ಶ್ರೀ ಗಣೇಶ ಮೂರ್ತಿಯ ಮೆರವಣಿಗೆಯ ಮೇಲೆ ಮತಾಂಧರಿಂದ ಕಲ್ಲು ತೂರಾಟ

  • ರತಲಾಮ (ಮಧ್ಯಪ್ರದೇಶ) ಇಲ್ಲಿನ ಘಟನೆ

  • ಆಕ್ರೋಶಗೊಂಡ ಗುಂಪಿನಿಂದ ವಾಹನಗಳ ಧ್ವಂಸ

ರತಲಾಮ (ಮಧ್ಯಪ್ರದೇಶ) – ಇಲ್ಲಿನ ಮೋಚಿಪುರಾ ಪ್ರದೇಶದಲ್ಲಿ ಶ್ರೀ ಗಣೇಶಮೂರ್ತಿಯ ಮೆರವಣಿಗೆಯ ಮೇಲೆ ಮತಾಂಧರು ಕಲ್ಲು ತೂರಾಟ ನಡೆಸಿದರು. ತದನಂತರ ಆಕ್ರೋಶಗೊಂಡ ಹಿಂದೂಗಳು ಪೊಲೀಸ ಠಾಣೆಗೆ ಸುತ್ತುವರಿದು ರಸ್ತೆತಡೆ ಆಂದೋಲನ ನಡೆಸಿದರು. ಅವರು ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಕೊಳ್ಳುವಂತೆ ಕೋರಿದರು. ಹಾಗೆಯೇ ಗುಂಪಿನಿಂದ ಕಲ್ಲು ತೂರಾಟ ನಡೆಸಿದ ಪ್ರದೇಶಕ್ಕೆ ಹೋಗಿ ವಾಹನವನ್ನು ಧ್ವಂಸಗೊಳಿಸಿದರು. ಅವರನ್ನು ತಡೆಯಲು ಪೊಲೀಸರು ಅಶ್ರುವಾಯು ಸಿಡಿಸಿದರು ಮತ್ತು ಪರಿಸ್ಥಿತಿಯನ್ನು ಹತೋಟಿಗೆ ತಂದರು.

1. ಇಲ್ಲಿನ ಅಂಕಲಾ ಪರಿಸರದ ಮೋಚಿಪುರ ಭಾಗದಿಂದ ಶ್ರೀ ಗಣೇಶ ಮೂರ್ತಿಯ ಮೆರವಣಿಗೆ ಸಾಗುತ್ತಿತ್ತು. ಟ್ರಾಕ್ಟರ ಟ್ರಾಲಿಯಿಂದ ಶ್ರೀ ಗಣೇಶಮೂರ್ತಿಯನ್ನು ತೆಗೆದುಕೊಂಡು ಹೋಗುತ್ತಿದ್ದರು. ರಾತ್ರಿ ಒಂಬತ್ತೂವರೆ ಸುಮಾರಿಗೆ ಅವರ ಮೇಲೆ ಕಲ್ಲು ತೂರಾಟ ನಡೆಸಲಾಯಿತು. ಈ ಕಲ್ಲು ತೂರಾಟದಲ್ಲಿ ಕೆಲವು ಮಕ್ಕಳು ಗಾಯಗೊಂಡರು ಎಂದು ಹೇಳಲಾಗುತ್ತಿದೆ.

2. ಶ್ರೀ ಗಣೇಶಮೂರ್ತಿ ಪ್ರತಿಷ್ಠಾಪನೆಯ ಸ್ಥಳಕ್ಕೆ ತೆಗೆದುಕೊಂಡು ಹೋದ ಬಳಿಕ ಆಕ್ರೋಶಗೊಂಡ ಯುವಕರ ಗುಂಪು ಸ್ಟೇಶನ ರೋಡ ಪೊಲೀಸ ಠಾಣೆಯನ್ನು ತಲುಪಿದರು. ಅಲ್ಲಿ ಘೋಷಣೆಗಳನ್ನು ಕೂಗುತ್ತಾ ತಪ್ಪಿತಸ್ಥರ ವಿರುದ್ಧ ಕೂಡಲೇ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಪೊಲೀಸ ಠಾಣೆಯ ಎದುರಿಗೆ ರಸ್ತೆ ತಡೆದು ಆಂದೋಲನ ನಡೆಸಿದರು.

3. ತದನಂತರ ಹಿಂದೂ ಜಾಗರಣ ಮಂಚ್‌ನ ಮುಖಂಡ ರಾಜೇಶ ಕಟಾರಿಯಾ, ಭಾಜಪ ಮುಖಂಡ ನಿರ್ಮಲ್ ಕಟಾರಿಯಾ ಸೇರಿದಂತೆ ಹಲವು ಮುಖಂಡರು ಸ್ಥಳಕ್ಕೆ ಆಗಮಿಸಿದರು. ಪೊಲೀಸ ಅಧಿಕಾರಿಗಳು ಘಟನಾಸ್ಥಳವನ್ನು ತಲುಪಿ ಆಂದೋಲನಕಾರರೊಂದಿಗೆ ಮಾತನಾಡಿ ಅವರನ್ನು ಸಮಾಧಾನಪಡಿಸಲು ಪ್ರಯತ್ನಿಸಿದರು.

4. ಆಂದೋಲನಕಾರರ ಬೇಡಿಕೆಯಂತೆ, ಪೊಲೀಸರು ಕಲ್ಲು ತೂರಾಟದ ಪ್ರಕರಣದಲ್ಲಿ ಅಪರಿಚಿತ ವ್ಯಕ್ತಿಗಳ ವಿರುದ್ಧ ಅಪರಾಧವನ್ನು ದಾಖಲಿಸಿದರು; ಆದರೆ ಹಿಂದೂ ಸಂಘಟನೆ ಕಾರ್ಯಕರ್ತರು ಮಾತ್ರ ಆರೋಪಿಗಳನ್ನು ಬಂಧಿಸಬೇಕು ಎಂದು ಒತ್ತಾಯಿಸಿದರು. ಕೆಲವು ಕಾರ್ಯಕರ್ತರ ಗುಂಪು ಪೊಲೀಸ್ ಠಾಣೆಯಿಂದ ಮುಸಲ್ಮಾನರ ವಸತಿಯ ಕಡೆಗೆ ಸಾಗಿತು. ಗುಂಪನ್ನು ತಡೆಯಲು ಪೊಲೀಸರು ತಲುಪಿದರು; ಆದರೆ ಅದಕ್ಕಿಂತ ಮೊದಲೇ ಗುಂಪು ಅನೇಕ ವಾಹನಗಳನ್ನು ಧ್ವಂಸಗೊಳಿಸಿತು. ಗುಂಪನ್ನು ಚದುರಿಸಲು ಪೊಲೀಸರು ಅಶ್ರುವಾಯು ಸಿಡಿಸಿದರು.

ಸಂಪಾದಕೀಯ ನಿಲುವು

ಭಾರತಾದ್ಯಂತ ಹಿಂದೂಗಳ ಧಾರ್ಮಿಕ ಮೆರವಣಿಗೆಯ ಮೇಲೆ ಹಿಂದಿನ ಅನೇಕ ವರ್ಷಗಳಿಂದ ಕಲ್ಲು ತೂರಾಟ ನಡೆಸಲಾಗುತ್ತದೆ. ಹೀಗಿರುವಾಗ ಮತಾಂಧರಿಗೆ ತಕ್ಕ ಪಾಠ ಕಲಿಸಲು ಸರಕಾರ ಸಮರೋಪಾದಿಯಲ್ಲಿ ಏಕೆ ಪ್ರಯತ್ನಿಸುವುದಿಲ್ಲ ?