Arabic Flags Hoisted : ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ನಿರ್ಮಿಸಲಾದ ಕಟ್ಟಡಗಳ ಮೇಲೆ ಮುಸ್ಲಿಮರಿಂದ ಅರೇಬಿಕ್ ಧ್ವಜಗಳ ಹಾರಾಟ !

  • ಸೂರತ್ ನಂತರ ಈಗ ವಡೋದರಾದಲ್ಲಿ ಉದ್ವಿಗ್ನತೆ !

  • ಸಾರ್ವಜನಿಕವಾಗಿ ಗಣೇಶೋತ್ಸವ ಆಚರಿಸುವುದಕ್ಕೆ ವಿರೋಧ!

ವಡೋದರಾ (ಗುಜರಾತ್) – ಸೂರತ್ ನಂತರ ಈಗ ಗುಜರಾತ್‌ನ ವಡೋದರಾದಲ್ಲಿ ಗಣೇಶೋತ್ಸವದ ಸಮಯದಲ್ಲಿ ಉದ್ವಿಗ್ನತೆ ಉಂಟಾಗಿದೆ. ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ನಿರ್ಮಿಸಲಾದ ಕೆಲವು ಕಟ್ಟಡಗಳ ಮೇಲೆ ಮುಸ್ಲಿಮರು ಅರೇಬಿಕ್ ಧ್ವಜಗಳನ್ನು ಹಾರಿಸಿದಾಗ ಉದ್ವಿಗ್ನತೆ ಉಂಟಾಗಿದೆ. 10 ಅಂತಸ್ತಿನ ಸೊಸೈಟಿಯಲ್ಲಿ 450 ಮನೆಗಳಿವೆ. ಈ ಪೈಕಿ 48 ಮನೆಗಳನ್ನು ಮುಸ್ಲಿಮರಿಗೆ ನೀಡಲಾಗಿದ್ದು, ಆ ಮನೆಗಳ ಮೇಲೆ ಅರೇಬಿಕ್ ಧ್ವಜ ಹಾರಿಸಲಾಗಿದೆ. (‘ಸಬ್ಕಾ ಸಾಥ್ ಸಬ್ಕಾ ವಿಕಾಸ್ ಸಬ್ಕಾ ವಿಶ್ವಾಸ್ ಸಬ್ಕಾ ಪ್ರಯಾಸ್’ ಎಂಬ ಯೋಜನೆಯಡಿಯಲ್ಲಿ ಮುಸ್ಲಿಮರನ್ನು ಎಷ್ಟೇ ಅಭಿವೃದ್ಧಿ ಪಡಿಸಿದರೂ ನಾಯಿಯ ಬಾಲ ಡೊಂಕೇ ಆಗುತ್ತದೆ ಅದರಂತೆ ಭಾರತದ ವಿಶ್ವಾಸವನ್ನು ಗೆಲ್ಲಲು ಸಾಧ್ಯವೇ ಇಲ್ಲ, ಇದು ಸತ್ಯ! – ಸಂಪಾದಕರು) ಸೆಪ್ಟೆಂಬರ್ 9 ರಂದು ಈ ಘಟನೆ ನಡೆದಿದೆ ಎನ್ನಲಾಗಿದೆ.

1. ವಡೋದರ ನಗರದ ವಸಾನಾ-ಭೈಲಿ ಪ್ರದೇಶದಲ್ಲಿ ಪ್ರಧಾನಮಂತ್ರಿ ಯೋಜನೆಯಡಿ ನಿರ್ಮಿಸಲಾದ ‘ಅರ್ಬನ್ ಸೆವೆನ್ ಟವರ್ಸ್’ ನಲ್ಲಿ ಈ ಘಟನೆ ನಡೆದಿದೆ.

2. ಈ ಕಟ್ಟಡದಲ್ಲಿ ಬಹುಸಂಖ್ಯಾತ ಹಿಂದೂಗಳು ಇರುವುದರಿಂದ ಗಣೇಶೋತ್ಸವದಂದು ಶ್ರೀ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಿದ್ದಾರೆ. ಅಲ್ಲದೇ ಕಟ್ಟಡವೊಂದರಲ್ಲಿ ವಾಸವಾಗಿರುವ ಹಿಂದೂಗಳು ಗಣೇಶ ಮಂಡಲ ಸ್ಥಾಪಿಸಿ ಸಾರ್ವಜನಿಕ ಗಣೇಶೋತ್ಸವವನ್ನು ಆಚರಿಸುತ್ತಿದ್ದಾರೆ.

3. ಸಾರ್ವಜನಿಕ ಗಣೇಶೋತ್ಸವದಿಂದ ಅಡಚಣೆ ಆಗುತ್ತದೆ ಎಂದು ಅಲ್ಲಿನ ಮುಸ್ಲಿಂರೊಬ್ಬರು ತಮ್ಮ ಮನೆಯ ಮೇಲೆ ಅರೇಬಿಕ್ ಧ್ವಜವನ್ನು ಹಾರಿಸಿದ್ದಾರೆ. ಸ್ಥಳೀಯ ಹಿಂದೂಗಳು ಇದನ್ನು ತೀವ್ರವಾಗಿ ವಿರೋಧಿಸಿದರು. ಇದರಿಂದ ಇತರ ಮುಸ್ಲಿಮರು ಒಟ್ಟಾಗಿ ಧ್ವಜವನ್ನು ತೆಗೆಯದಂತೆ ಪಟ್ಟುಹಿಡಿದರು. ಈ ಸಮಯದಲ್ಲಿ ಅವರು ಪ್ರತಿಭಟಿಸುವ ಹಿಂದೂಗಳಿಗೆ ಬೆದರಿಕೆ ಹಾಕಿದರು ಮತ್ತು ಎಲ್ಲಾ 48 ಮುಸ್ಲಿಂ ಮನೆಗಳ ಮೇಲೆ ಅರೇಬಿಕ್ ಧ್ವಜವನ್ನು ಹಾರಿಸಲಾಯಿತು.

4. ಕಟ್ಟಡದ ಮೇಲೆ ಅರೇಬಿಕ್ ಧ್ವಜ ಹಾರಿಸುತ್ತಿರುವ ಮುಸಲ್ಮಾನರು ಬಾಡಿಗೆದಾರರಾಗಿದ್ದು, ಆಯಾ ಜಮೀನು ಮಾಲೀಕರು ಈ ಸ್ಥಳದಲ್ಲಿ ತಂಗಲು ಕೊಠಡಿ ನೀಡಬಾರದು ಎಂದು ಹಿಂದೂಗಳು ಮಾಧ್ಯಮಗಳ ಮೂಲಕ ಸ್ಥಳೀಯ ಆಡಳಿತಕ್ಕೆ ಆಗ್ರಹಿಸಿದರು. ಈ ಜನರು ನಮ್ಮ ಪ್ರತಿ ಹಿಂದೂ ಹಬ್ಬಕ್ಕೆ ಅಡ್ಡಕಾಲು ಹಾಕುವ ಕೆಲಸ ಮಾಡುತ್ತಾರೆ ಎಂದು ಹೇಳಿದರು.

5. ಪೊಲೀಸರು ಹಾಗೂ ಕಾರ್ಪೊರೇಟರ್‌ಗಳು ಸ್ಥಳಕ್ಕೆ ಧಾವಿಸಿ ಸಮಾಧಾನಪಡಿಸಿದರು.

ಸಂಪಾದಕೀಯ ನಿಲಿವು

ಈದ್‌ನಂತಹ ಮುಸ್ಲಿಂ ಹಬ್ಬಗಳನ್ನು ಹಿಂದೂಗಳು ಎಂದಾದರೂ ವಿರೋಧಿಸುತ್ತಾರೆಯೇ ? ಆದರೆ, ಅದು ಹಿಂದೂ ಅಥವಾ ಮುಸ್ಲಿಂ ಹಬ್ಬಗಳಿರಲಿ, ಹಿಂದೂಗಳನ್ನು ಗುರಿಯಾಗಿಸಲಾಗುತ್ತದೆ. ಪರಿಣಾಮಕಾರಿ ಹಿಂದೂ ಸಂಘಟನೆ ಮತ್ತು ದೈಹಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಮಟ್ಟಗಳಲ್ಲಿ ಅವರ ಸಬಲೀಕರಣ ಮಾಡುವುದು ಏಕೈಕ ಆಯ್ಕೆಯಾಗಿದೆ !