ಪೌರಾಣಿಕ ಗ್ರಂಥಗಳಿಂದ ದೇವಿದರ್ಶನ

ಸನಾತನ-ನಿರ್ಮಿತ ಶ್ರೀ ದುರ್ಗಾದೇವಿಯ ಸಾತ್ತ್ವಿಕ ಚಿತ್ರ

ದೇವಿಯ ಶಕ್ತಿ ಉಪಾಸನೆಯನ್ನು ಅನಾದಿ ಕಾಲದಿಂದ ಮಾಡಲಾಗುತ್ತಿದೆ. ಶಕ್ತಿಯ ಆರಾಧನೆಯು ಮಾನವನ ಇತಿಹಾಸದಷ್ಟೇ ಪ್ರಾಚೀನವಾಗಿದೆ. ಮನುಕುಲವು ಸ್ತ್ರೀಯರ ರೂಪದಲ್ಲಿ, ದೇವಿಯ ರೂಪದಲ್ಲಿ ದೈವತ್ವವನ್ನು ಕಲ್ಪಿಸಿಕೊಂಡಿದೆ. ಮಾತೃದೇವತೆಯು ಮನುಕುಲದ ಸಂಸ್ಕೃತಿಯ ಇತಿಹಾಸದ ಆದಿಶಕ್ತಿಯಾಗಿದ್ದು ಎಲ್ಲ ರೀತಿಯ ಗ್ರಂಥಗಳಲ್ಲಿ ಅವಳ ಸ್ಥಾನವು ಕಂಡುಬರುತ್ತದೆ. ಋಗ್ವೇದದ ಅದಿತಿಯಿಂದ ಹಿಡಿದು ಇಂದಿಗೂ ನಮ್ಮ ಹಾಡುಗಳಲ್ಲಿರುವ ಭವಾನಿ-ದುರ್ಗಾಂಬೆಯ ವರೆಗೆ ಶಕ್ತಿಯ ಮಹಿಮೆ ಕೇಳಲು ಸಿಗುತ್ತದೆ ಮತ್ತು ಸಿಂಧೂ ನದಿಯ ದಡದಲ್ಲಿ ದೊರಕಿದ ೩ ಸಾವಿರ ವರ್ಷಗಳ ಹಿಂದಿನ ತಾಯಿಯ ಮೂರ್ತಿಯಿಂದ ಹಿಡಿದು ಹಳ್ಳಿಹಳ್ಳಿಗಳಲ್ಲಿ ಇಂದಿಗೂ ಪ್ರಭಾವಶಾಲಿಯಾಗಿರುವ ಗ್ರಾಮದೇವತೆಯ ವರೆಗೆ ಆಕೆಯ ಆರಾಧನೆಯ ನಿರಂತರತೆಯನ್ನು ಕಾಣಬಹುದು. ಭಾರತದಲ್ಲಿ ೫೧ ಶಕ್ತಿಪೀಠಗಳ ಇತಿಹಾಸವಿದೆ. ಅನೇಕ ಮನೆತನಗಳಲ್ಲಿ ದುರ್ಗಾ, ಕಾಳಿ ಮೊದಲಾದ ದೇವಿಯರ ಪೂಜೆ ನಡೆದುಕೊಂಡು ಬಂದಿದೆ.

ಸನಾತನ-ನಿರ್ಮಿತ ಶ್ರೀ ಮಹಾಲಕ್ಷ್ಮಿಯ ಸಾತ್ತ್ವಿಕ ಚಿತ್ರ

೧. ‘ಬ್ರಹತ್ನಂದಿಕೇಶ್ವರ ಪುರಾಣದಲ್ಲಿ ನವರಾತ್ರಿಗೆ ಸಂಬಂಧಿಸಿದಂತೆ ಮಾಡಿದ ವರ್ಣನೆ

‘ಬ್ರಹತ್ನಂದಿಕೇಶ್ವರ ಪುರಾಣದಲ್ಲಿ, ರಾವಣನನ್ನು ವಧಿಸುವ ಮೊದಲು ಪ್ರಭು ಶ್ರೀರಾಮನು ದುರ್ಗಾದೇವಿಯನ್ನು ಪೂಜಿಸಿದನು. ಆಶ್ವಯುಜ ಮಾಸದಲ್ಲಿ ಈ ಪೂಜೆಯನ್ನು ಮಾಡಿದನು. ಆದುದರಿಂದ ಈ ಮಾಸದಲ್ಲಿ ದೇವಿಯ ನವರಾತ್ರಿ ಇರುತ್ತದೆ. ನಾರದರ ಆಜ್ಞೆಯ ಮೇರೆಗೆ ರಾಮನು ಈ ಪೂಜೆಯನ್ನು ನವರಾತ್ರಿವ್ರತವನ್ನು ಆಚರಿಸಿ ಮಾಡಿದನು. ವ್ರತದ ಉದ್ಯಾಪನೆ ಮಾಡಿದ ನಂತರ ವಿಜಯ ಪ್ರಾಪ್ತವಾಗಬೇಕು ಎಂದು ಪ್ರಾರ್ಥಿಸಿದನು. ನಂತರ ತನ್ನ ವಾನರಸೈನ್ಯದೊಂದಿಗೆ ಲಂಕೆಯ ಮೇಲೆ ಆಕ್ರಮಣ ಮಾಡಿ ರಾವಣನನ್ನು ವಧಿಸಿದನು.

೨. ದೇವಿಸಂಪ್ರದಾಯ

ಭಾರತದಲ್ಲಿ ದೇವತೆಗಳ ಆರಾಧನೆಗೆ ಸಂಬಂಧಿಸಿದಂತೆ ಯಾವ ಪಂಥಗಳು ಮತ್ತು ಸಂಪ್ರದಾಯಗಳು ಹುಟ್ಟಿಕೊಂಡವೋ, ಅದರಲ್ಲಿ ದೇವಿ ಮತ್ತು ಶಕ್ತಿ ಅಥವಾ ಮಾತೃದೇವತೆಯನ್ನು ಪೂಜಿಸುವ ಸಂಪ್ರದಾಯವು ಬಹಳ ಪ್ರಾಚೀನ ಮತ್ತು ಸರ್ವವ್ಯಾಪಿಯಾಗಿದೆ. ದೇವತಾಶಾಸ್ತ್ರದಲ್ಲಿ ಪಂಚದೇವೋಪಾಸನೆಗೆ ಮುಖ್ಯಸ್ಥಾನವಿದೆ. ನಿರ್ಗುಣ ಮತ್ತು ನಿರಾಕಾರ ಪರತತ್ತ್ವದ ಸಗುಣ ಮತ್ತು ಸಾಕಾರ ಪ್ರತೀಕವನ್ನು ಕಲ್ಪಿಸಿ ಅದರ ಭಕ್ತಿ ಮಾಡುವುದು ಮತ್ತು ಅನುಗ್ರಹದ ಅಪೇಕ್ಷೆಯಿಂದ ಸಂಪೂರ್ಣ ಜೀವನವನ್ನು ಅವನ ಪೂಜೆ, ಕೀರ್ತನೆ, ಭಜನೆ, ನಾಮಸ್ಮರಣೆ ಇವುಗಳಲ್ಲಿ ಕಳೆಯುವುದು, ಈ ಪದ್ಧತಿ ಭಾರತೀಯ ಭಕ್ತಿಮಾರ್ಗದ ವೈಶಿಷ್ಟ್ಯವಾಗಿದೆ. ವಿಷ್ಣು, ಶಿವ, ಸೂರ್ಯ, ಗಣಪತಿ ಮತ್ತು ದೇವಿ ಈ ದೇವತೆಗಳ ಪೂಜೆಯನ್ನು ಮಾಡಲಾಗುತ್ತದೆ.

೩. ದೇವಿ ಮಹಾತ್ಮೆ ಗ್ರಂಥ

ದೇವಿಯ ಉಪಾಸಕರ ಒಂದು ಮುಖ್ಯ ಗ್ರಂಥವು ಮಾರ್ಕಂಡೇಯ ಪುರಾಣದಲ್ಲಿ (ಅಧ್ಯಾಯ ೮೯ ರಿಂದ ೯೩) ಇದೆ. ಅದರಲ್ಲಿ ೫೬೭ ಶ್ಲೋಕಗಳಿದ್ದು ಅವುಗಳನ್ನು ೧೩ ಅಧ್ಯಾಯಗಳಲ್ಲಿ ವಿಭಜಿಸಲಾಗಿದೆ. ಈ ೫೬೭ ಶ್ಲೋಕಗಳನ್ನು ೭೦೦ ಮಂತ್ರಗಳಲ್ಲಿ ವಿಭಜಿಸಲಾಗಿದ್ದು ಈ ಗ್ರಂಥವು ‘ದುರ್ಗಾಸಪ್ತಶತಿ ಈ ಹೆಸರಿನಿಂದ ಗುರುತಿಸಲ್ಪಡುತ್ತದೆ. ದೇವಿಮಹಾತ್ಮೆಯಲ್ಲಿ ಮಹಾಕಾಲಿ, ಮಹಾಲಕ್ಷ್ಮೀ, ಮಹಾಸರಸ್ವತಿ ಹೀಗೆ ದೇವಿಯ ವಿವಿಧ ಸ್ವರೂಪಗಳ ಚರಿತ್ರೆಗಳು ಗ್ರಂಥಗಳ ರೂಪದಲ್ಲಿವೆ.

೪. ಆದಿಶಂಕರಾಚಾರ್ಯರು ಮಾಡಿದ ದೇವಿಸ್ತುತಿ

ಆದಿಶಂಕರಾಚಾರ್ಯರು ದೇವಿಸ್ತುತಿಯೆಂದು ಮಾಡಿದ ಸ್ತೋತ್ರಗಳ ಸಂಖ್ಯೆ ೪೦ ಕ್ಕಿಂತ ಹೆಚ್ಚಿದೆ.

– ಜ್ಯೋತಿಷಿ ಶ್ರೀ. ಬ.ವಿ. ಮತ್ತು ಚಿಂತಾಮಣಿ ದೇಶಪಾಂಡೆ (ಗುರುಜಿ), ಪುಣೆ. (ಆಧಾರ : ಮಾಸಿಕ ‘ಧಾರ್ಮಿಕ, ಅಕ್ಟೋಬರ್ ೨೦೧೮)

ದೇವಿಯ ೫೧ ಹೆಸರುಗಳು

೧. ಶ್ರೀದೇವಿ,  ೨. ಅಂಬಿಕಾ, ೩. ಅಭಯಾಂಬಾ,

೪. ಅಮಯೆರಮಾತಾಜಿ, ೫. ಅಲಕ್ಷ್ಮೀ, ೬. ಆನಂದನಾಯಕಿ,

೭. ಉನಾಯೀಮಾತಾ, ೮. ಉಮಾ, ೯. ಕಾಳರಾತ್ರಿ, ೧೦. ಕುಡಿಕಾ, ೧೧. ಕುಳಕುಲ್ಯಾ, ೧೨. ಕೌಶಿಕಿ,

೧೩. ಕಂಕಾಳಿ, ೧೪. ಗಜಾಂತಲಕ್ಷ್ಮೀ, ೧೫. ಗೋತ್ರದೇವಿ,

೧೬, ಗೌರಿ, ೧೭. ಚಂದ್ರವದನೀದೇವಿ, ೧೮. ಚಂದ್ರಘಂಟಾ,

೧೯. ಕೂಷ್ಮಾಂಡಾ, ೨೦. ಬ್ರಹ್ಮಚಾರಿಣಿ, ೨೧. ಮಹಾಗೌರಿ,

೨೨. ಸಿದ್ಧದಾತ್ರಿ, ೨೩. ಸ್ಕಂದಮಾತಾ, ೨೪. ಶೈಲಪುತ್ರಿ,

೨೫. ಚಕ್ರಪದಿ, ೨೬. ಜಗದ್ಧಾತ್ರಿ, ೨೭. ದುರ್ಗಾ,

೨೮. ನೀಲಸರಸ್ವತಿ, ೨೯. ಪದ್ಮಾವತಿ, ೩೦. ಪ್ರತ್ಯಂಗಿರಾ,

೩೧. ಪಾರ್ವತಿ, ೩೨. ಪಂಪಾವತಿ, ೩೩. ಬಗಲಾಮುಖಿ, ೩೪. ಬಳಾತಿಬಳಾ, ೩೫. ಭುವನೇಶ್ವರಿ, ೩೬. ಮಹಿಷಾಸುರಮರ್ದಿನಿ, ೩೭. ಮಹಾಕಾಳಿ, ೩೮. ಮಹಾಸರಸ್ವತಿ, ೩೯. ಮಾಖನದೇವಿ, ೪೦. ಮೂಕಾಂಬಿಕಾ, ೪೧. ಯೋಗೇಶ್ವರಿ, ೪೨. ರಾಸಯೀದೇವಿ,

೪೩. ವೃಂದಾ. ೪೪. ವಿದ್ಯಾದೇವಿ, ೪೫. ವೈಷ್ಣವಿ, ೪೬. ಶತಾಕ್ಷಿ,

೪೭. ವತ್ಸಲಾದೇವಿ, ೪೮. ಶಿವದೂತಿ, ೪೯. ಸಹಸ್ರಕಾಳಮಾತಾ.

೫೦. ಸಂಜ್ಞಾ, ೫೧. ಹುಂಕಾರೇಶ್ವರಿ.

ದೇವಿಗೆ ಯಾವ ಹೂವು ಮತ್ತು ಯಾವ ಬಣ್ಣದ ಉಡುಪು ಇಷ್ಟ ?

– ಜ್ಯೋತಿಷಿ ಶ್ರೀ. ಬ.ವಿ. ಮತ್ತು ಚಿಂತಾಮಣಿ ದೇಶಪಾಂಡೆ (ಗುರುಜಿ), ಪುಣೆ. (ಆಧಾರ : ಮಾಸಿಕ ‘ಧಾರ್ಮಿಕ, ಅಕ್ಟೋಬರ್ ೨೦೧೮)