ಕೆನಡಾ ಮತ್ತು ಅಮೆರಿಕಾ ದೇಶದಿಂದ ಪೋಷಿಸಿರುವ ಖಲಿಸ್ತಾನಿ ಭಯೋತ್ಪಾದಕ ಗುರುಪತವಂತ ಸಿಂಹ ಇವನ ಬೆದರಿಕೆ

ನವ ದೆಹಲಿ – ‘ಸಿಖ್ ಫಾರ್ ಜಸ್ಟಿಸ್’ ಈ ನಿಷೇಧಿತ ಖಲಿಸ್ತಾನಿ ಭಯೋತ್ಪಾದಕ ಸಂಘಟನೆಯ ಮುಖ್ಯಸ್ಥ ಗುರುಪತವಂತ ಸಿಂಹ ಪನ್ನು ಇವನು ‘ನವೆಂಬರ್ ೧ ರಿಂದ ೧೯ ಈ ಕಾಲಾವಧಿಯಲ್ಲಿ ಏರ್ ಇಂಡಿಯಾ ವಿಮಾನದಿಂದ ಪ್ರವಾಸ ಮಾಡಬಾರದು. ೧೯೮೪ ರಲ್ಲಿ ದೆಹಲಿಯಲ್ಲಿ ನಡೆದಿರುವ ಸಿಖರ ನರಸಂಹಾರಕ್ಕೆ ೪೦ ನೇ ದಿನದ ಪ್ರಯುಕ್ತ ಏರ್ ಇಂಡಿಯಾ ವಿಮಾನಗಳ ಮೇಲೆ ದಾಳಿ ನಡೆಯುವ ಸಾಧ್ಯತೆ ಇದೆ’, ಎಂದು ಪ್ರಯಾಣಿಕರಿಗೆ ಬೆದರಿಕೆ ನೀಡಿದ್ದಾನೆ. ಕಳೆದ ಕೆಲವು ದಿನಗಳಿಂದ ಭಾರತೀಯ ವಿಮಾನಗಳಿಗೆ ನಿರಂತರವಾಗಿ ಬಾಂಬ್ ಸ್ಫೋಟದ ಬೆದರಿಕೆ ಬರುತ್ತಿವೆ. ಪನ್ನು ಇವನು ಕಳೆದ ವರ್ಷ ನವಂಬರ್ ನಲ್ಲಿ ಕೂಡ ಒಂದು ವಿಡಿಯೋದ ಮೂಲಕ ದೆಹಲಿಯ ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಹೆಸರು ಬದಲಾಯಿಸಲಾಗುವುದು ಮತ್ತು ಅದು ನವಂಬರ್ ೧೯ ರ ವರೆಗೆ ಮುಚ್ಚಲಾಗುವುದು, ಎಂದು ಬೆದರಿಕೆ ನೀಡಿದ್ದನು. ಅವನು ಆ ದಿನದಂದು ಜನರಿಗೆ ಏರ್ ಇಂಡಿಯಾದ ವಿಮಾನದಿಂದ ಪ್ರಯಾಣ ಮಾಡದಿರಲು ಸಲಹೆ ನೀಡಿದ್ದನು.
ಪಂಜಾಬದ ಮುಖ್ಯಮಂತ್ರಿ ಭಗವಂತ ಮಾನ ಇವರಿಗೂ ಜೀವ ಬೆದರಿಕೆ
ಖಲಿಸ್ತಾನಿ ಭಯೋತ್ಪಾದಕ ಗುರುಪತವಂತ ಸಿಂಹ ಪನ್ನು ಇವನು ಈ ವರ್ಷ ಗಣರಾಜ್ಯೋತ್ಸವದ ದಿನದಂದು ಪಂಜಾಬನ ಮುಖ್ಯಮಂತ್ರಿ ಭಗವಂತ ಮಾನ ಮತ್ತು ರಾಜ್ಯದ ಪೊಲೀಸ್ ಮಹಾಸಂಚಾಲಕ ಗೌರವ ಯಾದವ್ ಇವರಿಗೂ ಕೂಡ ಜೀವ ಬೆದರಿಕೆ ನೀಡಿದ್ದನು. ಅವನು ಗೂಂಡಾಗಳಿಗೆ ಒಟ್ಟಾಗಿ ಸೇರಿ ಜನವರಿ ೨೬ ರಂದು ಮುಖ್ಯಮಂತ್ರಿ ಭಗವಂತ ಮಾನ ಇವರ ಮೇಲೆ ದಾಳಿ ನಡೆಸಲು ಹೇಳಿದ್ದನು.
ಸಂಪಾದಕೀಯ ನಿಲುವು
|
ಅಮೆರಿಕ: ಧರ್ಮದತ್ತ ಒಲವು ತೋರುತ್ತಿರುವ ಜೆನ್-ಜ಼ಿ ಹುಡುಗರು!
ಶ್ರೀರಾಮ ಮಂದಿರದಲ್ಲಿ ದೇಣಿಗೆ ಕಳುವಾಗುವುದು, ಸಮಾಜದ ನೈತಿಕ ಅಧಃಪತನದ ಪರಾಕಾಷ್ಠೆ! – ನ್ಯಾಯಮೂರ್ತಿ ಅತುಲ್ ಶ್ರೀಧರನ್, ಅಲಹಾಬಾದ್ ಹೈಕೋರ್ಟ್
ಬ್ರಿಟನ್ ಸಚಿವ ಸಂಪುಟದಲ್ಲಿ ಭಾರತೀಯ ಮೂಲದ ಕನಿಷ್ಕ ನಾರಾಯಣ ಮತ್ತು ಲಿಜಾ ನಂದಿ ಅವರಿಗೆ ಸ್ಥಾನ
ಕಾಶ್ಮೀರ: ಪಾಕಿಸ್ತಾನಿ ಭಯೋತ್ಪಾದಕರಿಗೆ ಸಹಾಯ ಮಾಡುತ್ತಿದ್ದ ಮಹಮ್ಮದ್ ರಫೀಕ್ ನಾಯಕ್ ನ ಬಂಧನ.
ಅಮೆರಿಕದಲ್ಲಿ ಭಾರತ ವಿರೋಧಿ ಖಾಲಿಸ್ತಾನಿಗಳನ್ನು ಕೆಣಕಿದರೆ ಶಿಕ್ಷೆ!
ಲಾಠಿಚಾರ್ಜ್ನ ವೀಡಿಯೊಗಳನ್ನು ನೋಡಲು ನಮ್ಮ ಬಳಿ ಸಮಯವಿಲ್ಲ!