(ಯುಪಿಐ ಎಂದರೆ ಯೂನಿಫೈಡ್ ಪೇಮೆಂಟ್ ಇಂಟರ್ಫೇಸ್. ಈ ಮೊಬೈಲ್ ಅಪ್ಲಿಕೇಶನ್ ಅನ್ನು ವಿವಿಧ ಬ್ಯಾಂಕಿಂಗ್ ಸಂಸ್ಥೆಗಳ ನಡುವೆ ಹಣವನ್ನು ವರ್ಗಾಯಿಸಲು ಬಳಸಲಾಗುತ್ತದೆ.)
ಮಾಲೆ (ಮಾಲ್ಡೀವ್ಸ್) – ಮಾಲ್ಡೀವ್ಸ್ ನ ನಾಗರಿಕರು ಈಗ ಭಾರತೀಯ ‘ಯುನಿಫೈಡ್ ಪೇಮೆಂಟ್ ಇಂಟರ್ಫೇಸ್’ (ಯುಪಿಐ) ಅನ್ನು ಬಳಸುವರು. ಇದಕ್ಕಾಗಿ 2 ತಿಂಗಳ ಹಿಂದೆ ಉಭಯ ದೇಶಗಳ ನಡುವೆ ಒಪ್ಪಂದವಾಗಿದೆ. ಅಕ್ಟೋಬರ್ 20 ರಂದು ಮಾಲ್ಡೀವ್ಸ್ ನ ರಾಷ್ಟ್ರಪತಿ ಮೊಹಮ್ಮದ್ ಮುಯಿಜ್ಜು ಅವರು ಹಿರಿಯ ಸಚಿವರ ಶಿಫಾರಸ್ಸಿನ ನಂತರ ‘ಯುಪಿಐ’ ಪ್ರಾರಂಭಿಸಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲು ನಿರ್ಧರಿಸಿದರು. ಮುಯಿಜ್ಜು ಅವರ ಕಚೇರಿ ಹೊರಡಿಸಿದ ಮನವಿಯ ಪ್ರಕಾರ, ಮಂತ್ರಿ ಮಂಡಲದ ಈ ನಿರ್ಣಯದಿಂದ ಮಾಲ್ಡೀವ್ಸ್ ನ ಆರ್ಥಿಕತೆಗೆ ಗಮನಾರ್ಹ ಲಾಭವಾಗುವುದೆಂದು ನಿರೀಕ್ಷಿಸಲಾಗಿದೆ. ಇದರಲ್ಲಿ ಮುಖ್ಯವಾಗಿ ಹೆಚ್ಚುತ್ತಿರುವ ಆರ್ಥಿಕ ಸೇರ್ಪಡೆ ಮತ್ತು ಡಿಜಿಟಲ್ ಮೂಲಸೌಕರ್ಯ ಹೆಚ್ಚಿಸುವುದನ್ನು ಒಳಗೊಂಡಿರುತ್ತದೆ.
1. ‘ಯುಪಿಐ’ ಅನ್ನು ಜಾರಿಗೆ ತರುವ ನಿರ್ಧಾರದ ನಂತರ, ಮುಯಿಜ್ಜು ಅವರು ಮಾಲ್ಡೀವ್ಸ್‌ನಲ್ಲಿ ‘ಯುಪಿಐ’ ಅನ್ನು ಜಾರಿಗೆ ತರಲು ಒಂದು ಸಂಸ್ಥೆಯನ್ನು ಸ್ಥಾಪಿಸಲು ನಿರ್ಧರಿಸಿದರು. ಹಾಗೆಯೇ ದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವ ಬ್ಯಾಂಕ್‌ಗಳು, ಟೆಲಿಕಾಂ ಸಂಸ್ಥೆಗಳು, ಸರಕಾರಿ ಸ್ವಾಮ್ಯದ ಸಂಸ್ಥೆಗಳು ಮತ್ತು ಹಣಕಾಸು ತಂತ್ರಜ್ಞಾನ ಸಂಸ್ಥೆಗಳನ್ನು ಈ ಕಂಪನಿಯಲ್ಲಿ ಸೇರಿಸಬೇಕು, ಎಂದು ಅವರು ಹೇಳಿದರು.
2. ಅಕ್ಟೋಬರ್ ಆರಂಭದಲ್ಲಿ ಭಾರತವು ಮಾಲ್ಡೀವ್ಸ್‌ನಲ್ಲಿ ‘ರುಪೇ ಕಾರ್ಡ್’ ಅನ್ನು ಪ್ರಾರಂಭಿಸಿತ್ತು. ಈ ಮೂಲಕ ಮಾಲ್ಡೀವ್ಸ್‌ಗೆ ಭೇಟಿ ನೀಡುವ ಭಾರತೀಯ ಪ್ರವಾಸಿಗರಿಗೆ ಹಾಗೆಯೇ ಭಾರತಕ್ಕೆ ಭೇಟಿ ನೀಡುವ ಮಾಲ್ಡೀವ್ಸ್ ನ ಪ್ರಜೆಗಳಿಗೆ ಹಣ ಪಾವತಿಸುವ ಸೌಲಭ್ಯವನ್ನು ಹೆಚ್ಚಿಸುವುದು.