ಇಂಫಾಲ್ – ಮಣಿಪುರದಲ್ಲಿನ ಕಳೆದ ಒಂದೂಕಾಲು ವರ್ಷಕ್ಕಿಂತಲೂ ಹೆಚ್ಚು ಕಾಲ ಧಗಧಗಿಸುತ್ತಿರುವ ಹಿಂಸಾಚಾರ ಇನ್ನೂ ನಿಂತಿಲ್ಲ. ಸೆಪ್ಟೆಂಬರ್ 7 ರಂದು ಆಸ್ಸಾಂ ಗಡಿಯಲ್ಲಿರುವ ಜಿರಿಬಾಮ ಜಿಲ್ಲೆಯಲ್ಲಿ ನಡೆದ ಹಿಂಸಾಚಾರದಲ್ಲಿ 6 ಜನರು ಸಾವನ್ನಪ್ಪಿದರು. ಮಣಿಪುರದ ಇಂಫಾಲ ಕಣಿವೆಯ ಬಿಷ್ಣುಪುರನಲ್ಲಿ ಸೆಪ್ಟೆಂಬರ್ 6 ರಂದು ನಡೆದ ರಾಕೆಟ ಮತ್ತು ಡ್ರೋನ್ ದಾಳಿಗಳಿಗೆ ಪ್ರತ್ಯುತ್ತರವೆಂದು ಜಿರಿಬಾಮನ ದಾಳಿ ನಡೆಸಲಾಗಿದೆಯೆಂದು ಹೇಳಲಾಗುತ್ತಿದೆ. ಮಣಿಪುರದಲ್ಲಿ ಕಳೆದ 7 ದಿನಗಳಿಂದ ಹಿಂಸಾಚಾರದಲ್ಲಿ ಹೆಚ್ಚಳವಾಗಿದೆ. ಇದರಲ್ಲಿ 8 ಮಂದಿ ಸಾವನ್ನಪ್ಪಿದ್ದು, 15ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
ಬಿಷ್ಣುಪುರದ ಮೇಲಿನ ದಾಳಿಯಲ್ಲಿ ಓರ್ವ ಪೂಜಾರಿ ಸಾವನ್ನಪ್ಪಿದ್ದರು. ತದನಂತರ ಜಿರಿಬಾಮನಲ್ಲಿನ ಒಂದು ಗ್ರಾಮದ ಮೇಲೆ ದಾಳಿ ನಡೆಸಲಾಯಿತು. ಬಳಿಕ ಅಲ್ಲಿನ 2 ಗುಂಪುಗಳು ಪರಸ್ಪರ ಎದುರುಬದುರು ಬಂದವು. ಈ ಘಟನೆಯ ಬಳಿಕ ಮುಖ್ಯಮಂತ್ರಿ ಬೀರೆನಸಿಂಗ ಇವರು ಸಚಿವ ಸಂಪುಟದ ತುರ್ತು ಸಭೆ ಕರೆದು ರಾಜ್ಯದ ಪರಿಸ್ಥಿತಿಯ ಬಗ್ಗೆ ರಾಜ್ಯಪಾಲರಿಗೆ ವಿವರವಾದ ಮಾಹಿತಿ ನೀಡಿದರು.
ಸಂಪಾದಕೀಯ ನಿಲುವುಎಲ್ಲಿಯವರೆಗೆ ಮಣಿಪುರದಲ್ಲಿ ಕ್ರೈಸ್ತ ಕುಕಿ ಭಯೋತ್ಪಾದಕರಿಗೆ ತಕ್ಕಪಾಠ ಕಲಿಸಲಾಗುವುದಿಲ್ಲವೋ, ಅಲ್ಲಿಯವರೆಗೆ ಅಲ್ಲಿ ಶಾಂತಿ ಸ್ಥಾಪನೆಯಾಗುವುದಿಲ್ಲ ! |