರಸ್ತೆಗೆ ಸಹಾಯ ಮಾಡಲು ಖರ್ಚು ಮಾಡಲಾಗುವುದು.