ಸರಕಾರಿ ಶಾಲೆಯಲ್ಲಿ ಆಧ್ಯಾತ್ಮ ಕಲಿಸಿದ ಮುಖ್ಯೋಪಾಧ್ಯಾಯರ ವರ್ಗಾವಣೆ

  • ದ್ರಮುಕ ಸರಕಾರವಿರುವ ತಮಿಳುನಾಡು ರಾಜ್ಯದ ಘಟನೆ

  • ಇಸ್ಲಾಮಿಕ್ ಸಂಘಟನೆಗಳಿಂದ ಸರಕಾರಕ್ಕೆ ದೂರು !

ಚೆನ್ನೈ (ತಮಿಳುನಾಡು) – ಇಲ್ಲಿನ ಅಶೋಕನಗರ ಹೆಣ್ಣುಮಕ್ಕಳ ಸರಕಾರಿ ಶಾಲೆಯಲ್ಲಿ ಆಧ್ಯಾತ್ಮಿಕ ಪ್ರಬೋಧನ ತರಗತಿಯನ್ನು ಆಯೋಜಿಸಿದ್ದರಿಂದ ರಾಜ್ಯದ ದ್ರಮುಕ ಸರಕಾರವು ಮುಖ್ಯಾಧ್ಯಾಪಕರನ್ನು ವರ್ಗಾವಣೆ ಮಾಡಿದೆ. ಹಾಗೆಯೇ ಈ ವರ್ಗದಲ್ಲಿ ಉಪನ್ಯಾಸ ನೀಡಿದ ವಕ್ತಾರ ಮಹಾವಿಷ್ಣು ಇವರನ್ನು ತಮಿಳುನಾಡು ಪೊಲೀಸರು ಚೆನ್ನೈ ವಿಮಾನ ನಿಲ್ದಾಣದಿಂದ ಬಂಧಿಸಿದೆ.

1. ಈ ಶಾಲೆಯಲ್ಲಿ `ಪರಮಪೋರುಲ ಫೌಂಡೇಶನ‘ ಈ ಸ್ವಯಂಸೇವಕ ಸಂಸ್ಥೆಯ ವಕ್ತಾರ ಮಹಾವಿಷ್ಣು ಇವರು ಧರ್ಮ, ಪುಣ್ಯ, ಪಾಪ ಮತ್ತು ದೇವಸ್ಥಾನಗಳ ಕುರಿತು ಉಪನ್ಯಾಸ ನೀಡಿದ್ದರು. ಅವರು ಮಾತನಾಡಿ, ನಮ್ಮ ಹಿಂದಿನ ಜನ್ಮದ ಕರ್ಮದ ಶಿಕ್ಷೆಯನ್ನು ನಮಗೆ ಈ ಜನ್ಮದಲ್ಲಿಯೇ ಸಿಗುತ್ತದೆ. ಗುರುಕುಲ ವ್ಯವಸ್ಥೆಯ ಮೂಲಭೂತವಾಗಿ ವರ್ಣ ಮತ್ತು ಲಿಂಗದ ಆಧಾರದ ಶಿಕ್ಷಣಕ್ಕೆ ಅನುಮತಿ ನೀಡಿತ್ತು. ಆದರೆ ಆಂಗ್ಲರು ಅದನ್ನು ನಾಶಗೊಳಿಸಿದರು. ಕೆಲವು ಶ್ಲೋಕಗಳು ಬೆಂಕಿಯ ಮಳೆಗರೆಯುವತ್ತವೆ ಮತ್ತು ರೋಗಗಳನ್ನು ಗುಣಪಡಿಸುತ್ತವೆ. ಇದೆಲ್ಲವನ್ನೂ ನಮ್ಮ ಪೂರ್ವಜರು ಶಾಸ್ತ್ರಗಳ ರೂಪದಲ್ಲಿ ಬರೆದಿದ್ದರು; ಆದರೆ ಆಂಗ್ಲರು ಅದನ್ನು ನಾಶಮಾಡಿದರು.

2. ಮಹಾವಿಷ್ಣು ಅವರ ಉಪನ್ಯಾಸದ ವಿಡಿಯೋ ಸಾಮಾಜಿಕ ಮಾಧ್ಯಮದಿಂದ ಪ್ರಸಾರವಾದ ಬಳಿಕ ಡೆಮೊಕ್ರೆಟಿಕ ಯೂಥ್ ಫೆಡರೇಶನ ಆಫ್ ಇಂಡಿಯಾ (ಡಿ.ವೈ.ಎಫ್.ಐ) ಮತ್ತು ಸ್ಟೂಡೆಂಟ್ಸ್ ಫೆಡರೇಶನ್ ಆಫ್ ಇಂಡಿಯಾ (ಎಸ್.ಎಫ್.ಐ) ಕಟ್ಟರವಾದಿ ಪಕ್ಷಗಳ ಕಾರ್ಯಕರ್ತರು ನಿಷೇಧಿಸಿದರು. ಹಾಗೆಯೇ ಈ ಉಪನ್ಯಾಸದ ಮಾಹಿತಿ ಸರಕಾರದ ವರೆಗೆ ತಲುಪಿತು. ತದನಂತರ ಶಿಕ್ಷಣ ಇಲಾಖೆಯು ಮುಖ್ಯೋಪಾಧ್ಯಾಪಕರನ್ನು ವರ್ಗಾವಣೆ ಮಾಡಿದೆ. (ಕಟ್ಟರವಾದಿ ರಾಜಕೀಯ ಪಕ್ಷಗಳ ತಾಳಕ್ಕೆ ತಕ್ಕಂತೆ ಕುಣಿಯುವ ದ್ರಮುಕ ಸರಕಾರ ! – ಸಂಪಾದಕರು)

3. ಈ ಪ್ರಕರಣದ ಮಾಹಿತಿ ಸಿಕ್ಕಿದ ತಕ್ಷಣ ಶಿಕ್ಷಣ ಸಚಿವ ಅನಬಿಲ ಮಹೇಶರು ಶಾಲೆಗೆ ತಲುಪಿದರು. ಅವರು ಮಾತನಾಡಿ, ಈ ಕಾರ್ಯಕ್ರಮಕ್ಕೆ ಯಾರು ಅನುಮತಿ ನೀಡಿದರು, ಇದರ ವಿಚಾರಣೆಯನ್ನು ಮಾಡಲಾಗುವುದು. ಇದಕ್ಕಾಗಿ ಸಮಿತಿಯನ್ನು ಸ್ಥಾಪಿಸಲಾಗಿದೆ. ವರದಿಯ ಆಧಾರದಲ್ಲಿ 2 ದಿನಗಳಲ್ಲಿ ಕ್ರಮ ಕೈಕೊಳ್ಳಲಾಗುವುದು ಎಂದು ಹೇಳಿದರು.
‘ಶಿಕ್ಷಣ ವ್ಯವಸ್ಥೆಯಲ್ಲಿ ಕೇವಲ ವಿಜ್ಞಾನದ ಆವಶ್ಯಕತೆಯಂತೆ !’ – ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್
ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಮಾತನಾಡಿ, ನಮ್ಮ ಶಾಲೆಯ ಪದ್ಧತಿಯ ಪುಸ್ತಕದಲ್ಲಿ ವೈಜ್ಞಾನಿಕ ವಿಷಯವಿದೆ. ವಿದ್ಯಾರ್ಥಿಗಳು ಓದಬೇಕು ಮತ್ತು ತಿಳಿದುಕೊಳ್ಳಬೇಕು. ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ ಕೇವಲ ವಿಜ್ಞಾನದ ಆವಶ್ಯಕತೆಯಿದೆ. ಇದರಿಂದ ವಿದ್ಯಾರ್ಥಿಗಳು ಅಭಿವೃದ್ಧಿ ಹೊಂದುತ್ತಾರೆ. ಶಿಕ್ಷಕರು ಕೂಡ ಹೊಸ ಕಲ್ಪನೆಯೊಂದಿಗೆ ವಿದ್ಯಾರ್ಥಿಗಳ ಪ್ರಗತಿಯಲ್ಲಿ ಸಹಕರಿಸಬೇಕು. ರಾಜ್ಯದ ಎಲ್ಲಾ ಶಾಲೆಗಳಲ್ಲಿ ನಡೆಯುವ ಕಾರ್ಯಕ್ರಮಗಳಿಗೆ ನಾನು ಹೊಸ ಮಾರ್ಗಸೂಚಿಗಳನ್ನು ಪ್ರಕಟಿಸಿದ್ದೇನೆ. ನಮ್ಮ ಶಾಲೆಯ ಮಕ್ಕಳು ತಮಿಳುನಾಡಿನ ಭವಿಷ್ಯವಾಗಿದ್ದಾರೆ ಎಂದು ಹೇಳಿದರು.

ಸಂಪಾದಕೀಯ ನಿಲುವು

  • ಹಿಂದೂ ದ್ವೇಷಿ ನಾಸ್ತಿಕವಾದಿಗಳಾಗಿರುವ ದ್ರಮುಕ ಪಕ್ಷದ ಸರಕಾರದ ಅವಧಿಯಲ್ಲಿ ಇದು ಬಿಟ್ಟರೆ ಬೇರೆ ಏನಾಗುತ್ತದೆ ? ಇಂತಹ ಅಧರ್ಮಿಯರಿಗೆ ಅವರ ಕರ್ಮದ ಫಲ ಖಂಡಿತವಾಗಿಯೂ ಸಿಗುತ್ತದೆಯೆಂದು ಹಿಂದೂ ಧರ್ಮದ ಕರ್ಮಫಲನ್ಯಾಯದ ಸಿದ್ಧಾಂತ ಹೇಳುತ್ತದೆ !
  • ದ್ರಮುಕ ಸರಕಾರ ಮದರಸಾದಲ್ಲಿ ಮುಸ್ಲಿಂ ವಿದ್ಯಾರ್ಥಿಗಳಿಗೆ ಏನು ಕಲಿಸಲಾಗುತ್ತದೆ ಎಂದು ಮಾಹಿತಿಯನ್ನು ಪಡೆದುಕೊಳ್ಳುತ್ತದೆಯೇ ? ಹಿಂದೂ ಸಂಘಟನೆ ಇಂತಹ ಶಿಕ್ಷಣವನ್ನು ಗಮನದಲ್ಲಿಟ್ಟುಕೊಂಡು ಅದರ ಮಾಹಿತಿಯನ್ನು ಸರಕಾರಕ್ಕೆ ಕೊಡುವರೇ ?