ರೈಲು 3 ಗಂಟೆ ತಡವಾಗಿ ತಲುಪಿದ್ದಕ್ಕೆ ಇಲಾಖೆಯಿಂದ 7 ಸಾವಿರ ರೂಪಾಯಿ ದಂಡ

ಪ್ರಯಾಣಿಕನು ಗ್ರಾಹಕರ ಕುಂದುಕೊರತೆ ವೇದಿಕೆಯಲ್ಲಿ ದೂರು ದಾಖಲಿಸಿದ್ದ

ಜಬಲ್ಪುರ (ಮಧ್ಯಪ್ರದೇಶ) – ಇಲ್ಲಿನ ಅರುಣ ಕುಮಾರ ಜೈನ್ ಅವರು ಮಾರ್ಚ್ 11, 2022 ರಂದು ದೆಹಲಿಗೆ ಹೋಗುವುದಕ್ಕಾಗಿ ಹಜರತ್ ನಿಜಾಮುದ್ದೀನ್ ರೈಲಿನಲ್ಲಿ ಪ್ರಯಾಣಿಸುತ್ತಿದ್ದರು; ಆದರೆ ರೈಲು 3 ಗಂಟೆ ತಡವಾಗಿ ಓಡುತ್ತಿದ್ದರಿಂದ ಸಮಯಕ್ಕೆ ಸರಿಯಾಗಿ ದೆಹಲಿ ತಲುಪಲು ಸಾಧ್ಯವಾಗಲಿಲ್ಲ. ರೈಲ್ವೆಯ ತಪ್ಪಿನಿಂದ ವಿರುದ್ಧ ಜೈನ್ ಗ್ರಾಹಕರ ಕುಂದುಕೊರತೆ ವೇದಿಕೆಗೆ ದೂರು ನೀಡಿದ ನಂತರ, ವೇದಿಕೆಯು ರೈಲ್ವೆಗೆ 7 ಸಾವಿರ ರೂಪಾಯಿ ದಂಡ ವಿಧಿಸಿತು. ಇದರ ಜೊತೆಗೆ ಟಿಕೆಟ್ ಹಣ ರೂ.803.60 ಪೈಸೆ ಜೈನ್ ರವರಿಗೆ ವಾಪಸ್ ಸಿಕ್ಕಿತು. ಹಾಗೆಯೇ 5 ಸಾವಿರ ರೂಪಾಯಿ ಮಾನಸಿಕ ಯಾತನೆ ಆಗಿದ್ದಕ್ಕಾಗಿ ಹಾಗೂ ಕಾನೂನು ವೆಚ್ಚಕ್ಕಾಗಿ ತಗುಲಿದ 2 ಸಾವಿರ ರೂಪಾಯಿ ಹೀಗೆ ಜೈನ್ ರವರಿಗೆ ನೀಡುವಂತೆ ಆದೇಶಿಸಿತು. ರೈಲ್ವೇಯು 45 ದಿನಗಳ ಒಳಗೆ ಈ ದಂಡವನ್ನು ಕೊಡದಿದ್ದರೆ, ವಾರ್ಷಿಕ ಶೇ. 9 ರಷ್ಟು ಬಡ್ಡಿಯೊಂದಿಗೆ ಮೊತ್ತವನ್ನು ರೈಲ್ವೆ ಇಲಾಖೆಯು ತುಂಬ ಬೇಕಾಗುತ್ತದೆ ಎಂದಿದೆ.

ಸಂಪಾದಕೀಯ ನಿಲುವು

ದೇಶದಲ್ಲಿ ಪ್ರತಿದಿನ ನೂರಾರು ರೈಲುಗಳು ತಡವಾಗಿ ಓಡುತ್ತಿರುವುದು ಪ್ರಯಾಣಿಕರು ಅನುಭವಿಸುದ್ದಾರೆ. ಆದ್ದರಿಂದ ಪ್ರತಿಯೊಬ್ಬ ಪ್ರಯಾಣಿಕರು ಈ ರೀತಿ ದೂರು ನೀಡುವುದು ಅವಶ್ಯಕವಾಗಿದೆ. ಈ ಮೂಲಕವಾದರೂ ರೈಲ್ವೇ ಆಡಳಿತ ಎಚ್ಚೆತ್ತುಕೊಂಡು ರೈಲುಗಳನ್ನು ಸಮಯಕ್ಕೆ ಸರಿಯಾಗಿ ತಲುಪಿಸಬಹುದು !