ಕೋಲಕಾತಾದಲ್ಲಿ ಮೃತ ಮಹಿಳಾ ವೈದ್ಯೆಯ ಪೋಷಕರಿಂದ ಪೊಲೀಸರ ವಿರುದ್ಧ ಗಂಭೀರ ಆರೋಪ

ಪೊಲೀಸ್ ಅಧಿಕಾರಿಯಿಂದ ಪ್ರಕರಣವನ್ನು ಮುಚ್ಚಿಹಾಕುವಂತೆ ನಮಗೆ ಆಮಿಷ ಒಡ್ಡಲು ಪ್ರಯತ್ನ !

ಕೋಲಕಾತಾ (ಬಂಗಾಳ) – ಕೋಲಕಾತಾದ ರಾಧಾ ಗೋಬಿಂದ್ ಕರ್ ಆಸ್ಪತ್ರೆಯಲ್ಲಿ ಮಹಿಳಾ ವೈದ್ಯೆಯ ಮೇಲೆ ಬಲಾತ್ಕಾರ ಮತ್ತು ಹತ್ಯೆಯ ಪ್ರಕರಣದಲ್ಲಿ ವೈದ್ಯೆಯ ಪೋಷಕರು ಪೊಲೀಸರ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಅವರು, ನಮಗೆ ನಮ್ಮ ಮಗಳ ಮೃತ ದೇಹವನ್ನು ಹಸ್ತಾಂತರಿಸಿದಾಗ, ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಪ್ರಕರಣವನ್ನು ಮುಚ್ಚಹಾಕಲು ನಮಗೆ ಆಮಿಷ ಒಡ್ಡಲು ಪ್ರಯತ್ನಿಸಿದರು ಎಂದು ಹೇಳಿದ್ದಾರೆ. ನಾವು ಅದನ್ನು ನಿರಾಕರಿಸಿದೆವು. ಪೊಲೀಸರು ಬಿಗಿಯಾಗಿ ತನಿಖೆ ನಡೆಸದೇ ಪ್ರಕರಣವನ್ನು ಮುಚ್ಚಿ ಹಾಕಲು ಪ್ರಯತ್ನಿಸಿದರು.

ಮೃತ ವೈದ್ಯೆಯ ತಂದೆ ಮಾತನಾಡಿ,

1. ಘಟನೆ ನಡೆದ ದಿನ ರಾತ್ರಿ ಅವರ ಪುತ್ರಿಯ ಮೃತದೇಹವನ್ನು ಸ್ಮಶಾನಕ್ಕೆ ತೆಗೆದುಕೊಂಡು ಹೋಗುವಂತೆ ಒತ್ತಾಯಿಸಿದರು. ಯಾವುದೇ ತನಿಖೆಯನ್ನು ನಡೆಸದೇ ಅವರ ಪುತ್ರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಹೇಳಲಾಯಿತು.

2. ನಂತರ ನಾವು 12 ಗಂಟೆ 10 ನಿಮಿಷಕ್ಕೆ ಆಸ್ಪತ್ರೆಗೆ ತಲುಪಿದೆವು, ಆಗ ಮಗಳನ್ನು ನೋಡಲು ನಮಗೆ 3 ಗಂಟೆಗಳ ಕಾಲ `ಸೆಮಿನಾರ ಹಾಲ್’ ಹೊರಗೆ ಕೂಡಿಸಲಾಯಿತು. ನಮಗೆ ಶವವನ್ನು ನೋಡಲು ಅನುಮತಿ ನೀಡಲಿಲ್ಲ. ಅಷ್ಟೇ ಅಲ್ಲ, ಶವವವನ್ನು ಶವಪರೀಕ್ಷೆಗಾಗಿ ಪೊಲೀಸ್ ಠಾಣೆಗೆ ಒಯ್ಯುವವರೆಗೆ ಪೊಲೀಸ ಠಾಣೆಯಲ್ಲಿ ನಿಲ್ಲಬೇಕಾಯಿತು.

3. ಆ ದಿನ ಆಸ್ಪತ್ರೆ ಆಡಳಿತದಿಂದ ಯಾರೂ ನನ್ನೊಂದಿಗೆ ಮಾತನಾಡಲಿಲ್ಲ. ನಮಗೆ ಅಂತ್ಯಸಂಸ್ಕಾರ ಮಾಡುವುದಿರಲಿಲ್ಲ; ಆದರೆ ನಮ್ಮ ಮೇಲೆ ಒತ್ತಡ ಹೇರಿದರು. ನಾವು ಒಂದು ಗಂಟೆ ಪೊಲೀಸ್ ಠಾಣೆಯಲ್ಲಿ ಕುಳಿತಿದ್ದೆವು. ನಂತರ, ಶವವನ್ನು ನಮಗೆ ನೀಡಿದರು, ಆಗ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಪ್ರಕರಣವನ್ನು ಮುಚ್ಚಿಹಾಕಲು ನಮಗೆ ಹಣ ನೀಡಲು ಪ್ರಯತ್ನಿಸಿದರು.

4. ನಂತರ ನಮ್ಮನ್ನು ಬಲವಂತವಾಗಿ ಮನೆಗೆ ಕಳುಹಿಸಲಾಯಿತು. ನಾನು ಮನೆಗೆ ಹೋಗಿ ನೋಡಿದರೆ, ಅಲ್ಲಿ 400 ಪೊಲೀಸರು ನಿಂತಿದ್ದರು. ಆಗ ನಮಗೆ ಪರ್ಯಾಯವಿರಲಿಲ್ಲ, ನಾವು ಶವದ ಅಂತ್ಯಸಂಸ್ಕಾರ ಮಾಡಿದೆವು; ಆದರೆ ಆ ದಿನ ಅಂತ್ಯಸಂಸ್ಕಾರದ ಖರ್ಚು ಯಾರು ಮಾಡಿದರು ? ಎನ್ನುವುದು ಇದುವರೆಗೂ ನಮಗೆ ತಿಳಿದಿಲ್ಲ.

ಸಂಪಾದಕೀಯ ನಿಲುವು

ಸಿಬಿಐ ಈ ಆರೋಪದ ತನಿಖೆ ನಡೆಸಿ ಸತ್ಯವನ್ನು ಬಹಿರಂಗಪಡಿಸಬೇಕು !