ಚಂದ್ರಘಂಟಾ
ಪಿಂಡಜಪ್ರವರಾರೂಢಾ ಚಂಡಕೋಪಾಸ್ರ್ತಕೈರ್ಯುತಾ |
ಪ್ರಸಾದಂ ತನುತೆ ಮಹ್ಯಂ ಚಂದ್ರಘಂಟೇತಿ ವಿಶ್ರುತಾ ||
ಅರ್ಥ: ಸಿಂಹದ ಮೇಲೆ (ಪಿಂಡಜಪ್ರವರ) ಆರೂಢಳಾಗಿ ಮತ್ತು ಭಯಂಕರ ಶಸ್ತಸಜ್ಜಿತಳಾಗಿರುವ ಚಂದ್ರಘಂಟಾ ಹೆಸರಿನಿಂದ ಪ್ರಸಿದ್ಧಳಾಗಿರುವ ದೇವಿ ನನ್ನ ಮೇಲೆ ಕೃಪೆ ತೋರಲಿ.
ಆಶ್ವಯುಜ ಶುಕ್ಲ ಪಕ್ಷದ ತೃತೀಯಾ ತಿಥಿಯು ನವರಾತ್ರಿಯ ಮೂರನೇ ದಿನವಾಗಿದೆ. ಈ ದಿನದಂದು ದುರ್ಗೆಯ ಮೂರನೇಯ ರೂಪದ ಅಂದರೆ ಚಂದ್ರಘಂಟಾ ದೇವಿಯ ಉಪಾಸನೆಯನ್ನು ಮಾಡಲಾಗುತ್ತದೆ. ಇವಳು ಶಾಂತಿದಾಯಕ ಮತ್ತು ಕಲ್ಯಾಣಕಾರಿ ದುರ್ಗೆಯ ಸ್ವರೂಪವಾಗಿದ್ದಾಳೆ. ತಲೆಯ ಮೇಲೆ ಘಂಟೆಯ ಆಕಾರದ ಅರ್ಧಚಂದ್ರವನ್ನು ಧರಿಸಿರುವ, ಸುವರ್ಣಕಾಂತಿ ಇರುವ ಈ ದೇವಿಯು ದಶಭುಜಧಾರಿಣಿಯಾಗಿದ್ದಾಳೆ.
ಚಂದ್ರಘಂಟಾ ದೇವಿಯು ತನ್ನ ಕೈಯಲ್ಲಿ ಖಡ್ಗ, ಬಾಣ, ಬಿಲ್ಲು, ಕಮಂಡಲ, ಹೂವು, ಗದೆ ಮತ್ತು ತ್ರಿಶೂಲವನ್ನು ಹಿಡಿದುಕೊಂಡಿದ್ದಾಳೆ.