ನವದೆಹಲಿ – ಶಾಲೆ ಬಿಟ್ಟ ಬಳಿಕ ಮನೆಗೆ ಹೋಗಲು ತರಗತಿಯಿಂದ ಹೊರಗೆ ಬಂದಿದ್ದ 6 ವರ್ಷದ ಬಾಲಕಿಯೊಬ್ಬಳನ್ನು ಅಮೀರ್ ಎಂಬ ಯುವಕ ತಡೆದು ಆಕೆಯನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದನು. ನಂತರ ಆಕೆಯನ್ನು ಅನುಚಿತವಾಗಿ ಸ್ಪರ್ಶಿಸಿರುವ ಪ್ರಕರಣದಲ್ಲಿ ಪೊಲೀಸರು ಅಮೀರ್ ಎಂಬ ಕಾರ್ಮಿಕನನ್ನು ಬಂಧಿಸಿದ್ದಾರೆ. ಸಪ್ಟೆಂಬರ 3ರ ಮಧ್ಯಾಹ್ನ 1 ಗಂಟೆಗೆ ಈ ಘಟನೆ ನಡೆದಿರುವುದು ವರದಿಯಾಗಿದೆ.
1. ಯುವಕನ ವರ್ತನೆ ನೋಡಿ ಹೆದರಿದ ಬಾಲಕಿ ಅವನಿಂದ ತಪ್ಪಿಸಿಕೊಂಡು ತನ್ನ ತರಗತಿಯ ಕಡೆಗೆ ಓಡಿದಳು. ತರಗತಿಯ ಹೊರಗಿದ್ದ ಶಿಕ್ಷಕಿಯನ್ನು ಭೇಟಿಯಾಗಿ ನಡೆದ ಘಟನೆಯನ್ನು ವಿವರಿಸಿದಳು.
2. ಆ ಮುಗ್ಧ ಬಾಲಕಿಯ ಮಾತನ್ನು ಕೇಳಿ ತರಗತಿಯ ಶಿಕ್ಷಕಿಯು ಬೆಚ್ಚಿಬಿದ್ದರು. ಅವರು ಕೂಡಲೇ ಆ ಬಾಲಕಿಯನ್ನು ಶಾಲೆಯ ಮುಖ್ಯೋಪಾಧ್ಯಾಪಕರ ಬಳಿಗೆ ಕರೆದೊಯ್ದರು; ಆದರೆ ಮುಖ್ಯೋಪಾಧ್ಯಾಪಕರು ಮತ್ತು ಇತರ ಅಧಿಕಾರಿಗಳು ಪೊಲೀಸರಿಗೆ ದೂರು ನೀಡುವ ಬದಲು ಈ ವಿಷಯವನ್ನು ಮುಚ್ಚಿ ಹಾಕಲು ಪ್ರಯತ್ನಿಸಿದರು. ಅಷ್ಟರಲ್ಲಿಯೇ ಆರೋಪಿ ಶಾಲೆಯಿಂದ ಪರಾರಿಯಾಗಿದ್ದನು.
3. ಇದರ ನಂತರ, ಆ ಬಾಲಕಿಯು ಮನೆಗೆ ಹೋಗಿ ನಡೆದ ಈ ಎಲ್ಲ ಘಟನೆಯನ್ನು ಪೋಷಕರಿಗೆ ಹೇಳಿದಳು. ಪೋಷಕರು ತಕ್ಷಣವೇ ಪೊಲೀಸ್ ಠಾಣೆಗೆ ಹೋದರು. ಪೊಲೀಸರು ತಕ್ಷಣವೇ ಕ್ರಮ ಕೈಕೊಂಡು ಮರುದಿನ ಶಾಲೆಯ ಮುಖ್ಯೋಪಾಧ್ಯಾಪಕರು, ತರಗತಿಯ ಶಿಕ್ಷಕಿ, ಮೇಲ್ವಿಚಾರಕರು ಹಾಗೂ ಗುತ್ತಿಗೆದಾರರನ್ನು ಬಂಧಿಸಿದರು.
ಸಂಪಾದಕೀಯ ನಿಲುವುಇಂತಹ ಕಾಮುಕರಿಗೆ ಜೀವನಪೂರ್ತಿ ನೆನಪಿನಲ್ಲಿಡುವಂತಹ ಶಿಕ್ಷೆ ಸರ್ಕಾರ ನೀಡಬೇಕು |