ಭಾರತದ ಈ ಗ್ರಾಮದಲ್ಲಿ ಕಳೆದ ೪೦೦ ವರ್ಷಗಳಲ್ಲಿ ಒಂದೇ ಒಂದು ಬಲಾತ್ಕಾರವಿಲ್ಲ, ಯಾರು ಮಾಂಸಾಹಾರಿ ಇಲ್ಲ, ಸರಾಯಿ ಅಂಗಡಿ ಇಲ್ಲ ಹಾಗೂ ಮದ್ಯ ವ್ಯಸನಿಯೂ ಯಾರಿಲ್ಲ !

೧೭ ನೆಯ ಶತಮಾನದಲ್ಲಿ ಓರ್ವ ಸಂತರು ತಪಸ್ಸು ಮಾಡಿದ ನಂತರ ಗ್ರಾಮಸ್ಥರಿಂದ ಪಡೆದ ವಚನ

ಸಹಾರನಪುರ (ಉತ್ತರಪ್ರದೇಶ) – ಜಿಲ್ಲೆಯ ಮಿರಗಪುರ ಈ ಗ್ರಾಮ ‘ಏಷ್ಯಾ ಬುಕ್ ಆಫ್ ರೆಕಾರ್ಡ್’ನಲ್ಲಿ ಸ್ಥಾನ ಪಡೆದಿದೆ. ಸಹಾರನಪುರ ಗ್ರಾಮದಿಂದ ಕೇವಲ ೮ ಕಿಲೋಮೀಟರ್ ಅಂತರದಲ್ಲಿ ಈ ಗ್ರಾಮವಿದ್ದು ಇಲ್ಲಿ ತಲತಲಾಂತರದಿಂದ ಯಾರೂ ಕೂಡ ಮದ್ಯಪಾನ ಮಾಡಿಲ್ಲ. ಈ ಗ್ರಾಮದಲ್ಲಿ ಸಾರಾಯಿ ಮಾರಾಟದ ಒಂದು ಅಂಗಡೀಕೂಡ ಇಲ್ಲ. ವಿಶೇಷವೆಂದರೆ ಕಳೆದ ೪೦೦ ವರ್ಷಗಳಲ್ಲಿ ಇಲ್ಲಿ ಬಲಾತ್ಕಾರ ಕೂಡ ನಡೆದಿಲ್ಲ, ಕಿರುಕುಳದ ಘಟನೆ ಕೂಡ ನಡೆದಿಲ್ಲ. ಇಲ್ಲಿ ಎಲ್ಲರೂ ಸಸ್ಯಾಹಾರಿಗಳಾಗಿದ್ದಾರೆ. ಆದ್ದರಿಂದ ಕಾಳಿ ನದಿಯ ತೀರದಲ್ಲಿ ಇರುವ ಮಿರಗಪುರ ಗ್ರಾಮ ಇದು ದೇಶದಲ್ಲಿನ ಎಲ್ಲಕ್ಕಿಂತ ಪವಿತ್ರ ಎಂದು ನಂಬಲಾಗಿದೆ.

೧. ಈ ಗ್ರಾಮದ ಜನಸಂಖ್ಯೆ ೧೦ ಸಾವಿರ ಇದೆ. ಇಲ್ಲಿ ಈರುಳ್ಳಿ ಬೆಳ್ಳುಳ್ಳಿ ತಿನ್ನುವುದನ್ನು ಕೂಡ ನಿಷೇಧಿಸಿದ್ದಾರೆ, ಒಟ್ಟು ೨೬ ರೀತಿಯ ತಾಮಸಿಕ ಆಹಾರ ಸಂಪೂರ್ಣವಾಗಿ ನಿಷೇಧಿಸಿದ್ದಾರೆ.

೨. ಸಹಾರನಪುರ ಜಿಲ್ಲೆಯ ಆಡಳಿತದಿಂದ ಕೂಡ ಈ ಗ್ರಾಮ ‘ನಶೆ ಮುಕ್ತ ಗ್ರಾಮ’ ಎಂದು ಘೋಷಿಸಿದೆ.

೩. ವಿಶೇಷ ಎಂದರೆ, ಈ ಗ್ರಾಮದಲ್ಲಿನ ಹುಡುಗಿ ವಿವಾಹ ಮಾಡಿಕೊಂಡು ಬೇರೆ ಗ್ರಾಮಕ್ಕೆ ಹೋದರೆ, ಆಗ ಅವರ ವೈವಾಹಿಕ ಜೀವನದಲ್ಲಿ ಅಡಚಣೆ ಬರಬಾರದೆಂದು, ಅವರಿಗೆ ಗ್ರಾಮದ ಪ್ರತಿಜ್ಞೆಯಿಂದ ಮುಕ್ತಗೊಳಿಸಲಾಗುತ್ತದೆ, ಹೀಗೆ ಇದ್ದರೂ ಕೂಡ ಗ್ರಾಮಕ್ಕೆ ಬರುವ ಅಳಿಯ ಈ ವ್ರತವನ್ನು ಆಚರಿಸಲು ಬಾಧ್ಯನಾಗಿರುತ್ತಾನೆ ಮತ್ತು ಅವನು ಮಾಂಸಾಹಾರವನ್ನು ಶಾಶ್ವತವಾಗಿ ಬಿಡಬೇಕಾಗುತ್ತದೆ.

ಗುರು ಶಿಷ್ಯ ಪರಂಪರೆಗೆ ಏಕನಿಷ್ಠವಾಗಿರುವ ಗ್ರಾಮಸ್ಥರು !

ಗುರು ಶಿಷ್ಯ ಪರಂಪರೆ, ಇದು ಮಿರಗಪುರ ಗ್ರಾಮದ ಇನ್ನೊಂದು ವೈಶಿಷ್ಟ್ಯವಾಗಿದೆ. ಗ್ರಾಮದಲ್ಲಿನ ಪ್ರತಿಯೊಬ್ಬ ವ್ಯಕ್ತಿ ಇದನ್ನು ಪಾಲಿಸುತ್ತಾರೆ. ಗ್ರಾಮಸ್ಥರು, ‘ನಾವು ನಮ್ಮ ಜೀವನ ಗುರುಗಳ ಚರಣಗಳಲ್ಲಿ ಸಮರ್ಪಿಸಬೇಕು’ ಎಂದು ಹೇಳುತ್ತಾರೆ, ಇದೇ ಭಾವ ಗ್ರಾಮದಲ್ಲಿನ ಪ್ರತಿಯೊಬ್ಬ ವ್ಯಕ್ತಿಯ ಮನಸ್ಸಿನಲ್ಲಿ ಇರುತ್ತದೆ.

೪೦೦ ವರ್ಷಗಳ ಹಿಂದೆ ಓರ್ವ ಸಂತರು ತಪಸ್ಸು ಮಾಡಿದ ನಂತರ ಗ್ರಾಮದಲ್ಲಿನ ಸಮಸ್ಯೆಗಳು ಬಗೆಹರಿತು !

ಮಿರಗಪುರ ಗ್ರಾಮದ ಪ್ರವೇಶ ದ್ವಾರದಲ್ಲಿ ಬಾಬಾ ಪಕೀರದಾಸ್ ಇವರ ದೇವಸ್ಥಾನವಿದೆ. ದೇವಸ್ಥಾನದ ಮಹಂತ ಕಾಲುದಾಸ್ ಇವರು, ೧೭ ನೆಯ ಶತಮಾನದಲ್ಲಿ ರಾಜಸ್ಥಾನದ ಪುಷ್ಕರದಿಂದ ಸಿದ್ಧಪುರುಷ ಬಾಬಾ ಫಕೀರದಾಸ್ ಇವರು ಗ್ರಾಮದಲ್ಲಿ ಬಂದು ತಪಸ್ಸು ಮಾಡಿದ್ದರು. ಅವರು ಗ್ರಾಮಸ್ಥರ ತೊಂದರೆಗಳು ಅವರ ಆಧ್ಯಾತ್ಮಿಕ ಸಾಮರ್ಥದಿಂದ ದೂರಗೊಳಿಸಿದ್ದರು. ಅಲ್ಲಿಂದ ಹೋಗುವಾಗ ಅವರು ಗ್ರಾಮಸ್ಥರಿಂದ ನಶೆ ಮತ್ತು ಮಾಂಸಾಹಾರ ಸೇವಿಸದಿರುವ ವಚನ ತೆಗೆದುಕೊಂಡರು. ಅಲ್ಲಿಂದ ಈ ಪರಂಪರೆ ಪಾಲಿಸಲಾಗುತ್ತದೆ.

 

ಸಂಪಾದಕೀಯ ನಿಲುವು

ಆಧ್ಯಾತ್ಮಿಕ ಸಾಮರ್ಥ್ಯ ಹೇಗೆ ಇರುತ್ತದೆ ?, ಇದು ಈ ಉದಾಹರಣೆಯಿಂದ ಗಮನಕ್ಕೆ ಬರುತ್ತದೆ. ಶಾರೀರಿಕ ಅಥವಾ ಮಾನಸಿಕ ಸ್ತರದಲ್ಲಿ ಪ್ರಯತ್ನ ಮಾಡುವುದರ ಜೊತೆಗೆ ಆಧ್ಯಾತ್ಮಿಕ ಸ್ತರದಲ್ಲಿ ಪ್ರಯತ್ನವಾದರೆ, ಜನರು ಸಾಧನೆ ಆರಂಭಿಸಿದರೆ, ಆಗ ರಾಷ್ಟ್ರದ ಎಲ್ಲಾ ಸಮಸ್ಯೆಗಳಿಗೆ ಶಾಶ್ವತವಾಗಿ ಪರಿಹಾರವಾಗುವುದು !