X In Delhi High Court : ಹಿಂದೂ ದ್ವೇಷ ಹರಡುವ ‘ಹಿಂದುತ್ವ ವಾಚ್’ ಖಾತೆಯ ವಿರುದ್ಧ ಕ್ರಮ ಕೈಗೊಳ್ಳುವುದು ಅಯೋಗ್ಯ ಎಂದ ಎಕ್ಸ್ !

ಹಿಂದೂ ದ್ವೇಷಿ ಎಕ್ಸ್!

ನವದೆಹಲಿ – ಕಾಶ್ಮೀರಿ ಪತ್ರಕರ್ತ ರಕೀಮ್ ಹಮೀದ್ ನಡೆಸುತ್ತಿದ್ದ ‘ಹಿಂದುತ್ವ ವಾಚ್’ (@ HindutvaWatchin ) ಎಂಬ ಎಕ್ಸ್ ಮಾಧ್ಯಮದ ಖಾತೆಯನ್ನು ನಿಷೇಧಿಸುವ ಕೇಂದ್ರ ಸರಕಾರದ ನಿರ್ಣಯವು ಅಯೋಗ್ಯವಾಗಿತ್ತು ಎಂದು ದೆಹಲಿ ಉಚ್ಚ ನ್ಯಾಯಾಲಯದಲ್ಲಿ ಎಕ್ಸ್ ಹೇಳಿದೆ. ಹಮೀದ್ ಅವರು ತಮ್ಮ ಹಿಂದೂ ದ್ವೇಷಿ ಹಿಂದುತ್ವ ವಾಚ್ ಖಾತೆಯ ವಿರುದ್ಧ ಕ್ರಮ ಕೈಗೊಂಡಿರುವುದಕ್ಕೆ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿದ್ದರು. ಈ ಬಗ್ಗೆ ಉತ್ತರ ನೀಡಿದ ಎಕ್ಸ್ ಕಂಪನಿ, ನ್ಯಾಯಾಲಯವು ಏನಾದರೂ ಆದೇಶ ನೀಡಿದರೆ ನಾವು ಹಿಂದುತ್ವ ವಾಚ್ ಖಾತೆಯನ್ನು ಪುನಃ ಸ್ಥಾಪಿತಗೊಳಿಸುತ್ತೇವೆ. ಎಕ್ಸ್ ವಿರುದ್ಧ ರಕೀಬ್ ಹಮೀದ್ ಅವರ ಅರ್ಜಿ ಕಾಯಂ ಇಡುವುದು ಯೋಗ್ಯವಲ್ಲ; ಕಾರಣ ಎಕ್ಸ್ ವೇದಿಕೆ ಕೇವಲ ಒಂದು ಮಾಧ್ಯಮವಾಗಿದೆ ಮತ್ತು ಸಂವಿಧಾನದ ಕಲಂ ೧೨ ಅಂತರ್ಗತ ಸಂವಿಧಾನದ ಭಾಗವಲ್ಲ.

೧.ಈ ಪ್ರಕರಣದ ಸಂಪೂರ್ಣ ದೋಷವನ್ನು ಸರಕಾರದ ಮೇಲೆ ಹೊರಿಸಿದ ಎಕ್ಸ್, ಸರಕಾರದ ಈ ನಿರ್ಣಯವು ಮಾಹಿತಿ ತಂತ್ರಜ್ಞಾನ ಕಾನೂನಿನ ಕಲಂ ೬೯ಅ .ದ ವಿರುದ್ಧವಾಗಿದೆ, ಅಸತ್ಯವಾಗಿದೆ ಮತ್ತು ಸಂವಿಧಾನದ ಕಲಂ ೧೯(೨) ಅಂತರ್ಗತ ಒಳಗೊಂಡಿರುವ ಮಿತಿಯನ್ನು ಉಲ್ಲಂಘಿಸಿದೆ ಎಂದು ವಾದ ಮಾಡಿದೆ.

೨. ಜನವರಿ ೨೦೨೪ ರಂದು ಭಾರತೀಯ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು ಒಂದು ನೋಟಿಸ್ ಜಾರಿಗೊಳಿಸಿತ್ತು. ಅದರಲ್ಲಿ ಅನೇಕ ಸಾಮಾಜಿಕ ಮಾಧ್ಯಮಗಳ ಖಾತೆಗಳನ್ನು ಬ್ಲಾಕ್ ಮಾಡಬೇಕೆಂದು ಸರಕಾರ ಹೇಳಿತ್ತು. ಈ ಎಲ್ಲಾ ಖಾತೆಗಳು ಹಿಂಸಾಚಾರವನ್ನು ಪ್ರಚೋದಿಸುವುದು ಮತ್ತು ಕಾನೂನು ವ್ಯವಸ್ಥೆಗೆ ಧಕ್ಕೆ ತರುವ ಕೆಲಸ ಮಾಡುತ್ತಿದ್ದವು ಎಂಬುದು ಕೇಂದ್ರ ಸರಕಾರದ ಅಭಿಪ್ರಾಯವಾಗಿತ್ತು ಎಂದು ಎಕ್ಸ್ ಹೇಳಿತು.

೩. ಈ ಪ್ರಕರಣದ ಮುಂದಿನ ವಿಚಾರಣೆ ಅಕ್ಟೋಬರ್ ೩ರಂದು ನಡೆಯಲಿದೆ.

೪. ರಕೀಬ ಹಮೀದ್ ಅವರ ಪ್ರಕಾರ ಭಾರತದಲ್ಲಿನ ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯದ ವರದಿಯ ಅಭ್ಯಾಸ ಮಾಡುವುದಕ್ಕಾಗಿಯೇ ಅವರು ಈ ಖಾತೆ ನಡೆಸುತ್ತಿದ್ದರು. ಆದರೆ ವಾಸ್ತವವಾಗಿ ಈ ಖಾತೆಯ ಮೂಲಕ ಹಿಂದುಗಳ ವಿರುದ್ಧ ದ್ವೇಷ ಹಬ್ಬಿಸಲಾಗುತ್ತಿತ್ತು.

ಸಂಪಾದಕೀಯ ನಿಲುವು

ಪ್ರಖರ ರಾಷ್ಟ್ರನಿಷ್ಠರ ಪರವಾಗಿ ನಿಲ್ಲುವ ದಾವೆಗಳನ್ನು ಮಾಡುವ ಎಕ್ಸ್ ನ ಈ ನಿಲುವು ಹೇಳುವುದೊಂದು ಮಾಡುವುದು ಇನ್ನೊಂದು ಎಂಬ ಗಾದೆಯಂತಾಗಿದೆ !