|

ಲಕ್ಷ್ಮಣಪುರಿ (ಉತ್ತರ ಪ್ರದೇಶ) – ಇಲ್ಲಿ ಮತಾಂಧ ಮುಸ್ಲಿಮರು ‘ಅಲ್ಲಾ ಹು ಅಕ್ಬರ್’ ಎಂದು ಘೋಷಣೆ ಕೂಗುತ್ತಾ ಗಣೇಶ ಮಂಟಪದ ಮೇಲೆ ಕಲ್ಲು ತೂರಿ, ಶ್ರೀ ಗಣೇಶ ಮೂರ್ತಿಯ ಬಳಿ ಇರಿಸಲಾಗಿದ್ದ ಕಲಶವನ್ನು ಒಡೆದರು. ಈ ಘಟನೆ ಸೆಪ್ಟೆಂಬರ್ 10 ರಂದು ನಡೆದಿದೆ. ಈ ಘಟನೆಯ ಬಗ್ಗೆ ಗಂಗಾ ವಿಹಾರ್ ಕಾಲೋನಿಯ ಚಿಕ್ಕ ಮಸೀದಿ ಬಳಿ ವಾಸವಿರುವ ಕಿರಣ್ ಚೌರಾಸಿಯಾ ಎಂಬ ಮಹಿಳೆ ಪೊಲೀಸರಿಗೆ ದೂರು ನೀಡಿದ್ದಾರೆ. ಈ ಪ್ರಕರಣದಲ್ಲಿ ಪೊಲೀಸರು ಅಪರಾಧ ದಾಖಲಿಸಿಕೊಂಡು ಇಬ್ಬರು ಅಪ್ರಾಪ್ತರನ್ನು ಬಂಧಿಸಿದ್ದಾರೆ. (ಅಪ್ರಾಪ್ತರಿರುವಾಗಲೇ ಹಿಂದೂಗಳ ಮೇಲೆ ದಾಳಿ ಮಾಡುವ ಮುಸ್ಲಿಮರು ದೊಡ್ಡವರಾದ ಮೇಲೆ ಜಿಹಾದಿ ಕೃತ್ಯಗಳನ್ನು ಮಾಡುತ್ತಾರೆ ! – ಸಂಪಾದಕರು)
ಮತಾಂಧರಿಂದ ‘ಪೂಜೆಯನ್ನು ನಿಲ್ಲಿಸಿ, ಇಲ್ಲವಾದರೆ ಕೆಟ್ಟ ಪರಿಣಾಮ ಉಂಟಾಗುತ್ತದೆ’, ಎಂದು ಬೆದರಿಕೆ !
ಈ ದೂರಿನಲ್ಲಿ ಕಿರಣ್ ಚೌರಾಸಿಯಾ ಅವರು, ”ಪ್ರತಿ ವರ್ಷದಂತೆ ಈ ವರ್ಷವೂ ನಾವು ಶ್ರೀ ಗಣೇಶ ಮೂರ್ತಿಯನ್ನು ವಿಧಿವತ್ತಾಗಿ ಪ್ರತಿಷ್ಠಾಪಿಸಿದ್ದೇವೆ. ಮರುದಿನದಿಂದ 20-25 ಮತಾಂಧರ ಗುಂಪು ನಮಗೆ ಕಿರುಕುಳ ನೀಡಲು ಪ್ರಾರಂಭಿಸಿತು. ಇದರಲ್ಲಿ ಅಪ್ರಾಪ್ತರು ಹಾಗೂ ಯುವಕರು ಸೇರಿದ್ದರು. ನಾವು ಪ್ರತಿದಿನ ಸಂಜೆ 7 ರಿಂದ 7:30 ರವರೆಗೆ ಆರತಿ ಮಾಡುತ್ತೇವೆ. ಆರತಿ ಸಮಯದಲ್ಲಿ, ಗಣೇಶ ಮಂಟಪದ ಮುಂದೆ ಮತಾಂಧರ ಗುಂಪು ‘ಅಲ್ಲಾ ಹು ಅಕ್ಬರ್’ ಮತ್ತು ಇತರ ಹಲವು ಪ್ರಚೋದನಕಾರಿ ಘೋಷಣೆಗಳನ್ನು ಕೂಗುತ್ತಾ ಗಣೇಶ ಮಂಟಪದ ಮುಂದೆ ಹೋಗಲು ಪ್ರಾರಂಭಿಸಿದರು. ನಂತರ, ಗುಂಪಿನಲ್ಲಿದ್ದ ಜನರು ಆರತಿ ಮಾಡುತ್ತಿದ್ದ ಹಿಂದೂಗಳಿಗೆ ಬೆದರಿಕೆ ಹಾಕಿದರು. ಪ್ರತಿ ದಿನ ಗುಂಪುಗಳು ಪೂಜೆಗೆ ಅಡ್ಡಿಪಡಿಸಲು ಪ್ರಯತ್ನಿಸುತ್ತಿದ್ದವು. ಸೆಪ್ಟೆಂಬರ 10ರಂದು ಸಂಜೆ 7.30ಕ್ಕೆ ಕೆಲವು ಮಹಿಳೆಯರು ಮತ್ತು ಹುಡುಗಿಯರು ಆರತಿ ಮಾಡುತ್ತಿದ್ದಾಗ ಅಲ್ಲಿಗೆ ಎಂದಿನಂತೆ ಮತಾಂಧ ಮುಸ್ಲಿಮರ ಗುಂಪೊಂದು ಬಂದು ಮಂಟಪದಲ್ಲಿ ಇರಿಸಲಾಗಿದ್ದ ಗಣೇಶನ ಮೂರ್ತಿಯನ್ನು ಧ್ವಂಸ ಮಾಡಲು ಯತ್ನಿಸಿ ಕಲ್ಲು ತೂರಾಟ ನಡೆಸಿತು. ಆ ಗುಂಪು ಇಲ್ಲಿನ ಕಲಶವನ್ನು ಒಡೆದಿದೆ. ಈ ಸಮಯದಲ್ಲಿ, ಮತಾಂಧ ಮುಸ್ಲಿಮರು ಪೂಜೆಯನ್ನು ನಿಲ್ಲಿಸಿ, ಇಲ್ಲದಿದ್ದರೆ ಕೆಟ್ಟ ಪರಿಣಾಮ ಉಂಟಾಗುತ್ತವೆ’, ಎಂದು ಬೆದರಿಕೆ ಹಾಕಿದರು. ಘಟನೆ ನಂತರ ಕಿರಣ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.
ಹಿಂದುತ್ವನಿಷ್ಠರಿಂದ ಪ್ರತಿಭಟನೆ!
ಘಟನೆಯ ಮಾಹಿತಿ ತಿಳಿಯುತ್ತಲೇ ಹಿಂದುತ್ವನಿಷ್ಠ ಸಂಘಟನೆಗಳ ಕಾರ್ಯಕರ್ತರು ಪೊಲೀಸ್ ಠಾಣೆಗೆ ಆಗಮಿಸಿ ಪ್ರತಿಭಟನೆ ನಡೆಸಿದರು. ಇದರೊಂದಿಗೆ ಈ ಪ್ರಕರಣದ ಆರೋಪಿಗಳ ವಿರುದ್ಧವೂ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಸದ್ಯ ಗಣೇಶ ಮಂಟಪದ ಬಳಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.
ಸಂಪಾದಕೀಯ ನಿಲುವು
|
ಕಳೆದ 24 ಗಂಟೆಗಳಲ್ಲಿ ಲವ್ ಜಿಹಾದ್ನ 4 ಮತ್ತು ಮತಾಂತರದ 2 ಘಟನೆಗಳು ಬೆಳಕಿಗೆ! : Love Jihad
ಹಸುವನ್ನು ರಾಷ್ಟ್ರಮಾತೆ ಎಂದು ಘೋಷಿಸಿ! – ಪೂ. ಕಿಶೋರ್ಶಾಸ್ತ್ರಿ ದವೆ : Declare Cow Mother of Nation
೬೦೦ ಮಿಲಿಯನ್ ಲೀಟರ್ ಕೊಳಚೆ ನೀರನ್ನು ನೇರವಾಗಿ ನದಿಗೆ ಬಿಡುತ್ತಿರುವುದರಿಂದ ಪುಣೆ ನಗರದ ನದಿಗಳು ಮಾಲಿನ್ಯದ ಸುಳಿಗೆ!
ಉತ್ತರ ಪ್ರದೇಶ : ಭಗವಾನ್ ಹನುಮಂತನ ಮೂರ್ತಿ ಧ್ವಂಸ ಪ್ರಕರಣದಲ್ಲಿ ಅಸದ್ ವಿರುದ್ಧ ಆರೋಪ
ಮಹಾರಾಷ್ಟ್ರದಲ್ಲಿ ಸಮಾನ ನಾಗರಿಕ ಸಂಹಿತೆಯ ಕರಡು ಸಿದ್ದಪಡಿಸಲಾಗುವುದು! – ಯೋಗೇಶ್ ಕದಮ್, ಗೃಹ ರಾಜ್ಯ ಸಚಿವರು, ಮಹಾರಾಷ್ಟ್ರ
‘ತ್ರಿವಳಿ ತಲಾಖ್’ ಮತ್ತು ‘ಬಹುಪತ್ನಿತ್ವ’ದ ವಿಷಯವಾಗಿ ಮಹಾರಾಷ್ಟ್ರದ ವಿಧಾನಸಭೆಯಲ್ಲಿ ಗದ್ದಲ