ಜೌನಪುರ (ಉತ್ತರ ಪ್ರದೇಶ) – ಇಲ್ಲಿನ ಭಾಜಪ ನಾಯಕ ತಹ್ಸೀನ ಶಾಹಿದ ಇವರ ಮಗ ಹೈದರನು ಓರ್ವ ಪಾಕಿಸ್ತಾನಿ ಯುವತಿಯೊಂದಿಗೆ ಆನ್ ಲೈನ್ ಮೂಲಕ ವಿವಾಹವಾದನು. ಈ ಸಮಾರಂಭಕ್ಕೆ ಭಾಜಪ ಸ್ಥಳೀಯ ಶಾಸಕ ಬ್ರಿಜೇಶ ಸಿಂಗ ಪ್ರಿಶೂ ಸೇರಿದಂತೆ ಇತರೆ ನಾಯಕರೂ ಉಪಸ್ಥಿತರಿದ್ದರು. ಯುವತಿಗೆ ವೀಸಾ ಸಿಗುವಲ್ಲಿ ವಿಳಂಬವಾಗಿದ್ದರಿಂದ ಹಾಗೂ ಯುವತಿಯ ತಾಯಿಯ ಆರೋಗ್ಯ ಹದಗೆಟ್ಟಿದ್ದರಿಂದ, ಅವರು ಆನ್ ಲೈನ್ ಮೂಲಕ ವಿವಾಹವಾಗಲು ನಿರ್ಧರಿಸಿದ್ದಾಗಿ ಹೇಳಲಾಗುತ್ತಿದೆ. ವೀಸಾ ಎಂದರೆ ದೇಶಕ್ಕೆ ಪ್ರವೇಶಿಸಲು ಅನುಮತಿಸುವ ಅಧಿಕೃತ ದಾಖಲೆ.
1. ಭಾಜಪ ನಾಯಕ ತಹಸೀನ ಶಾಹಿದ ಸುಮಾರು ಒಂದು ವರ್ಷದ ಹಿಂದೆ ತನ್ನ ಹಿರಿಯ ಸಹೋದರ ಹೈದರ ವಿವಾಹವನ್ನು ಪಾಕಿಸ್ತಾನ ಲಾಹೋರನ ಅಂದಲೀಪ ಝಾಹರ ಈ ಯುವತಿಯೊಂದಿಗೆ ನಿಶ್ಚಯ ಮಾಡಿದ್ದರು.
2. ತದನಂತರ ಅಂದಾಲಿಪಾ ಭಾರತೀಯ ಹೈಕಮಿಷನರ್ ಬಳಿ ವೀಸಾಕ್ಕಾಗಿ ಅರ್ಜಿ ಸಲ್ಲಿಸಿದರು; ಆದರೆ ಉಭಯ ದೇಶಗಳ ನಡುವಿನ ಉದ್ವಿಗ್ನತೆಯಿಂದಾಗಿ ಯುವತಿಗೆ ವೀಸಾ ಸಿಗುವಲ್ಲಿ ವಿಳಂಬವಾಯಿತು. ಅಂತಿಮವಾಗಿ ಆನ್‌ಲೈನ್‌ನಲ್ಲಿ ಮದುವೆಯಾಗಲು ನಿರ್ಧರಿಸಲಾಯಿತು.
3. ಅಕ್ಟೋಬರ್ 18 ರ ತಡ ರಾತ್ರಿ ತಹಸೀನ ಶಾಹಿದ ನೂರಾರು ಅತಿಥಿಗಳೊಂದಿಗೆ ಇಮಾಮಬಾರಾ ಕಲ್ಲು ಮರಹೂಮಗೆ ತಲುಪಿದರು. ಆ ಸಮಯದಲ್ಲಿ ಟಿವಿ ಪರದೆಯ ಮೇಲೆ ಎಲ್ಲರೆದುರಿಗೆ ಆನ್‌ಲೈಲ್ ಮದುವೆ ಸಮಾರಂಭ ನಡೆಯಿತು. ಎರಡೂ ಕಡೆಯವರು ವಧು ಮತ್ತು ವರನ ಕಡೆಯ ಖಾಜಿ (ಇಸ್ಲಾಮಿಕ್ ಕಾನೂನುಶಾಸ್ತ್ರಜ್ಞ) ಮತ್ತು ಮೌಲಾನಾ (ಇಸ್ಲಾಮಿಕ್ ಅಭ್ಯಾಸಕ) ಇವರು ವಿವಾಹವನ್ನು ನೆರವೇರಿಸಿದರು.