ಪ್ರಯಾಗರಾಜ್(ಉತ್ತರ ಪ್ರದೇಶ) – ರೈಲ್ವೆಯಲ್ಲಿ ಟಿಕೆಟ್ ಇಲ್ಲದೆ ಪ್ರಯಾಣಿಸುವ ಸಾಮಾನ್ಯ ವ್ಯಕ್ತಿ ಸಿಕ್ಕಿಬಿದ್ದರೆ, ಅವರ ವಿರುದ್ಧ ಕ್ರಮಕೈಗೊಳ್ಳಲಾಗುತ್ತದೆ; ಆದರೆ ಪೊಲೀಸ್ ಪಡೆಗಳಲ್ಲಿ ಕೆಲಸ ಮಾಡುವ ಸಿಬ್ಬಂದಿ ಟಿಕೆಟ್ ಇಲ್ಲದೆ ಫಸ್ಟಕ್ಲಾಸ್‌ನಲ್ಲಿ ಪ್ರಯಾಣಿಸುತ್ತಿರುವುದು ಕಂಡುಬಂದಿದೆ. ಉತ್ತರ ಪ್ರದೇಶದ ಪ್ರಯಾಗ್‌ರಾಜ್ ರೈಲ್ವೆ ವಿಭಾಗವು ಅಂತಹ ಟಿಕೆಟ್ ಇಲ್ಲದೆ ಪ್ರಯಾಣಿಸುವ ಪೊಲೀಸರ ವಿರುದ್ಧ ಕ್ರಮ ಕೈಗೊಂಡಿದ್ದಾರೆ. ಕಳೆದ 6 ತಿಂಗಳಲ್ಲಿ ವಿವಿಧ ರೈಲ್ವೆ ಇಲಾಖೆಗಳಿಂದ ಟಿಕೆಟ್ ಇಲ್ಲದೆ ಪ್ರಯಾಣಿಸಿದ 400 ಪೊಲೀಸರಿಗೆ ದಂಡ ತುಂಬಲು ನೋಟಿಸ್ ಕಳುಹಿಸಲಾಗಿದೆ. ಟಿಕೆಟ್ ಇಲ್ಲದೇ ಪ್ರಯಾಣ ಮಾಡುವವರ ವಿರುದ್ಧ ರೈಲ್ವೆಯ ಹಿರಿಯ ಅಧಿಕಾರಿಗಳು ಕಾರ್ಯಾಚರಣೆ ಆರಂಭಿಸಿದ್ದರು. ಅದರಲ್ಲಿ ಅನೇಕ ಪೋಲೀಸರು ಹವಾನಿಯಂತ್ರಿತ ಬೋಗಿಗಳಲ್ಲಿ ಪ್ರಯಾಣ ಮಾಡುವಾಗ ಸಿಕ್ಕಿಬಿದ್ದಿದ್ದಾರೆ. ಈ ಪೊಲೀಸರಿಂದ ಇತರ ಪ್ರಯಾಣಿಕರಿಗೆ ಅನಾವಶ್ಯಕವಾಗಿ ತೊಂದರೆ ಅನುಭವಿಸಬೇಕಾಗುತ್ತಿತ್ತು.
‘ಭಾರತೀಯ ರೈಲ್ವೇ ಟಿಕೆಟ್ ತಪಾಸಣೆ ಸಂಘ’ದ ವಿಭಾಗೀಯ ಸಚಿವ ಸಂತೋಷ ಕುಮಾರ್ ಮಾತನಾಡಿ, ಕೆಲವು ಪೊಲೀಸ್ ಅಧಿಕಾರಿಗಳು ತಮ್ಮ ಅಧಿಕಾರದ ದುರ್ಬಳಕೆ ಮಾಡಿಕೊಂಡು ಹವಾನಿಯಂತ್ರಿತ ಬೋಗಿಗಳಲ್ಲಿ ಪ್ರಯಾಣಿಸುತ್ತಾರೆ. ಕೆಲವೊಮ್ಮೆ ಈ ಪೊಲೀಸ್ ಅಧಿಕಾರಿಗಳು ಪ್ರಯಾಣಿಕರಿಗೆ ಮತ್ತು ರೈಲ್ವೆ ಸಿಬ್ಬಂದಿಗಳಿಗೂ ಬೆದರಿಕೆ ಹಾಕುತ್ತಾರೆ ಎಂದು ಹೇಳಿದರು.
ಸಂಪಾದಕೀಯ ನಿಲುವುಇಂತಹ ಪೊಲೀಸರಿಗೆ ರೈಲಿನಲ್ಲಿ ಟಿಕೆಟ್ ಇಲ್ಲದೆ ಪ್ರಯಾಣಿಸಲು ಅನುವು ಮಾಡಿಕೊಡುವ ರೈಲ್ವೆಯ ಜವಾಬ್ದಾರಿಯುತ ಅಧಿಕಾರಿಗಳ ವಿರುದ್ಧವೂ ಕ್ರಮ ತೆಗೆದುಕೊಳ್ಳಬೇಕು ! |