#ShraddhSankalpDiwas : ವಿಭಜನೆಯ ಸಮಯದಲ್ಲಿ ಪಾಕಿಸ್ತಾನದಿಂದ ಪಲಾಯನ ಮಾಡಿದ್ದ ಒಂದೇ ಒಂದು ಹಿಂದೂ ಕುಟುಂಬ ಅವರ ಎಲ್ಲಾ ಸದಸ್ಯರ ಸಹಿತ ಭಾರತ ತಲುಪಲಿಲ್ಲ ! – ಶ್ರೀಮತಿ ಮೀನಾಕ್ಷಿ ಶರಣ

ಶ್ರೀಮತಿ ಮೀನಾಕ್ಷಿ ಶರಣ

ಡೆಹರಾಡೂನ್ (ಉತ್ತರಾಖಂಡ) – ಅಯೋಧ್ಯೆ ಫೌಂಡೇಶನ್ ನ ಅಧ್ಯಕ್ಷೆ ಶ್ರೀಮತಿ ಮೀನಾಕ್ಷಿ ಶರಣ ಇವರು ಇಲ್ಲಿ ಆಯೋಜಿಸಿದ್ದ ‘ಶಾಶ್ವತ ಭಾರತ ಸಂವಾದ’ ಕಾರ್ಯಕ್ರಮದಲ್ಲಿ ಮಾತನಾಡುತ್ತಿರುವಾಗ ಭಾರತ ಪಾಕಿಸ್ತಾನ ವಿಭಜನೆಯ ಸಮಯದಲ್ಲಿನ ಭೀಕರ ಪರಿಸ್ಥಿತಿಯನ್ನು ಉಲ್ಲೇಖಿಸಿದರು. ಆ ಕಾಲದಲ್ಲಿ ಯಾರು ಜೀವ ಕಳೆದುಕೊಂಡರೋ ಅವರಿಗಾಗಿ ಶ್ರಾದ್ಧ ಮಾಡುವುದು ಮಹತ್ವ ಅವರು ವಿವರಿಸಿದರು. ವಿಭಜನೆಯ ಸಮಯದಲ್ಲಿ ಪಾಕಿಸ್ತಾನದಿಂದ ಪಲಾಯನ ಮಾಡಿರುವ ಒಂದೇ ಒಂದು ಹಿಂದೂ ಕುಟುಂಬ ಕೂಡ ಭಾರತದಲ್ಲಿ ಕುಟುಂಬ ಸಹಿತ ಎಲ್ಲಾ ಸದಸ್ಯರೊಂದಿಗೆ ತಲುಪಲಿಲ್ಲ, ಎಂದು ಅವರು ಹೇಳಿದರು.

ಅವರು ಮಾತು ಮುಂದುವರೆಸುತ್ತಾ,

೧. ಈಗಿನ ಪೀಳಿಗೆಯಲ್ಲಿನ ಹಿಂದುಗಳಿಗೆ ವಿಭಜನೆಯ ಇತಿಹಾಸ ತಿಳಿದಿರುವುದು ಅವಶ್ಯಕವಾಗಿದೆ. ಹಾಗೂ ವಿಭಜನೆಯ ಸಮಯದಲ್ಲಿನ ಯಾವ ಭಯಾನಕ ಪರಿಸ್ಥಿತಿಯನ್ನು ಎದುರಿಸಿದ್ದಾರೆ, ‘ಆ ಹಿಂದುಗಳ ಪೂರ್ವಜರು ಏನಾದರು ? ಇದರ ಮಾಹಿತಿ ಇರುವುದು ಅವಶ್ಯಕವಾಗಿದೆ.

೨. ಲಕ್ಷಾಂತರ ಹಿಂದುಗಳು ಮತ್ತು ಸಿಖರು ಮೃತಪಟ್ಟರು ಹಾಗೂ ಅನೇಕರು ಉಧ್ದಟ ಮತಾಂಧರಿಂದ ತಮ್ಮ ಪ್ರತಿಷ್ಠೆಯ ರಕ್ಷಣೆಗಾಗಿ ಸ್ವಂತದ ಮತ್ತು ಅವರ ಪ್ರಿಯ ಜನರ ಹತ್ಯೆ ಮಾಡಿದರು.

೩. ಪಾಕಿಸ್ತಾನದಿಂದ ಹಿಂದೂ ಮತ್ತು ಸಿಖ್ ಕುಟುಂಬ ಮತ್ತು ಸಾಮಗ್ರಿ ಸಂಗ್ರಹಿಸಲು ಕೂಡ ಅವಕಾಶ ನೀಡದೆ ಜೀವ ರಕ್ಷಿಸಿಕೊಳ್ಳಲು ಪಲಾಯನ ಮಾಡಲು ಅನಿವಾರ್ಯಗೊಳಿಸಿದರು. ಒಲೆಯ ಮೇಲೆ ಬೆಯ್ಯುತ್ತಿರುವ ಅನ್ನ ಕೂಡ ಬಿಟ್ಟು ಅನೇಕರು ಮನೆ ತೊರೆದರು.

೪. ಹಿಂದೂ ಮಹಿಳೆಯರ ಮೇಲೆ ಸಾಮೂಹಿಕ ಬಲತ್ಕಾರ ನಡೆದವು ಮತ್ತು ಅನೇಕ ಮಹಿಳೆಯರನ್ನು ಒತ್ತೆಯಾಗಿ ಇಟ್ಟುಕೊಂಡರು. ಗರ್ಭಿಣಿ ಸ್ತ್ರೀಯರ ಹೊಟ್ಟೆ ಹರಿದು ಹುಟ್ಟದೇ ಇರುವ ಮಗುವನ್ನು ಕೂಡ ಸಾಯಿಸಿದರು.

೫. ಇಂತಹ ಹಿಂದೂಗಳಿಗಾಗಿ ಶ್ರಾದ್ಧಾ ಅಂತೂ ಬಿಡಿ, ಸಾವನ್ನಪ್ಪಿರುವ ಬಹುಸಂಖ್ಯಾತ ಹಿಂದೂಗಳ ಅಂತ್ಯಸಂಸ್ಕಾರ ಕೂಡ ನಡೆದಿಲ್ಲ, ಅಂತಹ ಅನೇಕ ಮೃತ ದೇಹಗಳು ಹದ್ದುಗಳು ತಿಂದವು.

೬. ಕಳೆದ ೧ ಸಾವಿರದ ೪೦೦ ವರ್ಷಗಳಲ್ಲಿ ಹಿಂದುಗಳ ಜೊತೆಗೆ ಇದೇ ನಡೆಯುತ್ತಿದೆ. ಹಿಂದೂಕುಷ ಪರ್ವತವು ಹಿಂದೂ ಮಹಿಳೆಯರ ಮೇಲೆ ನಡೆದಿರುವ ಬಲಾತ್ಕಾರ, ಲೈಂಗಿಕ ಗುಲಾಮಗಿರಿ ಹಿಂದುಗಳ ಕೊಲೆ ಇಂತಹ ಅನೇಕ ಭಯಾನಕ ಘಟನೆಗಳು ನೋಡಿದೆ.

೭. ವಿಭಜನೆಯ ಸಮಯದಲ್ಲಿ ಅಸುನೀಗಿರುವವರನ್ನು ಸ್ಮರಿಸುವುದು, ಇಂದಿನ ಪೀಳಿಗೆಯ ಕರ್ತವ್ಯವಾಗಿದೆ. ಧರ್ಮ ರಕ್ಷಣೆ ಆಗಬೇಕು, ಬರುವ ಪೀಳಿಗೆಗಳು ಹಿಂದುವಾಗಿ ಉಳಿಯಬೇಕೆಂದು ತಮ್ಮ ಪೀಳಿಗೆಯವರು ಸ್ವತಃ ಬಲಿದಾನ ನೀಡಿದರು.

೮. ಅಕ್ಟೋಬರ್ ೨, ೨೦೨೪ ರಂದು ಮಹಾಲಯ ಅಮಾವಾಸ್ಯೆಯ ದಿನ ಸಾಮೂಹಿಕ ತರ್ಪಣ ವಿಧಿಯ ಆಯೋಜನೆ ಮಾಡಲಾಗುವುದು. ಯಾರಿಗೆ ಸಾಧ್ಯ ಇದೆ, ಅವರು ಸಪ್ಟೆಂಬರ್ ೧೭, ೨೦೨೪ ರಂದು ನಡೆಯುವ ಪಿತೃಪಕ್ಷದ ಸಂಪೂರ್ಣ ಕಾಲಾವಧಿಯಲ್ಲಿ ಶ್ರಾದ್ಧ ಮಾಡಬೇಕು.

೯. ಹಿಂದೂಗಳು ಹಿಂದೂ ಧರ್ಮದಲ್ಲಿನ ಇಂತಹ ವಿಧಿಗಳ ಮಹತ್ವ ತಿಳಿದುಕೊಳ್ಳಬೇಕು ಮತ್ತು ತಮ್ಮ ವಂಶದಲ್ಲಿನ ಎಲ್ಲಾ ದಿವಂಗತ ಆತ್ಮಗಳಿಗೆ ಆಧ್ಯಾತ್ಮಿಕ ಲಾಭಕ್ಕಾಗಿ ಶ್ರಾದ್ಧ ಮಾಡಬೇಕು ಎಂದು ಹೇಳಿದರು.