ಶಿಕ್ಷಣಕ್ಕಾಗಿ ವಿದೇಶಕ್ಕೆ ಹೋಗುವುದಾಗಿ ನಾಟಕವಾಡಿ ಮುಸ್ಲಿಂ ಯುವಕನೊಂದಿಗೆ ಪರಾರಿಯಾದ ಹಿಂದೂ ಯುವತಿ

  • ಸುಳ್ಯದಲ್ಲಿ ನಡೆದ ಘಟನೆ

  • ಬಸ್ ನಿರ್ವಾಹಕನ ಜಾಗರೂಕತೆಯಿಂದ ಯುವತಿಯ ಬಿಡುಗಡೆ

ಸುಳ್ಯ – ಇಲ್ಲಿನ ಕೊಲ್ಲಮೊಗ್ರು ಗ್ರಾಮದಲ್ಲಿ ಲವ್ ಜಿಹಾದ ಮೂಲಕ ಹಿಂದೂ ಯುವತಿಯನ್ನು ಓಡಿಸಿಕೊಂಡು ಹೋಗುವ ಮುಸಲ್ಮಾನ ಯುವಕನ ಷಡ್ಯಂತ್ರ ಬಸ್ ಚಾಲಕನ ಜಾಗರೂಕತೆಯಿಂದ ವಿಫಲವಾಯಿತು.

1. ಸವಣೂರಿನ ಕಾಲೇಜಿನಲ್ಲಿ ಶಿಕ್ಷಣ ಮುಗಿಸಿದ 18ರ ಹರೆಯದ ದೀಕ್ಷಾ ಮುಂದಿನ ಶಿಕ್ಷಣಕ್ಕಾಗಿ ವಿದೇಶಕ್ಕೆ ಹೋಗುವುದಾಗಿ ಪೋಷಕರಿಗೆ ಹೇಳಿದ್ದಳು. ಅವಳ ತಂದೆ-ತಾಯಿ ಅನಕ್ಷರಸ್ಥರಾಗಿದ್ದರಿಂದ ಅವರು ಅವಳ ಮಾತನ್ನು ನಂಬಿದರು.

2. ‘ನನ್ನ ಇಬ್ಬರು ಸ್ನೇಹಿತೆಯರು ಬೆಂಗಳೂರಿನಲ್ಲಿ ನೆಲೆಸಿದ್ದು, ಅವರು ನನ್ನನ್ನು ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಬಿಡಲು ಬರುತ್ತಿದ್ದಾರೆ’ ಎಂದು ಪೋಷಕರಿಗೆ ತಿಳಿಸಿದ್ದಳು. ಅದರಂತೆ, ವಿಮಾನ ನಿಲ್ದಾಣದಲ್ಲಿ ತನ್ನ ಸ್ನೇಹಿತೆಯರನ್ನು ಭೇಟಿಯಾದ ನಂತರ, ದೀಕ್ಷಾ ವಿಮಾನ ನಿಲ್ದಾಣದೊಳಗೆ ಹೋದಳು. ಆದರೆ ದೀಕ್ಷಾ ತನ್ನ ಸ್ನೇಹಿತೆಯರಿಗೆ ‘ನನ್ನ ತಂದೆ-ತಾಯಿ ಬದುಕಿಲ್ಲ’ ಎಂದು ಹೇಳಿ ಅವರಿಂದ ಆರ್ಥಿಕ ಸಹಾಯವನ್ನು ತೆಗೆದುಕೊಂಡಿದ್ದಳು ಎಂದೂ ಹೇಳಲಾಗುತ್ತಿದೆ.

3. ಸ್ವಲ್ಪ ಸಮಯದ ನಂತರ, ದೀಕ್ಷಾ ವಿಮಾನ ನಿಲ್ದಾಣದಿಂದ ಹೊರಬಂದು ಬಸ್ಸು ಹತ್ತಿದಳು. ಆ ಸಮಯದಲ್ಲಿ ಅವಳೊಂದಿಗೆ ಒಬ್ಬ ಮುಸ್ಲಿಂ ಯುವಕ ಇದ್ದನು. ಬಸ್ ಚಾಲಕನಿಗೆ ಈ ವಿಷಯದಲ್ಲಿ ಸಂದೇಹ ಬಂದಿತು. ಅವನು ದೀಕ್ಷಾಳ ಫೊಟೊ ತೆಗೆದು ಹಿಂದುತ್ವನಿಷ್ಠ ಸಂಘಟನೆಯ ಕಾರ್ಯಕರ್ತರಿಗೆ ಕಳುಹಿಸಿದನು. ಈ ಕಾರ್ಯಕರ್ತರು ಅದನ್ನು ವಾಟ್ಸ ಅಪ್ ಗುಂಪಿನಲ್ಲಿ ಪ್ರಸಾರ ಮಾಡಿದಾಗ ದೀಕ್ಷಾಳ ಗುರುತು ತಿಳಿದು ಬಂದಿದೆ. ನಂತರ ಅವಳ ಪೋಷಕರಿಗೆ ಈ ವಿಷಯವನ್ನು ತಿಳಿಸಿದಾಗ, ಪೋಷಕರು ಪೊಲೀಸ ಠಾಣೆಗೆ ತೆರಳಿ ಈ ಬಗ್ಗೆ ಮಾಹಿತಿ ನೀಡಿದರು.

4. ಪೊಲೀಸ ಸಬ್ ಇನ್ಸಪೆಕ್ಟರ ಕಾರ್ತಿಕ ಇವರು ಸುಳ್ಯದಿಂದ 550 ಕಿ.ಮೀ ದೂರದಲ್ಲಿರುವ ಬೆಂಗಳೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸುವಂತೆ ಸೂಚಿಸಿದರು. ಮತ್ತು ಅಲ್ಲಿ ದೂರು ದಾಖಲಾಗದಿದ್ದರೆ ಅವರು ತಾವಾಗಿ ದೂರು ದಾಖಲಿಸುವುದಾಗಿ ಭರವಸೆ ನೀಡಿದ್ದರು. ಬಳಿಕ ಬೆಂಗಳೂರಿಗೆ ತೆರಳಿದ ದೀಕ್ಷಾಳ ಪೋಷಕರು ಉಪ್ಪಾರಪೇಟೆ ಠಾಣೆಗೆ ದೂರು ನೀಡಿದಾಗ, ಕೂಡಲೇ ಪೊಲೀಸರು ಕ್ರಮ ಕೈಗೊಂಡು ದೀಕ್ಷಾಳನ್ನು ಪತ್ತೆ ಹಚ್ಚಿ ಅವಳನ್ನು ಪೋಷಕರಿಗೆ ಒಪ್ಪಿಸಿದರು.