ವೀರಶೈವ ಲಿಂಗಾಯತರು ಹಿಂದೂಗಳೇ ಆಗಿದ್ದಾರೆ ಹಾಗಾಗಿ ಸರಕಾರ ಸ್ವತಂತ್ರ ‘ಧರ್ಮ’ದ ಮನ್ನಣೆ ನೀಡಬಾರದು ! – ಡಾ. ವಿಜಯ ಜಂಗಮ (ಸ್ವಾಮಿ), ಅಖಿಲ ವೀರಶೈವ ಲಿಂಗಾಯತ ಮಹಾಸಂಘ

ಮುಂಬಯಿ – ವೀರಶೈವ ಲಿಂಗಾಯತರು ಹಿಂದೂಗಳೇ ಆಗಿದ್ದಾರೆ. ಅವರಿಗೆ ಸರಕಾರ ಸ್ವತಂತ್ರ ‘ಧರ್ಮ’ವೆಂದು ಮನ್ನಣೆ ನೀಡಬಾರದು ಎಂದು ‘ಅಖಿಲ ವೀರಶೈವ ಲಿಂಗಾಯತ ಮಹಾಸಂಘ’ದ ರಾಷ್ಟ್ರೀಯ ಕಾರ್ಯಾಧ್ಯಕ್ಷ ಡಾ. ವಿಜಯ ಜಂಗಮ ಇವರು ಕರೆ ನೀಡಿದ್ದಾರೆ. ವಿಧಾನಸಭೆಯ ಚುನಾವಣೆಯ ಹಿನ್ನೆಲೆಯಲ್ಲಿ ಡಾ. ವಿಜಯ ಜಂಗಮ ಅವರು ಲಿಂಗಾಯತ ಸಮಾಜದ ವಿವಿಧ ಬೇಡಿಕೆಗಳ ಕುರಿತು ಕರಪತ್ರಗಳನ್ನು ಪ್ರಕಟಿಸಿದ್ದಾರೆ. ಅದರಲ್ಲಿ ಅವರು ಈ ಮನವಿಯನ್ನು ಮಾಡಿದ್ದಾರೆ.

ಕರಪತ್ರದಲ್ಲಿ ಡಾ. ವಿಜಯ ಜಂಗಮ ಇವರು, ವೀರಶೈವ ಲಿಂಗಾಯತ ಸಮುದಾಯದಲ್ಲಿನ ಇತರೆ ಹಿಂದುಳಿದ ಪ್ರವರ್ಗದಲ್ಲಿ ಹಾಗೆಯೇ ಇತರೆ ಪ್ರವರ್ಗದ ಮೀಸಲಾತಿಯ ವಿಷಯದ ಕುರಿತು ಸರಕಾರ ತನ್ನ ನಿರ್ಣಯ ತಿಳಿಸಬೇಕು. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಯಾವ ರಾಜಕೀಯ ಪಕ್ಷ ತನ್ನ ಪ್ರಣಾಳಿಕೆಯಲ್ಲಿ ಸ್ಪಷ್ಟವಾಗಿ ವೀರಶೈವ ಲಿಂಗಾಯತ ಸಮುದಾಯದ ಅಡಚಣೆಯನ್ನು ದೂರಗೊಳಿಸುವುದಾಗಿ ಭರವಸೆ ನೀಡುವುದೋ, ಆ ಪಕ್ಷದ ಮುಖಂಡರೊಂದಿಗೆ ಚರ್ಚಿಸಿ ಸಮುದಾಯವು ಅವರಿಗೆ ಮತ ನೀಡುವಂತೆ ಮನವಿ ಮಾಡಲಾಗುವುದು. ಮಹಾಸಂಘದ ಯಾವುದೇ ಪದಾಧಿಕಾರಿ ಅಥವಾ ಕಾರ್ಯಕರ್ತರು ಸಮುದಾಯವನ್ನು ಗ್ರಹಿಸಿ ಯಾವುದೇ ರಾಜಕೀಯ ಪಕ್ಷದೊಂದಿಗೆ ಕೈಜೋಡಿಸಿ ಮತದಾನದ ವ್ಯವಹಾರ ಮಾಡುತ್ತಾರೆಯೋ, ಅವರನ್ನು ತಕ್ಷಣವೇ ಮಹಾಸಂಘದಿಂದ ಅಮಾನತುಗೊಳಿಸಲಾಗುವುದು. ನಾವು ಯಾವುದೇ ರಾಜಕೀಯ ಪಕ್ಷಕ್ಕೆ ನೇರ ಬೆಂಬಲವನ್ನು ನೀಡುವುದಿಲ್ಲ. ಸಮುದಾಯವನ್ನು ಗ್ರಹಿಸಿ ಒಂದು ವೋಟ ಬ್ಯಾಂಕ ನಾವು ಸಹಿಸುವುದಿಲ್ಲ ಎಂದು ಹೇಳಿದರು.