ರಾಹುಲ ಗಾಂಧಿಯವರ ನಿವಾಸದ ಮುಂದೆ ಭಾಜಪ ಪ್ರತಿಭಟನೆ
ನವದೆಹಲಿ – ಭಾಜಪದಲ್ಲಿನ ಸಿಖ್ ಸೆಲ್‌ನ ಸಿಖ್ ಕಾರ್ಯಕರ್ತರು ರಾಜಧಾನಿಯಲ್ಲಿ ಕಾಂಗ್ರೆಸ್‌ನ ಹಿರಿಯ ನಾಯಕ ರಾಹುಲ್ ಗಾಂಧಿ ಅವರ ನಿವಾಸದ ಮುಂದೆ ಪ್ರತಿಭಟನೆ ನಡೆಸಿದರು. ರಾಹುಲ್ ಗಾಂಧಿ ಅಮೇರಿಕಕ್ಕೆ ಹೋಗಿ ಭಾರತ ಮತ್ತು ಸಿಖ್ಖರನ್ನು ಅವಮಾನಿಸಿದ್ದಾರೆ ಎಂದು ಅವರು ಆರೋಪಿಸಿದ್ದಾರೆ. ವಿದೇಶದಲ್ಲಿ ನಮ್ಮ ದೇಶದ ಅವಮಾನ ಮಾಡಿದ್ದಾರೆ. ಅವರು ಕ್ಷಮೆಯಾಚಿಸಬೇಕೆಂದು ಆಗ್ರಹಿಸಿದ್ದಾರೆ. ಭಾಜಪ ಮುಖಂಡ ಆರ್.ಪಿ.ಸಿಂಗ್ ಮತ್ತು ಇತರ ಸಿಖ್ ನಾಯಕರನ್ನು ಪೊಲೀಸರು ವಶಕ್ಕೆ ಪಡೆದರು.
ರಾಹುಲ್ ಗಾಂಧಿ ಹೇಳಿದ್ದೇನು?
ರಾಹುಲ್ ಗಾಂಧಿ ಅಮೇರಿಕ ಪ್ರವಾಸದಲ್ಲಿರುವಾಗ, ‘ಭಾರತದಲ್ಲಿರುವ ಸಿಖ್ ಸಮುದಾಯದಲ್ಲಿ ‘ನಮಗೆ ಪಗಡಿ, ಕಡಾ ಧರಿಸಲು ಬಿಡುವರೋ ಇಲ್ಲವೋ’, ಹಾಗೆಯೇ ‘ನಮಗೆ ಗುರುದ್ವಾರಗಳಿಗೆ ಹೋಗಲು ಬಿಡುವರೇ? ಎಂಬ ಭಯವಿದೆ. ಇದು ಸಿಖ್ಖರಿಗೆ ಮಾತ್ರವಲ್ಲ, ಎಲ್ಲ ಧರ್ಮೀಯರಿಗೂ ಕಳವಳಕಾರಿ ವಿಷಯವಾಗಿದೆ’ ಎಂದು ಹೇಳಿದ್ದರು. ಸಿಖ್ ವಿರೋಧಿ ಭಾಷಣ ಮಾಡಿರುವ ಗಾಂಧಿ ಅವರನ್ನು ನ್ಯಾಯಾಲಯದ ಮೆಟ್ಟಿಲೇರಿಸುತ್ತೇವೆ ಎಂದು ಭಾಜಪದ ಸಿಖ್ ನಾಯಕರು ಎಚ್ಚರಿಸಿದ್ದಾರೆ.
ಗಾಂಧಿ ಕುಟುಂಬ ಅಧಿಕಾರದಲ್ಲಿದ್ದಾಗಲೇ ಸಿಖ್ಖರಿಗೆ ಭಯವಿತ್ತು! – ಭಾಜಪ
ಭಾಜಪ ನಾಯಕ ಹರ್ದೀಪ್ ಸಿಂಗ್ ಪುರಿ ಈ ಬಗ್ಗೆ ಮಾತನಾಡಿ, 1984ರಲ್ಲಿ ಸಿಖ್ಖರನ್ನು ನಿಯೋಜಿತ ರೀತಿಯಲ್ಲಿ ಪಿತೂರಿಯಡಿ ಹತ್ಯೆ ಮಾಡಲಾಯಿತು. ಈ ಹತ್ಯಾಕಾಂಡದ ಹಿಂದೆ ಕಾಂಗ್ರೆಸ್ಸಿನ ಹಲವು ಹಿರಿಯ ಮುಖಂಡರು ಭಾಗವಹಿಸಿದ್ದರು. ಈ ದಾಳಿಯಲ್ಲಿ 3 ಸಾವಿರಕ್ಕೂ ಹೆಚ್ಚು ಸಿಖ್ಖರು ಸಾವನ್ನಪ್ಪಿದ್ದರು. ಈ ತಪ್ಪನ್ನು ಒಪ್ಪಿಕೊಳ್ಳುವ ಬದಲು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅನ್ಯರ ಮೇಲೆ ಪ್ರಶ್ನೆ ಹಾಕುತ್ತಿದ್ದಾರೆ. ರಾಹುಲ್ ಗಾಂಧಿಯವರ ಕುಟುಂಬ ಅಧಿಕಾರದಲ್ಲಿದ್ದಾಗ ಭಾರತದಲ್ಲಿ ಸಿಖ್ಖರು ಭಯಭೀತರಾಗಿದ್ದರು. ನಾನು 6 ದಶಕಗಳಿಂದ ಪಗಡಿ ಧರಿಸುತ್ತಿದ್ದೇನೆ ಎಂದು ಹರ್ದೀಪ್ ಸಿಂಗ್ ಹೇಳಿದರು.
ಸಂಪಾದಕೀಯ ನಿಲುವು1984ರಲ್ಲಿ ಕಾಂಗ್ರೆಸ್ ಸಿಖ್ಖರ ಹತ್ಯಾಕಾಂಡ ನಡೆಸಿತ್ತು. ಅಂತಹ ಪಕ್ಷ ಈಗ ‘ಭಾರತದಲ್ಲಿ ಸಿಖ್ಖರು ಭಯದಲ್ಲಿದ್ದಾರೆ’ ಎಂದು ಹೇಳುವುದೆಂದರೆ ‘ಕೋತಿ ಮೊಸರು ತಿಂದು ಮೇಕೆ ಬಾಯಿಗೆ ಒರೆಸಿದಂತೆ’ |