ನವರಾತ್ರಿಯ ಐದನೆ ದಿನ

ಸ್ಕಂದಮಾತಾ

ಸಿಂಹಾಸನಗತಾ ನಿತ್ಯಂ ಪದ್ಮಶ್ರಿತಕರದ್ವಯಾ |

ಶುಭದಾಸ್ತು ಸದಾ ದೇವಿ ಸ್ಕಂದಮಾತಾ ಯಶಸ್ವಿನಿ ||

ಅರ್ಥ : ಸಿಂಹದ ಮೇಲೆ ಆರೂಢಳಾಗಿರುವ, ಎರಡೂ ಕೈಗಳಲ್ಲಿ ಕಮಲವನ್ನು ಹಿಡಿದಿರುವ ಯಶಸ್ವಿನಿ ದೇವಿ ಸ್ಕಂದಮಾತೆ ನನ್ನ ಕಲ್ಯಾಣವನ್ನು ಮಾಡುವವಳಾಗಲಿ.

ಆಶ್ವಯುಜ ಶುಕ್ಲ ಪಂಚಮಿಯು ನವರಾತ್ರಿಯ ಐದನೇಯ ದಿನವಾಗಿದೆ. ಈ ದಿನದಂದು ದುರ್ಗೆಯ ಐದನೇಯ ರೂಪದ, ಅಂದರೆ ಸ್ಕಂದಮಾತಾ ದೇವಿಯ ಉಪಾಸನೆಯನ್ನು ಮಾಡಲಾಗುತ್ತದೆ. ಇವಳು ಸೂರ್ಯಮಂಡಲದ ಏಕೈಕದೇವಿಯಾಗಿದ್ದಾಳೆ. ಇವಳ ತೊಡೆಯ ಮೇಲೆ ಕಾರ್ತಿಕಸ್ವಾಮಿ ವಿರಾಜಮಾನನಾಗಿದ್ದಾನೆ. ಈ ದೇವಿಯು ಚತುರ್ಭುಜಳಾಗಿದ್ದು, ಇವಳ ಎರಡು ಕೈಗಳಲ್ಲಿ ಕಮಲ, ಮೂರನೇಯ ಕೈ ಅಭಯ ಮುದ್ರೆ ಮತ್ತು ಒಂದು ಕೈಯಿಂದ ಕಾರ್ತಿಕಸ್ವಾಮಿಯನ್ನು ಹಿಡಿದುಕೊಂಡಿದ್ದಾಳೆ. ಸಿಂಹವು  ಇವಳ ವಾಹನವಾಗಿದೆ.