ಭಯೋತ್ಪಾದಕ ದಾಳಿಯ ಸಂದೇಹ
ನವದೆಹಲಿ – ಇಲ್ಲಿಯ ರೋಹಿಣಿ ಸೆಕ್ಟರ್ ೧೨ರ ಪ್ರಶಾಂತ ವಿಹಾರ ಪರಿಸರದಲ್ಲಿರುವ CRPF (ಕೇಂದ್ರೀಯ ಮೀಸಲು ಪೊಲೀಸ್ ಪಡೆ)ನ ಶಾಲೆಯ ಗೋಡೆಯ ಹತ್ತಿರ ಬೆಳಿಗ್ಗೆ ಭಾರಿ ಸ್ಫೋಟ ಸಂಭವಿಸಿದೆ. ಸ್ಪೋಟದಿಂದ ಆಕಾಶದಲ್ಲಿ ಹೊಗೆ ಆವರಿಸಿತ್ತು. ಇದನ್ನು ನೋಡಿದ ಜನರು ಭಯಭೀತರಾದರು. ಈ ಸ್ಪೋಟದಲ್ಲಿ ಯಾವುದೇ ಜೀವ ಹಾನಿ ಆಗಿಲ್ಲ. ಇಲ್ಲಿಯ ಕೆಲವು ಅಂಗಡಿಗಳಿಗೆ ಹಾನಿ ಆಗಿದೆ ಹಾಗೂ ಇಲ್ಲಿ ನಿಂತಿದ್ದ ವಾಹನಗಳ ಗಾಜುಗಳು ಒಡೆದಿವೆ.
೧. ಪೊಲೀಸ ಉಪಾಯುಕ್ತ ಅಮಿತ ಗೋಯಲ ಇವರು ಮಾತನಾಡಿ, ನಾವು ಈ ಸ್ಪೋಟದ ಕಾರಣ ಹುಡುಕುವ ಪ್ರಯತ್ನ ಮಾಡುತ್ತಿದ್ದೇವೆ. ಅದಕ್ಕಾಗಿ ಕೆಲವು ತಜ್ಞರ ತಂಡ ಕರೆಸಬೇಕಿದೆ. ಈ ಸ್ಫೋಟ ಯಾವುದರದು, ಎಂಬುದು ಇಲ್ಲಿಯವರೆಗೆ ತಿಳಿದು ಬಂದಿಲ್ಲ. ತಜ್ಞರ ತಂಡ ತನಿಖೆ ನಡೆಸಿ ಇದರ ಮಾಹಿತಿ ನೀಡುವರೆಂದು ಹೇಳಿದರು.
೨. ಪೊಲೀಸರು, ಈ ಸ್ಫೋಟದ ಹಿಂದೆ ಭಯೋತ್ಪಾದಕರ ನಂಟಿದಿಯೇ ? ಈ ದೃಷ್ಟಿಯಿಂದ ಕೂಡ ತನಿಖೆ ನಡೆಸಲಾಗುವುದು. ಈಗ ಹತ್ತಿರದ ಪೊಲೀಸ ಠಾಣೆಗಳಿಗೆ ಜಾಗೃತೆಯ ಎಚ್ಚರಿಕೆ ನೀಡಲಾಗಿದೆ. ಮಾರುಕಟ್ಟೆಯಲ್ಲಿ ಗಸ್ತು ಪರೆಡ್ ಕೂಡ ಹೆಚ್ಚಿಸಲಾಗಿದೆ. ಜನರು ಯಾವುದೇ ಅನುಮಾನಾಸ್ಪದ ವಸ್ತು ಕಂಡುಬಂದರೆ ತಕ್ಷಣ ಪೊಲೀಸರಿಗೆ ತಿಳಿಸಬೇಕೆಂದು ಕರೆ ನೀಡಿದ್ದಾರೆ, ಎಂದು ಹೇಳಿದರು.
೩. ಘಟನಾಸ್ಥಳಕ್ಕೆ ಬಂದು ‘ನ್ಯಾಷನಲ್ ಸೆಕ್ಯೂರಿಟಿ ಗಾರ್ಡ್’ ಪಡೆಯಿಂದ ಕೂಡ ಪರಿಶೀಲನೆ ನಡೆಸಲಾಗುತ್ತಿದೆ. ಆ ಸ್ಥಳದಲ್ಲಿ ಬಿಳಿಯ ಪೌಡರ್ ದೊರೆತಿರುವುದರಿಂದ ವಿಧಿ ವಿಜ್ಞಾನ ಪ್ರಯೋಗಾಲಯದಿಂದ ಅದರ ತನಿಖೆ ನಡೆಸುವರು. ಯಾವುದಾದರೂ ದೊಡ್ಡ ಭಯೋತ್ಪಾದಕ ದಾಳಿಗಾಗಿ ಇದು ಪರೀಕ್ಷೆ ಆಗಿದೆಯೇ ? ಈ ಸಾಧ್ಯತೆಯ ಬಗ್ಗೆ ಕೂಡ ಪರಿಶೀಲಿಸಲಾಗುವುದು.