ಕೇರಳದಲ್ಲಿ ೬ ಚರ್ಚ್‌ನ ಮೇಲೆ ನಿಯಂತ್ರಣ ಪಡೆಯಲು ಉಚ್ಚ ನ್ಯಾಯಾಲಯದಿಂದ ಜಿಲ್ಲಾಧಿಕಾರಿಗಳಿಗೆ ಆದೇಶ !

ತಿರುವನಂತಪುರಂ – ಕೇರಳ ಉಚ್ಚ ನ್ಯಾಯಾಲಯವು ಎರ್ನಾಕುಲಂ ಮತ್ತು ಫಲಕ್ಕಡ್ ಇಲ್ಲಿಯ ಜಿಲ್ಲಾಧಿಕಾರಿಗಳಿಗೆ ಮಲಂಕಾರ ಕ್ರೈಸ್ತರ ಒಡೆತನದ ೬ ಚರ್ಚಗಳನ್ನು ವಶಕ್ಕೆ ಪಡೆಯುವ ಆದೇಶ ನೀಡಿದೆ. ಮಲಂಕಾರ ಕ್ರೈಸ್ತರ ಜೆಕೋಬಾಯಿಟ್ ಮತ್ತು ಆರ್ಥೋಡಾಸ್ಕ್ ಈ ಎರಡು ಗುಂಪಿನಲ್ಲಿ ಈ ಚರ್ಚ್ ಸಂದರ್ಭದಲ್ಲಿ ದೀರ್ಘಕಾಲದಿಂದ ವಿವಾದ ನಡೆಯುತ್ತಿತ್ತು. ಆರ್ಥೋಡಾಸ್ಕ್ ಗುಂಪಿನ ೨ ಪಾದ್ರಿಗಳು ದಾಖಲಿಸಿರುವ ಅವಮಾನ ಅರ್ಜಿಯ ಕುರಿತು ಉಚ್ಚ ನ್ಯಾಯಾಲಯವು ಈ ಆದೇಶ ನೀಡಿದೆ.

೧. ಕೇರಳ ಉಚ್ಚ ನ್ಯಾಯಾಲಯದ ನ್ಯಾಯಾಧೀಶ ವಿ.ಜಿ. ಅರುಣ ಇವರು ನ್ಯಾಯಾಲಯದ ೨೦೨೨ ರ ಆದೇಶದ ಪಾಲನೆ ಮಾಡದೆ ಇರುವುದರಿಂದ ಟೀಕಿಸಿದೆ. ‘ಈ ಆದೇಶದಲ್ಲಿ ಮಲಂಕಾರ ಆರ್ಥೋಡಾಕ್ಸ್ ಚರ್ಚ್ ನ (ಆರ್ಥೋಡಾಕ್ಸ್ ಗುಂಪಿನ) ಸದಸ್ಯರಿಗೆ ಈ ಚರ್ಚ್ ನಲ್ಲಿ ಪ್ರವೇಶಿಸಲು ಮತ್ತು ಶಾಂತಿಯಿಂದ ಉಪಾಸನೆ ಮಾಡಲು ಅನುಮತಿ ನೀಡಿತ್ತು; ಆದರೆ ಜೆಕೊಬಾಯಿಟ್ ಕ್ರೈಸ್ತ ಆರ್ಥೋಡಾಕ್ಸ್ ಕ್ರೈಸ್ತರು ಚರ್ಚ್‌ನಲ್ಲಿ ಪ್ರವೇಶಿಸಲು ತಡೆಯುತ್ತಿದ್ದರು. ಆದ್ದರಿಂದ ಈಗ ಜಿಲ್ಲಾಧಿಕಾರಿಗಳಿಗೆ ಈ ಚರ್ಚ್ ಗಳನ್ನು ವಶಕ್ಕೆ ಪಡೆಯದೆ ಪರ್ಯಾಯವಿಲ್ಲ, ಎಂದು ನ್ಯಾಯಾಧೀಶರು ಹೇಳಿದರು.

೨. ರಾಜ್ಯ ಸರಕಾರವು ನ್ಯಾಯಾಲಯಕ್ಕೆ, ‘ನ್ಯಾಯಾಲಯದ ಆದೇಶದ ಕಾರ್ಯಾಚರಣೆ ಮಾಡುವುದಕ್ಕಾಗಿ ಸರಕಾರದಿಂದ ಪ್ರಾಥಮಿಕ ಪ್ರಯತ್ನ ಮಾಡಲಾಗಿತ್ತು; ಆದರೆ ಜೆಕೊಬಾಯಿಟ್ ಗುಂಪಿನ ಚಟುವಟಿಕೆಯಿಂದ ಸರಕಾರ ಹಿಂದೆ ಸರಿಯಬೇಕಾಯಿತು. ಸರಕಾರದ ಹಸ್ತಕ್ಷೇಪದಿಂದ ಜೀವಿತ ಮತ್ತು ಸಂಪತ್ತಿಗೆ ಹಾನಿ ಆಗಬಹುದಾಗಿತ್ತು.’

೩. ಜೆಕೊಬಾಯಿಟ್ ಗುಂಪಿನ ಸದಸ್ಯರು ನ್ಯಾಯಾಲಯದಲ್ಲಿ, ಈ ಚರ್ಚ್ ಆರ್ಥೋಡಾಕ್ಸ್ ಗುಂಪಿಗೆ ಒಪ್ಪಿಸಲು ಸಾಧ್ಯವಿಲ್ಲ ಎಂದು ಹೇಳಿತ್ತು .

೪. ಉಚ್ಚ ನ್ಯಾಯಾಲಯವು ಜೆಕೋಬಾಯಿಟ್ ಗುಂಪಿನ ಆಕ್ಷೇಪ ತಿರಸ್ಕರಿಸಿ ಎರ್ನಾಕುಲಂ ಜಿಲ್ಲಾಧಿಕಾರಿಗಳಿಗೆ ಓಡಕ್ಕಲಿ ಇಲ್ಲಿಯ ಸೇಂಟ್ ಮೇರಿಜ್ ಆರ್ಥೋಡಾಸ್ಕ್ ಚರ್ಚ್, ಪುಲಿಂಥನಮ್ ನ ಸೆಂಟ್ ಜಾನ್ಸ್ ಬೇಸಫೇಝ ಆರ್ಥೋಡಾಸ್ಕ್ ಸಿರಿಯನ್ ಚರ್ಚ್ ಮತ್ತು ಮಾಝುವನ್ನೂರು ಇಲ್ಲಿಯ ಸೆಂಟ್ ಥಾಮಸ್ ಆರ್ಥೋಡಾಸ್ಕ್ ಸೀರಿಯನ್ ಚರ್ಚ್ ಮತ್ತು ಮಾಝುವನ್ನೂರು ಇಲ್ಲಿಯ ಸೆಂಟ್ ಥಾಮಸ್ ಆರ್ಥೋಡಾಸ್ಕ್ ಸೀರಿಯನ್ ಚರ್ಚ್ ಈ ೩ ಚರ್ಚ್ ಗಳನ್ನು ವಶಕ್ಕೆ ಪಡೆಯಲು ಆದೇಶ ನೀಡಿದೆ.

೫. ಹಾಗೂ ಉಚ್ಚ ನ್ಯಾಯಾಲಯವು ಪಲಕಡ್ ಜಿಲ್ಲಾಧಿಕಾರಿಗಳಿಗೆ ಮಂಗಲಂ ಧರಣ ಇಲ್ಲಿಯ ಸೇಂಟ್ ಮೇರಿ ಆರ್ಥೋಡಾಸ್ಕ್ ಚರ್ಚ್, ಏರಿಕಿನ್ಚಿರ ಇಲ್ಲಿಯ ಸೆಂಟ್ ಮೇರಿ ಆರ್ಥೋಡಾಸ್ಕ್ ಸೀರಿಯನ್ ಚರ್ಚ್ ಮತ್ತು ಚೇರುಕುನ್ನಂ ಇಲ್ಲಿಯ ಸೇಂಟ್ ಥಾಮಸ್ ಆರ್ಥೋಡಾಸ್ಕ್ ಸೀರಿಯನ್ ಚರ್ಚ್ ಇವುಗಳ ಕಾರ್ಯಭಾರ ಸ್ವೀಕರಿಸಲು ಹೇಳಲಾಗಿದೆ.

ಆರ್ಥೋಡಸ್ಕ್ ಮತ್ತು ಜೆಕೊಬಾಯಿಟ್ ಗುಂಪಿನಲ್ಲಿನ ಏನು ವಾದ ?

ಆರ್ಥೋಡಾಸ್ಕ್ ಮತ್ತು ಜೆಕೊಬಾಯಿಟ್ ಗುಂಪು ಇವು ಪ್ರಾರಂಭದಲ್ಲಿ ಒಂದೇ ಚರ್ಚ್ ನ ಭಾಗವಾಗಿದ್ದವು; ಆದರೆ ಚರ್ಚ್ ನ ನಿಷ್ಠೆಯಿಂದ ಮತಭೇದ ನಿರ್ಮಾಣವಾಗಿದೆ ಮತ್ತು ಅವು ಬೇರೆ ಆಯಿತು. ಆರ್ಥೋಡಾಸ್ಕ್ ಗುಂಪು ಕೇರಳದ ಒಂದು ಬಿಷಪ್ ಜೊತೆ (ಮಲಂಕಾರ ಪೆಟ್ರೋಪಾಲಿಟನ್) ನಿಷ್ಠೆ ಇಟ್ಟುಕೊಂಡಿದೆ ಹಾಗೂ ಜೆಕೋಬಾಯಿಟ್ ಗುಂಪು ಆಂಟಿವೋಕ್ ನ ಧರ್ಮಗುರುಗಳನ್ನು (ಸೀರಿಯನ್ ಆರ್ಥೋಡಾಸ್ಕ್ ಚರ್ಚ್‌ನ ಮುಖ್ಯಸ್ಥ) ಅವರನ್ನು ತಮ್ಮ ಧಾರ್ಮಿಕ ಪ್ರಮುಖನೆಂದು ನಂಬುತ್ತದೆ. ಈ ಮತಭೇದದ ನಂತರ ಕೇರಳದಲ್ಲಿನ ವಿವಿಧ ಚರ್ಚ್‌ಗಳಲ್ಲಿ ವ್ಯವಸ್ಥಾಪನೆ ಯಾವ ಗುಂಪಿಗೆ ಒಪ್ಪಿಸಬೇಕು, ಇದರಿಂದ ಎರಡು ಗುಂಪಿನಲ್ಲಿ ವಿವಾದ ಪ್ರಾರಂಭವಾಯಿತು. (ಹಿಂದೂ ಧರ್ಮದಲ್ಲಿ ಜಾತಿ ವ್ಯವಸ್ಥೆ ಇದೆ ಎಂದು ಹೇಳಿ ಅವರನ್ನು ಕೀಳಾಗಿ ನೋಡುವ ಜಾತ್ಯತೀತರು ಕ್ರೈಸ್ತ ಪಂಥದಲ್ಲಿನ ಇಂತಹ ಗುಂಪುಗಾರಿಕೆಯ ಬಗ್ಗೆ ಯಾಕೆ ಏನು ಮಾತನಾಡುವುದಿಲ್ಲ ! – ಸಂಪಾದಕರು)