ಆ ಕಾಲದಲ್ಲಿ ನನಗೆ ಶ್ರೀನಗರದ ಲಾಲ್ ಚೌಕ್ ಗೆ ಹೋಗಲು ಭಯವಾಗುತ್ತಿತ್ತು ! – ಕಾಂಗ್ರೆಸ್ ಮಾಜಿ ಕೇಂದ್ರ ಗೃಹ ಸಚಿವ ಸುಶೀಲ್ ಕುಮಾರ್ ಶಿಂದೆ

ನವದೆಹಲಿ – ನಾನು ಗೃಹ ಸಚಿವನಾಗಿದ್ದಾಗ ನನಗೆ ಶ್ರೀನಗರದಲ್ಲಿನ ಲಾಲ್ ಚೌಕ್ ಮತ್ತು ದಾಲ್ ಸರೋವರಕ್ಕೆ ಹೋಗಲು ಭಯವೆನಿಸುತ್ತಿತ್ತು, ಎಂದು ಡಾ. ಮನಮೋಹನ ಸಿಂಹ ಸರಕಾರದಲ್ಲಿನ ಗೃಹಸಚಿವರಾಗಿದ್ದ ಸುಶೀಲ್ ಕುಮಾರ್ ಶಿಂದೆ ಅವರು ಒಪ್ಪಿಕೊಂಡಿದ್ದಾರೆ. ನವದೆಹಲಿಯಲ್ಲಿನ ಇಂಡಿಯಾ ಇಂಟರ್ನ್ಯಾಷನಲ್ ಸೆಂಟರ್ ನಲ್ಲಿ ಸೆಪ್ಟೆಂಬರ್ ೯ ರಂದು ನಡೆದ ಅವರ ‘ಫೈವ್ ಡಿಕೆಡ್ಸ್ ಆಫ್ ಪಾಲಿಟಿಕ್ಸ್’ ಪುಸ್ತಕದ ಲೋಕಾರ್ಪಣೆಯ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು. ಈ ಕಾರ್ಯಕ್ರಮದಲ್ಲಿ ಕಾಂಗ್ರೆಸ್ಸಿನ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ದಿಗ್ವಿಜಯ ಸಿಂಹ ಮತ್ತು ಶಿಕ್ಷಣ ತಜ್ಞ ವಿಜಯ ಧರ ಅವರು ಕೂಡ ಉಪಸ್ಥಿತರಿದ್ದರು. ವಿಜಯ ಧರ ಅವರು ಆಗ ಶಿಂದೆ ಇವರ ಸಲಹೆಗಾರರು ಕೂಡ ಆಗಿದ್ದರು.

ಪುಸ್ತಕಕ್ಕೆ ಶರದ ಪವಾರ ಪ್ರಸ್ತಾವನೆ !

ಶಿಂದೆ ಅವರ ಪುಸ್ತಕ ೨೪೦ ಪುಟಗಳದ್ದಾಗಿತ್ತು ಅವರು ಒಟ್ಟು ಎಂಟು ಭಾಗಗಳಲ್ಲಿ ತಮ್ಮ ರಾಜಕೀಯ ಪ್ರವಾಸದ ವಿವಿಧ ಅಂಗಗಳ ಕುರಿತು ಬರೆದಿದ್ದಾರೆ. ಈ ಪುಸ್ತಕಕ್ಕೆ ಶರದ ಪವಾರ ಅವರ ಪ್ರಸ್ತಾವನೆ ಇದೆ ಹಾಗೂ ಸೋನಿಯಾ ಗಾಂಧಿ ಅವರು ಕೂಡ ಶುಭಾಶಯಗಳನ್ನು ನೀಡಿದ್ದಾರೆ. ಐದು ದಶಕದ ರಾಜಕೀಯ ಇತಿಹಾಸವನ್ನು ತಿಳಿಸುವ ಈ ಇಂಗ್ಲಿಷ್ ಮತ್ತು ಹಿಂದಿ ಪುಸ್ತಕವನ್ನು ಸುಶೀಲ್ ಕುಮಾರ್ ಶಿಂದೆ ಅವರು ತಮ್ಮ ರಾಜಕೀಯ ಉತ್ತರಾಧಿಕಾರಿ ಹಾಗೂ ಸೋಲಾಪುರದ ಕಾಂಗ್ರೆಸ್ ಸಂಸದೆ ಪುತ್ರಿ ಪ್ರಣತಿ ಶಿಂದೆ ಅವರಿಗೆ ಸಮರ್ಪಿಸಿದ್ದಾರೆ.

ಸಂಪಾದಕೀಯ ನಿಲುವು

  • ಗೃಹ ಸಚಿವರಿಗೇ ಭಯವೆನಿಸುವಾಗ ಜನಸಾಮಾನ್ಯನರ ಗತಿಯೇನು ?
  • ಶಿಂದೆ ಅವರ ಈ ಮಾತು ಕಾಂಗ್ರೆಸ್ಸಿನ ೫೫ ವರ್ಷಗಳ ಅಧಿಕಾರಾವಧಿಯಲ್ಲಿನ ದುರ್ಬಲ ಮನಸ್ಥಿತಿಯನ್ನು ಎತ್ತಿ ತೋರಿಸುತ್ತದೆ. ದೃಢ ಮನೋಭಾವವಿರದ ಇಂತಹ ಹೆದರಪುಕ್ಕ ಗೃಹ ಸಚಿವರು ಸಿಕ್ಕಿದ್ದು ಜನರ ದುರಾದೃಷ್ಟ !
  • ಕಾಂಗ್ರೆಸ್ ತನ್ನ ಅಧಿಕಾರಾವಧಿಯಲ್ಲಿ ಮುಸಲ್ಮಾನರನ್ನು ಓಲೈಕೆ ಮಾಡಿದ್ದರೂ ಸಹ ತಮ್ಮದೇ ನಾಯಕರೊಬ್ಬರಿಗೆ ಮುಸಲ್ಮಾನ ಬಹುಸಂಖ್ಯಾತರಿರುವ ಶ್ರೀನಗರಕ್ಕೆ ಹೋಗಲು ಭಯವೆನಿಸುತ್ತದೆ. ಕಾಂಗ್ರೆಸ್ ಕೂಡ ಮುಸಲ್ಮಾನರಿಂದ ಸುರಕ್ಷಿತವಾಗಿಲ್ಲ ಎಂಬುದರ ಇದು ಪ್ರತೀಕವಾಗಿದೆ !