ಮಣಿಪುರದಲ್ಲಿ ಸಂಘರ್ಷ ಮತ್ತಷ್ಟು ಉಲ್ಬಣ; 5 ಜಿಲ್ಲೆಗಳಲ್ಲಿ ಇಂಟರ್ನೆಟ್ ಸ್ಥಗಿತ!

  • 3 ಜಿಲ್ಲೆಗಳಲ್ಲಿ ಸಂಚಾರ ನಿಷೇಧ !

  • 50ಕ್ಕೂ ಹೆಚ್ಚು ಜನರಿಗೆ ಗಾಯ !

  • ಭದ್ರತಾ ಸಿಬ್ಬಂದಿಗಳ ಮೇಲೆ ಕಲ್ಲು ತೂರಾಟ !

  • ಕೇಂದ್ರವು ಸಿ.ಆರ್.ಪಿ.ಎಫ್ ನ 2 ಸಾವಿರ ಸೈನಿಕರನ್ನು ಕಳಿಸಿದೆ !

ಇಂಫಾಲ – ಮಣಿಪುರದಲ್ಲಿ ಮತ್ತೊಮ್ಮೆ ಪರಿಸ್ಥಿತಿ ಗಂಭೀರವಾಗಿದೆ. ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯ ಅಂಶಗಳಿಗೆ ಸಂಬಂಧಿಸಿದಂತೆ ಪ್ರತಿಭಟನೆ ನಡೆಸುತ್ತಿರುವ ವಿದ್ಯಾರ್ಥಿಗಳು ಸೆಪ್ಟೆಂಬರ್ 10 ರಂದು ರಾಜಭವನಕ್ಕೆ ಮೋರ್ಚಾವನ್ನು ನಡೆಸಿದರು. ಈ ವೇಳೆ ವಿದ್ಯಾರ್ಥಿಗಳು ಮತ್ತು ಭದ್ರತಾ ಪಡೆಗಳ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ 50ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ಕಳೆದ 5 ದಿನಗಳಿಂದ ರಾಜ್ಯಾದ್ಯಂತ ಹಲವು ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. 3 ಜಿಲ್ಲೆಗಳಲ್ಲಿ ಸಂಚಾರ ನಿಷೇಧ ಜಾರಿಗೊಳಿಸಲಾಗಿದೆ. ಕೇಂದ್ರ ಸರಕಾರವು ಮಣಿಪುರದಾದ್ಯಂತ ಕೇಂದ್ರೀಯ ಮೀಸಲು ಪೊಲೀಸ್ ಪಡೆ (ಸಿ.ಆರ್‌.ಪಿ.ಎಫ್.) ತುಕಡಿಗಳನ್ನು ನಿಯೋಜಿಸಲು ಕೇಂದ್ರ ಸರಕಾರ ಆದೇಶಿಸಿದೆ. ಈ ತುಕಡಿಗಳಲ್ಲಿ ಸರಿಸುಮಾರು 2 ಸಾವಿರ ಸೈನಿಕರನ್ನು ಒಳಗೊಂಡಿದೆ.

ರಾಜ್ಯದಲ್ಲಿ ಹದಗೆಟ್ಟಿರುವ ಕಾನೂನು ಮತ್ತು ಸುವ್ಯವಸ್ಥೆಯನ್ನು ಎದುರಿಸಲು ರಾಜ್ಯದ ಪೊಲೀಸ್ ಮಹಾನಿರ್ದೇಶಕರು, ಉಪ ಮಹಾನಿರ್ದೇಶಕರು ಮತ್ತು ಭದ್ರತಾ ಸಲಹೆಗಾರರು ವಿಫಲರಾಗಿದ್ದಾರೆಂದು ಆರೋಪಿಸಿ ಅವರನ್ನು ಹುದ್ದೆಯಿಂದ ವಜಾಗೊಳಿಸಬೇಕು ಎಂಬುದು ವಿದ್ಯಾರ್ಥಿಗಳ ಬಲವಾದ ಬೇಡಿಕೆಯಾಗಿದೆ. ಈ ಬೇಡಿಕೆಯೊಂದಿಗೆ ರಾಜಭವನಕ್ಕೆ ಹೋಗುತ್ತಿದ್ದರು. ಈ ಸಮಯದಲ್ಲಿ ಆಂದೋಲನಕಾರರು ಜೋರಾಗಿ ಘೋಷಣೆಗಳನ್ನು ಮಾಡಿರುವ ಮಾಹಿತಿಯನ್ನು ಪೊಲೀಸರು ನೀಡಿದರು. ಹಾಗೆಯೇ ಆಂದೋಲನಕಾರರು ಭದ್ರತಾ ಸಿಬ್ಬಂದಿಗಳ ಮೇಲೆ ಕಲ್ಲು ತೂರಾಟ ನಡೆಸಿದರು, ಗುಂಪನ್ನು ಚದುರಿಸಲು ಪೊಲೀಸರು ಅಶ್ರುವಾಯುಗಳನ್ನು ಬಳಸಬೇಕಾಯಿತು.

ಮಣಿಪುರ ಸರಕಾರವು ಮಂಗಳವಾರ ಸಂಜೆ ಒಂದು ಪರಿಷ್ಕೃತ ಆದೇಶವನ್ನು ಹೊರಡಿಸಿದ್ದು, ವಿದ್ಯಾರ್ಥಿಗಳ ಆಂದೋಲನದ ಹಿನ್ನೆಲೆಯಲ್ಲಿ 5 ಜಿಲ್ಲೆಗಳಲ್ಲಿ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆಯೆಂದು ತಿಳಿಸಿದೆ. ಇದರೊಂದಿಗೆ ರಾಜ್ಯ ಸರಕಾರವು ರಾಜ್ಯಾದ್ಯಂತ 5 ದಿನ ಇಂಟರ್ನೆಟ್ ಸೇವೆ ಸ್ಥಗಿತಗೊಳಿಸುವುದಾಗಿ ಪ್ರಸಾರ ಮಾಡಿದೆ.

ಓರ್ವ ಮಹಿಳೆಯ ಸಾವು!

ಮತ್ತೊಂದೆಡೆ, ಕಂಗಪೋಕಿ ಜಿಲ್ಲೆಯಲ್ಲಿ ಎರಡು ಶಸ್ತ್ರಸಜ್ಜಿತ ಗುಂಪುಗಳ ನಡುವಿನ ಗುಂಡಿನ ದಾಳಿಯಲ್ಲಿ ಮಹಿಳೆಯೊಬ್ಬರು ಸಾವನ್ನಪ್ಪಿರುವುದು ಬೆಳಕಿಗೆ ಬಂದಿರುವುದರಿಂದ ಉದ್ವಿಗ್ನತೆ ಮತ್ತಷ್ಟು ಉಲ್ಬಣಿಸಿದೆ. ಥಂಗಬೂ ಈ ದುರ್ಗಮ ಕಣಿವೆಯಲ್ಲಿ ಸಮೂಹವು ಕೆಲವು ಮನೆಗಳನ್ನು ಸುಟ್ಟಿರುವುದರಿಂದ ಗ್ರಾಮಸ್ಥರು ಗ್ರಾಮದಿಂದ ಪಲಾಯನ ಗೈಯ್ಯಬೇಕಾಯಿತು.

ಶಾಲೆ ಮತ್ತು ಕಾಲೇಜುಗಳಿಗೆ 2 ದಿನಗಳ ರಜೆ !

ಮಣಿಪುರದ ಎಲ್ಲಾ ಶಾಲಾ-ಕಾಲೇಜುಗಳಲ್ಲಿ ಹಾಗೆಯೇ ವಿಶ್ವವಿದ್ಯಾಲಯಗಳಲ್ಲಿ 2 ದಿನ ಬಂದ್ ಮಾಡಲು ರಾಜ್ಯದ ಶಿಕ್ಷಣ ಇಲಾಖೆ ನಿರ್ಧರಿಸಿದೆ. ಈ ಸಮಯದ ಪ್ರತಿಭಟನೆಯಲ್ಲಿ ವಿದ್ಯಾರ್ಥಿಗಳು ದೊಡ್ಡ ಸಂಖ್ಯೆಯಲ್ಲಿ ಸಹಭಾಗಿಯಾಗಿರುವ ಚಿತ್ರಣವಿದೆ. ಈ ಹಿನ್ನೆಲೆಯಲ್ಲಿ ಶಾಲೆ, ಕಾಲೇಜುಗಳ ಹಾಗೂ ವಿಶ್ವವಿದ್ಯಾಲಯಗಳಲ್ಲಿ ಯಾವುದೇ ಅನುಚಿತ ಘಟನೆ ನಡೆಯಬಾರದು ಎಂದು 2 ದಿನಗಳ ಕಾಲ ಎಲ್ಲಾ ಶಿಕ್ಷಣ ಸಂಸ್ಥೆಗಳನ್ನು ಮುಚ್ಚಲಾಗುವುದು.

ಅತ್ಯಾಧುನಿಕ ಶಸ್ತ್ರಾಸ್ತ್ರಗಳ ಉಪಯೋಗಿಸಿರುವ ಸಾಕ್ಷಿ ! – ಪೊಲೀಸ್ ಮಹಾನಿರ್ದೇಶಕರು

ಮಣಿಪುರದಲ್ಲಿ ಕುಕಿ ಮತ್ತು ಮೈತೇಯಿ ಘರ್ಷಣೆಯ ಹೊಸ ಅಧ್ಯಾಯ ಪ್ರಾರಂಭವಾಗಿದ್ದು, ಈ ಸಮಯದಲ್ಲಿ ಡ್ರೋನ್‌, ಆಧುನಿಕ ಕ್ಷಿಪಣಿಗಳು ಇತ್ಯಾದಿಗಳನ್ನು ಬಳಸಿ ದಾಳಿ ನಡೆಸಲಾಗುತ್ತಿದೆ. ಪೊಲೀಸರಿಗೆ ಕ್ಷಿಪಣಿ ಆಯುಧದ ಕೆಲವು ಚೂರುಗಳು ಸಿಕ್ಕಿದೆಯೆಂದು ಒಪ್ಪಿಕೊಂಡಿದ್ದಾರೆ. ಆದರೆ ‘ಆಸ್ಸಾಂ ರೈಫಲ್ಸ್’ನ ನಿವೃತ್ತ ಮಹಾನಿರ್ದೇಶಕ ಜನರಲ್ ಪಿ.ಸಿ. ನಾಯರ್ ಅವರು ದಾಳಿಯಲ್ಲಿ ರಾಕೆಟ್‌ಗಳು ಅಥವಾ ಡ್ರೋನ್‌ಗಳನ್ನು ಉಪಯೋಗಿಸಿಲ್ಲವೆಂದು ಹೇಳಿದ್ದಾರೆ. ಆದರೆ ಮಣಿಪುರ ಪೊಲೀಸ್ ಮಹಾನಿರ್ದೇಶಕ (ಆಡಳಿತ) ಕೆ. ಜಯಂತ ಸಿಂಗ ಇವರು ಈ ದಾವೆಯನ್ನು ತಿರಸ್ಕರಿಸುತ್ತಾ, ಅತ್ಯಾಧುನಿಕ ಶಸ್ತ್ರಾಸ್ತ್ರಗಳು ಉಪಯೋಗಿಸಿರುವ ಸಾಕ್ಷಿಗಳು ಪತ್ತೆಯಾಗಿವೆಯೆಂದು ಹೇಳಿದ್ದಾರೆ.

ಸಂಪಾದಕೀಯ ನಿಲುವು

ಎಲ್ಲಿಯವರೆಗೆ ಮಣಿಪುರದಲ್ಲಿ ಕ್ರೈಸ್ತ ಕುಕಿ ಭಯೋತ್ಪಾದಕರಿಗೆ ತಕ್ಕ ಪಾಠ ಕಲಿಸುವುದಿಲ್ಲವೋ, ಅಲ್ಲಿಯವರೆಗೆ ಶಾಂತಿ ಸ್ಥಾಪನೆಯಾಗುವುದಿಲ್ಲ ಎನ್ನುವುದು ಸರಕಾರಕ್ಕೆ ಯಾವಾಗ ಗಮನಕ್ಕೆ ಬರುವುದು ?