ನವರಾತ್ರಿಯ ಮೊದಲನೆ ದಿನ

ಶೈಲಪುತ್ರಿ

ವಂದೆ ವಾಂಛಿತಲಾಭಾಯ ಚಂದ್ರಾರ್ಧಕೃತಶೇಖರಾಮ್ |

ವೃಷಾರೂಢಾಂ ಶೂಲದರಾಂ ಶೈಲಪುತ್ರಿಮ್ ಯಶಸ್ವಿನೀಮ್ ||

ಅರ್ಥ : ಇಚ್ಛೆಯನ್ನು

ಪೂರ್ಣಗೊಳಿಸುವ, ತಲೆ ಮೇಲೆ ಅರ್ಧ ಚಂದ್ರನನ್ನು ಧರಿಸಿರುವ, ಎತ್ತಿನ ಮೇಲೆ ಆರೂಢಳಾಗಿರುವ, ತ್ರಿಶೂಲ ಧಾರಿಣಿ, ಶೈಲಪುತ್ರಿ, ಯಶಸ್ವಿನಿ ಈ ದೇವಿಗೆ ನಾನು ನಮಸ್ಕರಿಸುತ್ತೇನೆ.

ಆಶ್ವಯುಜ ಶುಕ್ಲ  ಪಕ್ಷ ಪ್ರತಿಪ್ರದೆ ಈ ತಿಥಿಯು ೯ ದಿನಗಳ ನವರಾತ್ರಿ ವ್ರತದ ಮೊದಲ ದಿನವಾಗಿದೆ. ಈ ದಿನದಂದು ದುರ್ಗಾದೇವಿಯ ಮೊದಲ ರೂಪದ, ಅಂದರೆ ಶೈಲಪುತ್ರಿ, ಈ ದೇವಿಯ ಉಪಾಸನೆಯನ್ನು ಮಾಡಲಾಗುತ್ತದೆ. ಇವಳು ಸರ್ವಶಕ್ತಿವಂತಳಾಗಿದ್ದು, ಇವಳು ಹಿಮಾಲಯ ಪರ್ವತದ ಹೊಟ್ಟೆಯಿಂದ ಜನ್ಮ ಪಡೆದಿದ್ದಾಳೆ. ಆದ್ದರಿಂದ ಅವಳಿಗೆ ‘ಶೈಲಪುತ್ರಿ ಎಂದು ಕರೆಯುತ್ತಾರೆ. ಸುಂದರವಾದ ರೂಪವಿರುವ ಈ ದೇವಿಯು ಬಲಗೈಯಲ್ಲಿ ತ್ರಿಶೂಲ ಮತ್ತು ಎಡಗೈಯಲ್ಲಿ ಕಮಲವನ್ನು ಹಿಡಿದುಕೊಂಡಿದ್ದು, ಅವಳು

 ಎತ್ತಿನ ಮೇಲೆ ಆರೂಢಳಾಗಿದ್ದಾಳೆ.