ಜಮ್ಮು-ಕಾಶ್ಮೀರದಲ್ಲಿ ಭಯೋತ್ಪಾದಕ ದಾಳಿ; ಓರ್ವ ಡಾಕ್ಟರ್ ಸಹಿತ ೬ ಕಾರ್ಮಿಕರ ಸಾವು

  • ಸುರಂಗದ ಕಾರ್ಯ ನಡೆಯುತ್ತಿರುವಾಗ ದಾಳಿ

  • ಹೊಣೆ ಹೊತ್ತ ಭಯೋತ್ಪಾದಕ ಸಂಘಟನೆ ‘ದ ರೇಝಿಸ್ಟನ್ಸ್ ಫ್ರಂಟ್’

ಶ್ರೀನಗರ (ಜಮ್ಮು-ಕಾಶ್ಮೀರ) – ಜಮ್ಮು ಕಾಶ್ಮೀರದ ಗಾಂದರಬಲ ಜಿಲ್ಲೆಯಲ್ಲಿನ ಗಗನಗೀರ ಪ್ರದೇಶದಲ್ಲಿ ಭಯೋತ್ಪಾದಕರು ನಡೆಸಿರುವ ದಾಳಿಯಲ್ಲಿ ಓರ್ವ ಡಾಕ್ಟರ್ ಮತ್ತು ೬ ಕಾರ್ಮಿಕರು ಹತರಾಗಿದ್ದಾರೆ. ಹಾಗೂ ಅನೇಕರು ಗಾಯಗೊಂಡಿದ್ದಾರೆ. ಈ ಕಾರ್ಮಿಕರು ಸುರಂಗ ನಿರ್ಮಾಣದ ಯೋಜನೆಯಲ್ಲಿ ಕೆಲಸ ಮಾಡುತ್ತಿರುವಾಗ ದಾಳಿ ನಡೆದಿದೆ. ಈ ಕಾರ್ಮಿಕರು ಗಗನಗೀರ ಸ್ಥಳಕ್ಕೆ ಸೋನಮರ್ಗ ಜೋಡಿಸುವ ಝೆಡ್ ಮೊರ ಸುರಂಗದಲ್ಲಿ ಕೆಲಸ ಮಾಡುವ ಕಟ್ಟಡ ನಿರ್ಮಾಣ ತಂಡದ ಭಾಗವಾಗಿತ್ತು. ಈ ಘಟನೆಯ ನಂತರ ಸುರಕ್ಷಾ ದಳದಿಂದ ಸಂಪೂರ್ಣ ಪರಿಸರವನ್ನು ಸುತ್ತುವರೆದಿದ್ದು ಭಯೋತ್ಪಾದಕರನ್ನು ಹಿಡಿಯುವುದಕ್ಕಾಗಿ ಶೋಧ ಕಾರ್ಯ ನಡೆಸಲಾಗುತ್ತಿದೆ. ಈ ಘಟನೆಯ ಬಗ್ಗೆ ಮುಖ್ಯಮಂತ್ರಿ ಓಮರ್ ಅಬ್ದುಲ್ಲಾ ಇವರು ‘ನಾನು ಈ ದಾಳಿಯನ್ನು ತೀವ್ರವಾಗಿ ಖಂಡಿಸುತ್ತೇನೆ ಮತ್ತು ಸಂತ್ರಸ್ತ ಕುಟುಂಬದವರ ಕುರಿತು ಸಹಾನುಭೂತಿ ವ್ಯಕ್ತಪಡಿಸುತ್ತೇನೆ’, ಎಂದು ಹೇಳಿದ್ದಾರೆ. (ಇದಲ್ಲದೆ ಓಮರ್ ಅಬ್ದುಲ್ಲ ಇನ್ನೇನು ಮಾತನಾಡಲು ಸಾಧ್ಯ? ಒಂದೊಂದು ಜೀವಾದಿಗಳನ್ನು ಮುಗಿಸಿ ಕಾಶ್ಮೀರವನ್ನು ಭಯೋತ್ಪಾದ ಮುಕ್ತ ಮಾಡೋಣ, ಹೀಗೆ ಅಬ್ದುಲ್ಲ ಕುಟುಂಬದವರು ಒಮ್ಮೆಯಾದರೂ ಹೇಳಿದ್ದಾರೆಯೇ ? ಹಾಗೆ ಅವರ ಇಚ್ಛೆ ಆದರೂ ಇದೆಯೇ ? – ಸಂಪಾದಕರು) ಇಲ್ಲಿಯವರೆಗೆ ಬೆಳಕಿಗೆ ಬಂದಿರುವ ಮಾಹಿತಿಯ ಪ್ರಕಾರ, ‘ದ ರೇಝಿಸ್ಟನ್ಸ್ ಫ್ರಂಟ್’ ಈ ಭಯೋತ್ಪಾದಕ ಸಂಘಟನೆ ದಾಳಿಯ ಹೊಣೆ ಹೊತ್ತಿದೆ.

ಅಕ್ಟೋಬರ್ ೨೦ ರಂದು ರಾತ್ರಿ ಸುಮಾರು ೮.೩೦ ಕ್ಕೆ ಈ ಘಟನೆ ನಡೆದಿದೆ. ಓರ್ವ ಪ್ರತ್ಯಕ್ಷದರ್ಶಿಯು, ಅಡುಗೆ ಮಾಡುತ್ತಿರುವಾಗ ಭಯೋತ್ಪಾದಕರು ಅಲ್ಲಿ ಉಪಸ್ಥಿತರಿದ್ದ ಕಾರ್ಮಿಕರ ಮೇಲೆ ತೀವ್ರ ಗುಂಡಿನ ದಾಳಿ ನಡೆಸಿದರು. ಈ ಗುಂಡಿನ ದಾಳಿಯಿಂದ ಅಲ್ಲೇ ಇರುವ ೨ ವಾಹನಗಳಿಗೆ ಬೆಂಕಿ ಅಂಟಿಕೊಂಡಿತು ಮತ್ತು ಸುಟ್ಟುಹೋದವು.

ಮೃತರು ಮತ್ತು ಗಾಯಗೊಂಡವರ ಹೆಸರುಗಳು

ಮಧ್ಯಪ್ರದೇಶದಲ್ಲಿನ ತಾಂತ್ರಿಕ ಕಾರ್ಮಿಕ ಅನಿಲ್ ಶುಕ್ಲ, ಬಿಹಾರದ ಫಾಹಿಮ್ ನಸೀರ್, ಮಹಮ್ಮದ್ ಹರೀಫ್ ಮತ್ತು ಕಲೀಮ್, ಪಂಜಾಬದ ಗುರುಮಿತ, ಜಮ್ಮು ಕಾಶ್ಮೀರದಲ್ಲಿನ ಶಶಿ ಅಬ್ರೋಲ್ ಮತ್ತು ಡಾಕ್ಟರ್ ಶಾಹನವಾಜ ಇವರು ಸಾವನ್ನಪ್ಪಿರುವವರು. ಇದಲ್ಲದೆ ಇಂದರ ಯಾದವ, ಮೋಹನ್ ಲಾಲ, ಮುಶ್ತಾಕ ಅಹಮದ್ ಲೋನ್, ಇಶ್ಫಾಕ್ ಅಹಮದ್ ಭಟ್ ಮತ್ತು ಜಗತಾರ ಸಿಂಹ ಇವರು ಗಾಯಗೊಂಡವರು.

ದಾಳಿ ಮಾಡಿದವರನ್ನು ಬಿಡುವುದಿಲ್ಲ !.- ಕೇಂದ್ರ ಗೃಹ ಸಚಿವ ಅಮಿತ್ ಶಹಾ

ಈ ದಾಳಿಯ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ ಶಾ ಇವರು, ಗಗನಗೀರದಲ್ಲಿ ನಾಗರೀಕರ ಮೇಲೆ ನಡೆದಿರುವ ಭಯೋತ್ಪಾದಕ ದಾಳಿ ಹೇಡಿತನದ್ದು ಮತ್ತು ಹೇಯ ಕೃತ್ಯವಾಗಿದೆ. ಈ ಹೇಯ ಕೃತ್ಯದಲ್ಲಿ ಭಾಗಿ ಆಗಿರುವವರನ್ನು ಬಿಡುವುದಿಲ್ಲ ಮತ್ತು ಅವರಿಗೆ ನಮ್ಮ ಭದ್ರತಾ ಪಡೆಯು ಬಲವಾಗಿ ಪ್ರತ್ಯುತ್ತರ ನೀಡುವರು. (ಇಂತಹ ಎಷ್ಟೇ ಭಯೋತ್ಪಾದಕರನ್ನು ಮುಗಿಸಿದರು, ಅದರ ಹಿಂದೆಯೇ ಬೇರೆ ಭಯೋತ್ಪಾದಕರು ದಾಳಿ ನಡೆಸಲು ಸಿದ್ಧರಾಗುತ್ತಾರೆ, ಇದು ಕಳೆದ ೩೫ ವರ್ಷಗಳಿಂದ ಇಲ್ಲಿ ನಡೆಯುತ್ತಿದೆ. ಕಾಶ್ಮೀರವನ್ನು ಭಯೋತ್ಪಾದನೆಯಿಂದ ಮುಕ್ತಗೊಳಿಸುವುದಿದ್ದರೆ, ಭಯೋತ್ಪಾದಕರನ್ನು ನಿರ್ಮಾಣ ಮಾಡುವ ಪಾಕಿಸ್ತಾನವನ್ನು ನಾಶ ಮಾಡುವ ಅವಶ್ಯಕತೆ ಇದೆ. ಇಲ್ಲವಾದರೆ ಇಂತಹ ಘಟನೆಗಳು ಘಟಿಸುತ್ತಲೇ ಇರುತ್ತವೆ, ಇದು ವಸ್ತುಸ್ಥಿತಿ ಆಗಿದೆ ! – ಸಂಪಾದಕರು) ಈ ದುಃಖದ ಪ್ರಸಂಗದಲ್ಲಿ ನಾನು ಮೃತರ ಕುಟುಂಬದ ಕುರಿತು ಮನಪೂರ್ವಕವಾಗಿ ಸಹಾನುಭೂತಿ ವ್ಯಕ್ತಪಡಿಸುತ್ತೇನೆ. ಗಾಯಗೊಂಡವರು ಆದಷ್ಟು ಬೇಗನೆ ಗುಣಮುಖರಾಗಲೆಂದು ಪ್ರಾರ್ಥಿಸುತ್ತೇನೆ, ಎಂದು ಹೇಳಿದರು.

ಸಂಪಾದಕೀಯ ನಿಲುವು

ಜಮ್ಮು-ಕಾಶ್ಮೀರದಲ್ಲಿ ಹೊಸ ಸರಕಾರ ಸ್ಥಾಪನೆ ಆದ ನಂತರ ತಕ್ಷಣ ಈ ದಾಳಿ ನಡೆಯುತ್ತದೆ, ಇದರ ಅರ್ಥ ‘ಕಾಶ್ಮೀರದಲ್ಲಿ ಪ್ರಜಾಪ್ರಭುತ್ವ ಮಾರ್ಗದಿಂದ ಯಾವುದೇ ವ್ಯವಸ್ಥೆ ನಾವು ಮುಂದುವರೆಸಲು ಬಿಡುವುದಿಲ್ಲ’, ಇದನ್ನೇ ಭಯೋತ್ಪಾದಕರು ತೋರಿಸುತ್ತಿದ್ದಾರೆ. ಇದು ನೋಡಿದರೆ ಕಾಶ್ಮೀರವನ್ನು ಸೈನ್ಯಕ್ಕೆ ಒಪ್ಪಿಸಿ ಜಿಹಾದಿ ಭಯೋತ್ಪಾದನೆ ಮತ್ತು ಅದಕ್ಕೆ ಸಹಾಯ ಮಾಡುವ ದೇಶದ್ರೋಹಿ ಮತಾಂಧ ಮುಸಲ್ಮಾನರಿಗೆ ಪಾಠ ಕಲಿಸುವುದು ಅಗತ್ಯವಾಗಿದೆ !