Shimla Mosque Controversy : ಶಿಮ್ಲಾ (ಹಿಮಾಚಲಪ್ರದೇಶ) ಇಲ್ಲಿ ಅಕ್ರಮ ಮಸೀದಿ ನೆಲಸಮಗೊಳಿಸಲು ಹಿಂದೂಗಳಿಂದ ಪ್ರತಿಭಟನೆ !

ಶಿಮ್ಲಾ (ಹಿಮಾಚಲಪ್ರದೇಶ) – ನಗರದಲ್ಲಿನ ಸಂಜೌಲಿ ಪರಿಸರದಲ್ಲಿನ ಅಕ್ರಮ ಮಸೀದಿಯಿಂದ ಸ್ಥಳೀಯ ಜನರು ಒಗ್ಗಟ್ಟಿನಿಂದ ಅಲ್ಲಿಯ ಮಾರುಕಟ್ಟೆಯಲ್ಲಿ ನಿಷೇಧ ಪ್ರತಿಭಟನೆ ನಡೆಸಿದರು. ಆ ಸಮಯದಲ್ಲಿ ಅಲ್ಲಿ ಅಕ್ರಮ ಮಸೀದಿ ನೆಲಸಮ ಮಾಡಲು ಆಗ್ರಹಿಸಲಾಗಿತ್ತು. ಅವರು ಮಸೀದಿಯ ಎದುರು ಕುಳಿತು ಧರಣಿ ಪ್ರತಿಭಟನೆ ನಡೆಸಿದರು. ಆ ಸಮಯದಲ್ಲಿ ಜನರು ಹನುಮಾನ ಚಾಲಿಸಾದ ಪಠಣೆ ಮಾಡಿದರು ಮತ್ತು ಭಜನೆ ಕೂಡ ಹಾಡಿದರು. ಈ ಪ್ರಕರಣದ ಮಾಹಿತಿ ದೊರೆಯುತ್ತಲೇ ಪೊಲೀಸ ಅಧಿಕಾರಿ ಮತ್ತು ಜಿಲ್ಲಾಧಿಕಾರಿ ಘಟನಾ ಸ್ಥಳಕ್ಕೆ ತಲುಪಿದರು ಮತ್ತು ಅವರು ಜನರ ಜೊತೆಗೆ ಚರ್ಚೆ ನಡೆಸಿದರು. ದೊರೆತಿರುವ ಮಾಹಿತಿಯ ಪ್ರಕಾರ ಸಂಜೌಲಿಯಲ್ಲಿ ಒಂದು ಮಸೀದಿಯ ಮೇಲೆ ೩ ಅಂತಸ್ತು ಅಕ್ರಮವಾಗಿ ಕಟ್ಟಲಾಗಿದೆ. ಶಿಮ್ಲಾ ಮಹಾಪಾಲಿಕೆಯ ಆಯುಕ್ತ ಭೂಪೇಂದ್ರ ಅತ್ರಿ ಇವರು, ಇಲ್ಲಿ ಕೇವಲ ಒಂದು ಅಂತಸ್ತು ಕಟ್ಟಲು ಅನುಮತಿ ನೀಡಲಾಗಿತ್ತು. ಇತರ ಮೂರು ಅಂತಸ್ತು ಅಕ್ರಮವಾಗಿದೆ. ಈ ಪ್ರಕರಣದಲ್ಲಿ ಬೇಗನೆ ನ್ಯಾಯಾಲಯದಲ್ಲಿ ವಿಚಾರಣೆ ನಡೆದು ಕಾನೂನಿನ ಪ್ರಕಾರ ಅಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಮುಸಲ್ಮಾನರು ನಡೆಸಿರುವ ದಾಳಿಯ ವಿರುದ್ಧ ಪ್ರತಿಭಟನೆ

ಕೆಲವು ದಿನಗಳ ಹಿಂದೆ ಶಿಮ್ಲಾದ ಮಲ್ಯಾನ ಗ್ರಾಮದಲ್ಲಿ ಹಿಂದೂ ಮತ್ತು ಮುಸ್ಲಿಂ ನಡುವೆ ಜಗಳ ನಡೆದಿತ್ತು. ಆ ಸಮಯದಲ್ಲಿ ಮುಸಲ್ಮಾನ ಸಮುದಾಯದಲ್ಲಿನ ಓರ್ವ ವ್ಯಕ್ತಿಯು ಸ್ಥಳೀಯ ಅಂಗಡಿಯಾತ ಯಶಪಾಲ ಸಿಂಹ ಇವರ ಮೇಲೆ ದಾಳಿ ನಡೆಸಿದ್ದನು. ಈ ಆಕ್ರಮಣದಲ್ಲಿ ಯಶಪಾಲ ಸಿಂಹ ಇವರ ತಲೆಗೆ ಪೆಟ್ಟು ಬಿದ್ದಿತ್ತು ಮತ್ತು ಅವರ ತಲೆಗೆ ೧೪ ಹೊಲಿಗೆ ಹಾಕಲಾಗಿತ್ತು. ಮುಸಲ್ಮಾನರಿಂದ ಯಶಪಾಲ ಸಿಂಹ ಇವರ ಹತ್ಯೆಯ ಪ್ರಯತ್ನದ ಆರೋಪ ಮಾಡುತ್ತಾ ಸ್ಥಳೀಯ ಜನರು ಪ್ರತಿಭಟನೆ ನಡೆಸಿದರು. (ಬಹುಸಂಖ್ಯಾತ ಹಿಂದೂಗಳು ಅಲ್ಪಸಂಖ್ಯಾತ ಮುಸಲ್ಮಾನರಿಂದ ಪೆಟ್ಟು ತಿನ್ನುತ್ತಾರೆ. ಕಾಲದ ಪ್ರವಾಹದಲ್ಲಿ ಉಳಿಯುವುದಿದ್ದರೆ ಹಿಂದೂಗಳು ಸಂಘಟಿತರಾಗಬೇಕು ! – ಸಂಪಾದಕರು)

ಸಂಪಾದಕೀಯ ನಿಲುವು

ಇಂತಹ ಪ್ರತಿಭಟನೆ ನಡೆಸುವ ಪರಿಸ್ಥಿತಿ ಹಿಂದೂಗಳ ಮೇಲೆ ಏಕೆ ಬರುತ್ತದೆ ? ಅಕ್ರಮ ಮಸೀದಿ ಕಟ್ಟುತ್ತಿರುವಾಗ ಆಡಳಿತದವರು ಮಲಗಿದ್ದರೇ ?