|
ಜೈಪುರ (ರಾಜಸ್ಥಾನ್) – ರಾಜಸ್ಥಾನ ಉಚ್ಚ ನ್ಯಾಯಾಲಯವು ಒಂದು ಪ್ರಕರಣದಲ್ಲಿ ಮಹಾಕಾಲೇಶ್ವರ ಮಂದಿರ ಟ್ರಸ್ಟಿಗಳಿಗೆ ಕಟುವಾದ ಶಬ್ದಗಳಲ್ಲಿ ತಿಳಿ ಹೇಳಿದೆ. ಓರ್ವ ಮಹಿಳೆಯು ದೇವಸ್ಥಾನದ ನಿಷೇಧಿತ ಭಾಗದಲ್ಲಿ ಪ್ರವೇಶಿಸಿರುವುದರಿಂದ ದೇವಸ್ಥಾನದ ಟ್ರಸ್ಟಿಗಳಿಂದ ತೀವ್ರ ಆಕ್ಷೇಪ ವ್ಯಕ್ತಪಡಿಸಲಾಗಿತ್ತು. ಆದ್ದರಿಂದ ಮಹಿಳೆಯ ವಿರುದ್ಧ ದೂರು ದಾಖಲಿಸಲಾಗಿತ್ತು. ಇದರಿಂದ ಸಪನಾ ನಿಮಾವತ ಹೆಸರಿನ ಮಹಿಳೆಯು ನೇರ ಉಚ್ಚ ನ್ಯಾಯಾಲಯಕ್ಕೆ ಹೋಗಿದ್ದಾಳೆ ಮತ್ತು ಆಕೆಯ ವಿರುದ್ಧ ದಾಖಲಿಸಿರುವ ದೂರಿನ ಕುರಿತು ಪ್ರಶ್ನಿಸಿದ್ದಾಳೆ. ಇದರ ಬಗ್ಗೆ ನ್ಯಾಯಾಲಯವು ಮಹಿಳೆಯು ನಿಷೇಧಿತ ಭಾಗಕ್ಕೆ ಹೋಗುವುದರ ಹಿಂದೆ ಯಾವುದೇ ತಪ್ಪಾದ ಉದ್ದೇಶ ಇರಲಿಲ್ಲ ಹಾಗೂ ಆಕೆ ದೇವಸ್ಥಾನದ ಆಸ್ತಿಪಾಸ್ತಿಗು ಯಾವುದೇ ಹಾನಿ ಉಂಟು ಮಾಡಿಲ್ಲ ಎಂದು ಹೇಳಿ ಆಕೆಯ ವಿರುದ್ಧ ದೂರು ರದ್ದು ಪಡಿಸುವಂತೆ ಆದೇಶ ನೀಡಿದೆ.
೧. ಮಹಾಕಾಲೇಶ್ವರ ಮಹಾದೇವಜಿ ಸಿದ್ಧ ಧಾಮ ದೇವಸ್ಥಾನದ ಟ್ರಸ್ಟಿಗಳು ದೇವಸ್ಥಾನದ ಕೆಲವು ಸ್ಥಳಗಳಲ್ಲಿ ಬ್ಯಾರಿಕೆಡ್ಸ್ ಹಾಕಿ ಸಾಮಾನ್ಯ ಜನರಿಗೆ ದೇವಸ್ಥಾನದ ಕೆಲವು ಭಾಗದಲ್ಲಿ ಪ್ರವೇಶಿಸಲು ನಿಷೇಧಿಸಿದ್ದಾರೆ.
೨. ಆದರೂ ಕೂಡ ಸಪನಾ ನಿಮಾವತ ಎಂಬ ಮಹಿಳೆಯು ಬ್ಯಾರಿಕೆಡ್ಸ್ ದಾಟಿ ಮುಂದೆ ಹೋಗುವ ಪ್ರಯತ್ನ ಮಾಡಿದ್ದಾಳೆ. ಇದರಿಂದ ಪೊಲೀಸರು ಮಹಿಳೆಯ ವಿರುದ್ಧ ಅಕ್ರಮ ಪ್ರವೇಶ ಮಾಡಿರುವುದು ಮತ್ತು ಹಾನಿಯ ಉದ್ದೇಶದಿಂದ ದುರ್ವರ್ತನೆ ಮಾಡಿವುದು ಈ ಕಲಂ ನಲ್ಲಿ ದೂರು ದಾಖಲಿಸಿಕೊಂಡರು.
೩. ಇದರ ವಿರುದ್ಧ ಮಹಿಳೆಯು ಉಚ್ಚ ನ್ಯಾಯಾಲಯದಲ್ಲಿ ಅರ್ಜಿ ದಾಖಲಿಸಿದಳು. ಇದರ ಬಗ್ಗೆ ನ್ಯಾಯಮೂರ್ತಿ ಅರುಣ ಮೋಂಗ ಇವರು, ದೂರಿನ ಕಲಂಗಳು ತಪ್ಪಾಗಿವೆ. ಹಾಗೂ ಈ ಮಹಿಳೆ ಹಿಂದುಳಿದ ಜನಾಂಗದವಳಾಗಿದ್ದಾಳೆ ಮತ್ತು ಭಾರತದ ಇತಿಹಾಸದಲ್ಲಿ ಹಿಂದುಳಿದ ಜಾತಿ ಜನಾಂಗದ ಜನರಿಗೆ ದೇವಸ್ಥಾನದಲ್ಲಿ ಪ್ರವೇಶ ನಿರಾಕರಿಸಿರುವ ಘಟನೆಗಳು ನಡೆದಿರುವುದರಿಂದ ದೇವಸ್ಥಾನದ ಟ್ರಸ್ಟಿಗಳ ಉದ್ದೇಶ ಕೂಡ ಹೀಗೆ ಇರಬಹುದು. ದೇವಸ್ಥಾನಗಳು ಟ್ರಸ್ಟಿಗಳ ವೈಯಕ್ತಿಕ ಸಂಪತ್ತಿ ಅಲ್ಲ ಎಂದು ಹೇಳಿದೆ.
ಸಂಪಾದಕೀಯ ನಿಲುವುಯಾವುದಾದರೂ ಹಿಂದುಳಿದ ಜಾತಿಯ ಭಕ್ತ ಮತ್ತು ಅದು ಕೂಡ ಮಹಿಳೆ ಆಗಿರುವಾಗ ಆಕೆಯ ವಿರುದ್ಧ ದೂರ ದಾಖಲಿಸಿದ ನಂತರ ಆಕೆ ಅದನ್ನು ನ್ಯಾಯಾಲಯದಲ್ಲಿ ಪ್ರಶ್ನಿಸುತ್ತಿದ್ದರೇ, ಅದರ ಹಿಂದೆ ಹಿಂದೂ ವಿರೋಧಿ ಷಡ್ಯಂತ್ರ ಇರಬಹುದೆ, ಇದರ ಸಮೀಕ್ಷೆ ಕೂಡ ನಡೆಯಬೇಕು ! |