ನವ ದೆಹಲಿ – ರಾಜ್ಯ ಸೇರಿದಂತೆ ದೇಶಾದ್ಯಂತ ಗಣೇಶೋತ್ಸವವನ್ನು ಸಂಭ್ರಮದಿಂದ ಆಚರಿಸಲಾಗುತ್ತಿದೆ. ನವದೆಹಲಿಯಲ್ಲಿರುವ ದೇಶದ ಮುಖ್ಯ ನ್ಯಾಯಾಧೀಶ ಧನಂಜಯ ಚಂದ್ರಚೂಡ ಅವರ ಮನೆಯಲ್ಲಿಯೂ ಶ್ರೀ ಗಣಪತಿ ಮತ್ತು ಜ್ಯೇಷ್ಠ ಗೌರಿಯನ್ನು ಪೂಜಿಸಲಾಯಿತು. ಸೆಪ್ಟೆಂಬರ್ 11 ರಂದು ಪ್ರಧಾನಿ ನರೇಂದ್ರ ಮೋದಿ ಅವರು ಮುಖ್ಯ ನ್ಯಾಯಾಧೀಶರ ಮನೆಗೆ ತೆರಳಿ ಶ್ರೀಗಣೇಶನ ದರ್ಶನ ಪಡೆದರು. ಮಹಾರಾಷ್ಟ್ರದ ಸಾಂಪ್ರದಾಯಿಕ ಉಡುಪುಗಳನ್ನು ಧರಿಸಿದ ಅವರು ಶ್ರೀ ಗಣಪತಿ ಮತ್ತು ಗೌರಿಗೆ ಆರತಿ ಮಾಡಿದರು. ಈ ಸಂದರ್ಭದಲ್ಲಿ ಮುಖ್ಯ ನ್ಯಾಯಾಧೀಶರ ಕುಟುಂಬಸ್ಥರು ಉಪಸ್ಥಿತರಿದ್ದರು. ಪ್ರಧಾನಿ ಮೋದಿ ಅವರು ಸಪ್ಟೆಂಬರ್ 10ರಂದು ಕೇಂದ್ರ ಸಚಿವ ಪಿಯೂಷ್ ಗೋಯಲ್ ಅವರ ನಿವಾಸಕ್ಕೂ ಭೇಟಿ ನೀಡಿದ್ದರು. ಅಲ್ಲಿಯೂ ಗಣೇಶನ ಪೂಜೆಯಲ್ಲಿ ಪ್ರಧಾನಿ ಭಾಗವಹಿಸಿದ್ದರು. ಪ್ರಧಾನಿ ನರೇಂದ್ರ ಮೋದಿ ಅವರು ದೇಶವಾಸಿಗಳಿಗೆ ಶ್ರೀ ಗಣೇಶ ಚತುರ್ಥಿಯ ಶುಭಾಶಯಗಳನ್ನು ಕೋರಿದ್ದಾರೆ.
ಸನಾತನ ಪ್ರಭಾತ > ಏಷ್ಯಾ > ಭಾರತ > ದೆಹಲಿ > ಮುಖ್ಯ ನ್ಯಾಯಾಧೀಶರ ಮನೆಗೆ ತೆರಳಿ ಶ್ರೀ ಗಣೇಶನ ದರ್ಶನ ಪಡೆದ ಪ್ರಧಾನಿ ಮೋದಿ
ಮುಖ್ಯ ನ್ಯಾಯಾಧೀಶರ ಮನೆಗೆ ತೆರಳಿ ಶ್ರೀ ಗಣೇಶನ ದರ್ಶನ ಪಡೆದ ಪ್ರಧಾನಿ ಮೋದಿ
ಸಂಬಂಧಿತ ಲೇಖನಗಳು
- ನಾನು ಸನಾತನಿ ಹಿಂದೂ ಮತ್ತು ಹಿಂದೂ ಧರ್ಮಕ್ಕಾಗಿ ಎಲ್ಲವನ್ನೂ ತ್ಯಾಗ ಮಾಡಲು ಸಿದ್ದನಿದ್ದೇನೆ ! – ಆಂಧ್ರಪ್ರದೇಶ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್
- ಅಯೋಧ್ಯ ಫೌಂಡೇಶನ್ ನೇತೃತ್ವದಿಂದ ದೇಶಾದ್ಯಂತ ಸಾಮೂಹಿಕ ತರ್ಪಣ ವಿಧಿ ನೆರವೇರಿತು !
- ಇಸ್ರೈಲ್ನಂತೆ ಭಾರತದ ಮೇಲೆ ಕ್ಷಿಪಣಿ ದಾಳಿ ನಡೆದರೆ ಅದನ್ನು ತಡೆಯಲು ಅಸಾಧ್ಯ ! – ಏರ್ ಚೀಫ್ ಮಾರ್ಷಲ್ ಅಮರಪ್ರೀತ ಸಿಂಹ
- ಗೀರ ಸೋಮನಾಥ ಇಲ್ಲಿಯ ಮಸೀದಿ ನೆಲಸಮ ಮಾಡಿರುವ ಸರಕಾರದ ಕ್ರಮ ಯೋಗ್ಯ ! – ಗುಜರಾತ್ ಉಚ್ಚ ನ್ಯಾಯಾಲಯ
- Anti-Naxal Operation : ಛತ್ತೀಸಗಢ : ಭದ್ರತಾ ಪಡೆಗಳೊಂದಿಗೆ ನಡೆದ ಗುಂಡಿನ ಚಕಮಕಿ ಯಲ್ಲಿ 36 ಮಾವೋವಾದಿಗಳು ಹತ್ಯೆ !
- ಇರಾನ್ನ ಅಬ್ಬಾಸ್ ಬಂದರಿನಲ್ಲಿ ಪ್ರವೇಶಿಸಿದ ಭಾರತದ ಮೂರು ಯುದ್ಧನೌಕೆ !